ನಿನ್ನೆಯ ಹಿಮಚಿತ್ರಗಳು ಮತ್ತು ಒಂದು ಜರ್ಮನ್ ಕವನ ‘ಮೊಟ್ಟೆಯೊಳಗೆ’

Posted on January 28, 2012. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, Guenter Grass, Wurzburg | Tags: , , |

ನಿನ್ನೆ ಶುಕ್ರವಾರ ,ಜನವರಿ ೨೭ ರಂದು ಬೆಳಗ್ಗೆ ಅಪರೂಪಕ್ಕೆ ವ್ಯೂರ್ತ್ಸ್ ಬುರ್ಗಿನಲ್ಲಿ ಈಬಾರಿಯ ಚಳಿಗಾಲದ ಸಣ್ಣ ಪ್ರಮಾಣದ ಹಿಮದ ದರ್ಶನ ಆಯಿತು.ಅದರ ಕೆಲವು ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಿದ್ದೇನೆ.ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

ನೊಬೆಲ್ ಪ್ರಶಸ್ತಿ ಪಡೆದ ಜರ್ಮನ್ ಸಾಹಿತಿ  Guenter Grass (1927-)ನ ಒಂದು ಜರ್ಮನ್ ಕವನ ‘ಮೊಟ್ಟೆಯೊಳಗೆ ‘ -ಇದರ ಕೆಲವು ಸಾಲುಗಳನ್ನು ಕನ್ನಡಕ್ಕೆ ರೂಪಾಂತರಿಸಿ ಕೆಳಗೆ ಕೊಟ್ಟಿದ್ದೇನೆ.

ಮೊಟ್ಟೆಯೊಳಗೆ .

ನಾವು ಮೊಟ್ಟೆಯೊಳಗೆ ವಾಸಿಸುತ್ತಿದ್ದೇವೆ

ನಮ್ಮ ಸುತ್ತಲೂ ಚಿಪ್ಪಿನ ಗೋಡೆಗಳು

ಅದರ ಮೇಲೆಲ್ಲಾ ಬಣ್ಣ ಬಣ್ಣದ  ಕೊಳಕು ಚಿತ್ರಗಳು

ನಮ್ಮ ಶತ್ರುಗಳ ಹೆಸರುಗಳು

ನಮಗೆ ಹೊರಗಿನಿಂದ ಕಾವು ಕೊಡುತ್ತಿದ್ದಾರೆ.

ನಮಗೆ ಕಾವು ಕೊಡುವವರು

ನಮ್ಮ ಪೆನ್ಸಿಲ್ ಗಳಿಗೂ ಕಾವು ಕೊಡುತ್ತಿದ್ದಾರೆ .

ಒಮ್ಮೆ ನಾವು ಮೊಟ್ಟೆಯೊಳಗಿಂದ ಬಿಡುಗಡೆಯಾದರೆ ಸಾಕು

ನಾವೂ ಚಿತ್ರ ಬಿಡಿಸುತ್ತೇವೆ ಕೂಡಲೇ

ನಮಗೆ ಕಾವುಕೊಡುವವರ ನಿಜವಾದ ಚಿತ್ರಗಳನ್ನು.

ನಮ್ಮ ತಲೆಯ ಮೇಲೆ ಒಂದು ಮಾಡು ಇದೆ

ಪಾಪದ ಪಿಳ್ಳೆಗಳು

ಬಹುಭಾಷೆಯ ಭ್ರೂಣಗಳು

ಇಡಿ ದಿನ ಚಟಪಟಗುಟ್ಟುತ್ತವೆ

ತಮ್ಮ ಕನಸುಗಳನ್ನು ಚರ್ಚಿಸುತ್ತವೆ.

ಏನಾಗಬಹುದು ಒಂದುವೇಳೆ ನಮ್ಮನ್ನು ಮರಿಮಾಡದಿದ್ದರೆ  ?

ಈ ಚಿಪ್ಪುಗಳು ಒಡೆಯದಿದ್ದರೆ ?

ನಮ್ಮ ದಿಗಂತ ಇಷ್ಟೇ ಆಗಿ

ನಮ್ಮ ಮೇಲೆ ಗೀಚಿದ್ದು ಮಾತ್ರ ಸದಾ ಉಳಿದುಬಿಟ್ಟರೆ ?

ಆಸೆ ಹೊಂದಿದ್ದೇವೆ ನಾವು, ಕಾವು ಪಡೆದು ಹೊರಬರುತ್ತೇವೆ ಎಂದು.

ನಾವು ಕಾವು ಪಡೆದು ಮರಿಯಾಗುವ ಮಾತಾಡಿದರೂ

ಒಂದು ಭಯ ಇದ್ದೇ ಇದೆ  ನಮಗೆ ಸದಾ

ನಮ್ಮ ಚಿಪ್ಪಿನ  ಹೊರಗಿರುವ ಕೆಲಜನ  ತಮ್ಮ ಹಸಿವೆ ತೀರಿಸಲು

ಒಡೆದು ನಮ್ಮನ್ನು ಕಾವಲಿಯಲ್ಲಿ ಹಾಕಿ ಕಾಯಿಸಬಹುದು,ಚಿಟಿಕೆ ಉಪ್ಪು ಸೇರಿಸಿ.

ಏನು ಮಾಡಬಲ್ಲೆವು ನಾವು ಆಗ ,ಮೊಟ್ಟೆಯೊಳಗೆ ಇರುವ ನನ್ನ ಅಣ್ಣಂದಿರೇ ?


Read Full Post | Make a Comment ( None so far )

Recently on ಬಿ ಎ ವಿವೇಕ ರೈ...

ಜರ್ಮನಿಯ ಎರಡು ಊರುಗಳ ಹೆಸರುಗಳ ಕತೆ :’ ಎಲ್ಲಿದ್ದೀಯೆ ……….?’

Posted on January 24, 2012. Filed under: ಇಂಡಾಲಜಿ, ಜರ್ಮನಿ, ಜರ್ಮನ್ ಕತೆ, ಜಾನಪದ, Main river | Tags: , , , , , , |

ಅತ್ರಿ ಬುಕ್ ಸೆಂಟರ್ ಮತ್ತು ಅಶೋಕವರ್ಧನ: ಪುಸ್ತಕ ಮತ್ತು ಸಂಸ್ಕೃತಿ

Posted on January 21, 2012. Filed under: ಜಿಟಿಎನ್, ನಿಸರ್ಗ | Tags: , , , |

M.Govinda Pai:A Kannada Scholar-Poet ,an Indian Image of Universal Religion

Posted on January 19, 2012. Filed under: Kannada Literature, Religion | Tags: , , , , , , , , , , , , |

ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ : ಕಟ್ಟ್ ನಿಘಂಟುಗಳ ಕೋಲ ನೇಮಗಳಲ್ಲಿ ಪದಭೂತಗಳ ನಲಿಕೆ

Posted on January 16, 2012. Filed under: ತುಳು ಪಾಡ್ದನ, ತ್ಯೂಬಿಂಗನ್, ವ್ಯೂರ್ತ್ಸ್ ಬುರ್ಗ್, Tuebingen University | Tags: , , , , , , , , , , |

ಮೂವರು ಕಾಲಜ್ಞಾನಿ -ರಾಜರ ಮೆರವಣಿಗೆಯಲ್ಲಿ :ಐತಿಹ್ಯ ಪುರಾಣ ಆಚರಣೆ ರಂಗಭೂಮಿಗಳ ಪಯಣ

Posted on January 10, 2012. Filed under: ಜರ್ಮನಿ, ಮೂವರು ರಾಜರು, Three Kings, Wurzburg | Tags: , , , , , , , , , , |

Vachanas of Jedara Dasimayya ,a Kannada saint poet.

Posted on January 7, 2012. Filed under: Jedara Dasimayya, Kannada Literature, Vachana Literature | Tags: , , , , , , , , |

ಮೊನ್ನೆ ಬೆಳಗಿದ ಸೂರ್ಯ ,ಇಂದು ಸುರಿದ ಮಳೆ :ವ್ಯೂರ್ತ್ಸ್ ಬುರ್ಗ್ ಚಿತ್ರಗಳು

Posted on January 5, 2012. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, Wurzburg | Tags: , , , , , , |

ಮೂರು ಜರ್ಮನ್ ಕವನಗಳು -ಬ್ರೆಕ್ಟ್ ನವು ಎರಡು ಮತ್ತು ಬ್ರೆಕ್ಟ್ ಕುರಿತು ಒಂದು .

Posted on January 2, 2012. Filed under: ಜರ್ಮನಿ, ಜರ್ಮನ್ ಕವಿ, German Literature | Tags: , , , , , |

ಮೂಡುವನು ರವಿ ಮೂಡುವನು ,ಮೋಡಗಳೊಡನೆ ಆಟವಾಡುವನು :೨೦೧೧ರ ಕೊನೆಯ ಚಿತ್ರಗಳು

Posted on December 31, 2011. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, ಹೊಸ ವರ್ಷ | Tags: , , , , , , , |

ಕುವೆಂಪು ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ

Posted on December 29, 2011. Filed under: ಕನ್ನಡ ಸಾಹಿತ್ಯ, ಕುವೆಂಪು, Kannada Literature | Tags: , , , , , , |

Liked it here?
Why not try sites on the blogroll...

Follow

Get every new post delivered to your Inbox.

Join 53 other followers