ಮನೆಯಿಂದ ಮನೆಗೆ : ಮುಳುಗುವ ಸೂರ್ಯನ ಪಯಣದ ಚಿತ್ರಗಳು

Posted on ಫೆಬ್ರವರಿ 13, 2012. Filed under: ಕಡಲು, ಸೂರ್ಯ, Sea, Sun | ಟ್ಯಾಗ್ ಗಳು:, , , , |


ಜರ್ಮನಿಯ ವ್ಯೂರ್ತ್ಸ್ ಬುರ್ಗಿನ ಸೂರ್ಯನನ್ನು ಹಿಂಬಾಲಿಸುತ್ತಾ ಮೈನಸ್ ಹದಿನೈದು ಡಿಗ್ರಿಯ ಚಳಿಯ ಮನೆಯಿಂದ ಪ್ಲಸ್ ಮೂವತ್ತು ಡಿಗ್ರಿಯ ಸೆಕೆಯ ಮನೆಗೆ ಬಂದ ನನಗೆ ನಿನ್ನೆ(ಫೆಬ್ರವರಿ ೧೨ ) ಪಣಂಬೂರಿನ ಕಡಲತಡಿಯಲ್ಲಿ ಸಲ್ಲಾಪಕ್ಕೆ ದೊರೆತವನು ಬೆಳಗುವ ಮುಳುಗುವ ಸೂರ್ಯ.ಅವನು ಕೆ.ಎಸ.ನರಸಿಂಹಸ್ವಾಮಿ ಅವರ ‘ಮನೆಯಿಂದ ಮನೆಗೆ ‘ಕವನದ ಸಾಲುಗಳನ್ನು ನೆನಪುಮಾಡಿಕೊಳ್ಳುತ್ತಲೇ ಆ ಕವನದ ಕೊನೆಯ ಸಾಲುಗಳು ತನಗೆ ಇನ್ನೂ ನಿಜವಾಗಿಲ್ಲ ಎಂದು ಪರಿತಪಿಸುತ್ತಿದ್ದ.
” ಮನೆಯಿಂದ ಮನೆಗೆ , ಹೊರಮನೆಯಿಂದ ಹೊರಮನೆಗೆ
ಮೊದಲಮನೆಯಿಂದ
ಆದರವಿರದ ,ಕದವಿರದ ,ಹೆಸರಿರದ ಇನ್ನೊಂದು ಮನೆಗೆ
ಹೊಸದು ಹಳೆಯದು ಎಲ್ಲ ಯಾತ್ರೆಗೆ ಹೊರಟಿದ್ದೇವೆ ”
“ಅದೇ ಕಡೆಯ ಮನೆ”
ನಾನು ಅವನಿಗೆ ಸಾಂತ್ವನ ಹೇಳಿದೆ : ” ನೀನು ಏಕಾಂಗಿ ಅಲ್ಲ.ನಾನು ಜೊತೆಗಿರುತ್ತೇನೆ ನಿನ್ನ ಪಯಣದಲ್ಲಿ -ಮರಗಟ್ಟುವ ಚಳಿಯಲ್ಲೂ ರಣಕಟ್ಟುವ ಸೆಕೆಯಲ್ಲೂ .ಕೆ ಎಸ ನ ಕವನದ ಕೊನೆಯ ಸಾಲೇ ನಮಗೆ ಸದಾ ಸಾಂತ್ವನ ”
‘ ಬಾಂದಳದ ತಾರೆಗಳ ಓರೆಗಣ್ಣಿನ ಕೆಳಗೆ ಆಗಾಗ ಬೀಸುವುದು ಬಯಲಗಾಳಿ ‘
ಸೂರ್ಯನು ಮನೆಗೆ ಹೋಗುತ್ತಿದ್ದ ಪಯಣದ ಕ್ಷಣ ಕ್ಷಣದ ಚಿತ್ರಗಳನ್ನು ,ನಿನ್ನೆ ನಾನು ತೆರೆಗಳ ನಡುವೆ ಸಾಗುತ್ತಾ ತೆಗೆದವುಗಳನ್ನು ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ.ಅವುಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

2 Responses to “ಮನೆಯಿಂದ ಮನೆಗೆ : ಮುಳುಗುವ ಸೂರ್ಯನ ಪಯಣದ ಚಿತ್ರಗಳು”

RSS Feed for ಬಿ ಎ ವಿವೇಕ ರೈ Comments RSS Feed

ಪ್ರೀತಿಯ ಸರ್, ನಿಮ್ಮ ಕಾಮೆರಾ ಕಣ್ಣು ಅದ್ಭುತ! ಮುಳುಗುತ್ತಿರುವ ಸೂರ್ಯ ಮತ್ತೆ ಹುಟ್ಟಿ ಬರುತ್ತಾನೆ ಖಂಡಿತ! ಮುಳುಗುತ್ತಿರುವ ಬದುಕು, ಬಿರುಕು ಬಿಟ್ಟಿರುವ ಪಾತ್ರೆ, ತಳವೊಡೆದ ದೋಣಿ, ಮತ್ತೆ ಮತ್ತೆ ಯಾಕೋ ಏನೋ ನೆನಪಾಗುತ್ತಿದೆ. ಬೆನ್ನು ಬಿಡದ ಬೇತಾಳನಂತೆ ಈ ನೆನಪುಗಳು!

ಪ್ರಿಯ ಪ್ರೊ.ಲಕ್ಷ್ಮೀನಾರಾಯಣ ಭಟ್ ,ತುಂಬಾ ದಾರ್ಶನಿಕ ಸಾಲುಗಳು ನಿಮ್ಮವು.ಒಂದು ನೋಟ ನಮ್ಮ ಬದುಕಿನ ಒಳಹೊಕ್ಕು ನಮ್ಮನ್ನು ಯೋಚಿಸುವಂತೆ ಮಾಡುವುದೇ ನಿಜವಾದ ಸಂವೇದನೆ.ನಮಸ್ಕಾರ.


Where's The Comment Form?

Liked it here?
Why not try sites on the blogroll...

%d bloggers like this: