Main and Rain today in Wurzburg-ಮಾಯಿನ್ ಮತ್ತು ಮಳೆ :ಇವತ್ತು ವ್ಯೂರ್ತ್ಸ್ ಬುರ್ಗಿನಲ್ಲಿ

Posted on December 4, 2011. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, Main river | Tags: , , , |


ಇವತ್ತು ಭಾನುವಾರ ,ದಶಂಬರ ನಾಲ್ಕು- ನಮ್ಮಲ್ಲಿ ವ್ಯೂರ್ತ್ಸ್ ಬುರ್ಗಿನಲ್ಲಿ  ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ.ರುಮರುಮನೆ ಬೀಸುವ ಚಳಿಗಾಳಿ.ಹನಿಹನಿ ಮಳೆ .ಮಧ್ಯಾಹ್ನ ಜೋರು ಮಳೆ ಬರಬಹುದು ಎಂದು ಹವಾಮಾನ ವರದಿ ಹೇಳುತ್ತಿತ್ತು.ಅದಕ್ಕಿಂತ ಮೊದಲೇ ಮಾಯಿನ್ ನದಿಯ ದಂಡೆಯಲ್ಲಿ,ಅದರ ಅತಿ ಹಳೆಯ ಸೇತುವೆ ಅಲ್ತೆ ಮಾಯಿನ್ ಬ್ರೂಕೆಯ ಮೇಲೆ, ಮತ್ತೆ ಅಲ್ಲಿಂದ ಕೆಳಕ್ಕೆ ಇಳಿದು ಭಾನುವಾರದ ಸಂತೆಕಟ್ಟೆಯ ಸುತ್ತ- ಒಂದು ಸುತ್ತು ಬಂದು ,’ತಣ್ಣನೆಯ ಗಾಳಿ ಸೋಂಕಿದೊಡಂ ನೆನೆವುದೆನ್ನ ಮನಂ’ ಎಂಬಂತೆ ತಿರುಗಾಟ ಹೊರಟೆ.ಮಾಯಿನ್ ನದಿಯ ಮೇಲ್ಗಡೆ ಆಕಾಶದಲ್ಲಿ ಹಕ್ಕಿಗಳ ಹಿಂಡು ಚಳಿಮಳೆಯ ಭಯ ಇಲ್ಲದೆ ಸುತ್ತಾಡುವ ನೋಟವನ್ನು ಮೊದಲು ನನ್ನ ಕ್ಯಾಮರದಲ್ಲಿ ಸೆರೆ ಹಿಡಿದೆ.ಮತ್ತೆ ಆಕಾಶದಲ್ಲಿ  ಮೋಡ ಕವಿದ ವರ್ಣಚಿತ್ರ  ಮತ್ತು ಅದರ ಮರೆಯಿಂದಲೇ ಅವುಗಳೊಡನೆ ನೆರಳು ಬೆಳಕಿನ ಆಟ ಆಡುವ ರವಿಯನ್ನು ಕಂಡೆ.ಮಾಯಿನ್ ನದಿಯ ದಂಡೆಯಲ್ಲಿ ಚಳಿಗೆ ನಡುಗುತ್ತಾ ಸಾಗಿದಾಗ ಹನಿಮಳೆ ಜೋರಾಯಿತು.ನಾನು ಒದ್ದೆಯಾದಂತೆಲ್ಲ ಅವಸರ ಅವಸರವಾಗಿ ನದಿಯ ನೀರು ,ಹರಿಯುವ ಧುಮುಕುವ ಆಟವಾಡುವ ನರ್ತಿಸುವ ದೃಶ್ಯಗಳನ್ನು ಕ್ಯಾಮರಾ ಕಣ್ಣಲ್ಲಿ ತುಂಬಿಕೊಂಡೆ.ಒಣಗಿದ ಪೊದೆಗಳ ಪರದೆಯ ಮೂಲಕ ನೀರಲ್ಲಿ ಈಜಾಡುವ  ಹಕ್ಕಿಗಳು,ಕಲ್ಲಿನ ದಂಡೆಯ ತಂಗುದಾಣದಿಂದ ನೀರಿಗೆ ಹೊರಳುವ ಹಕ್ಕಿಗಳು -ಹೀಗೆ ನೋಡುತ್ತಾ ಕ್ಲಿಕ್ಕಿಸುತ್ತಾ ಇರುವಾಗಲೇ ,ದಪ್ಪ ದಪ್ಪ ಹನಿಗಳು ಹೊಡೆಯಲು ಸುರುವಾಗಿ ನಾನು ಹೊಳೆಯ ಹೊರಗೆ ಈಜುವ ಹಕ್ಕಿಯಂತಾದೆ.ಆದರೂ ಒದ್ದೆ ಕೆಮರಾ ಹಿಡಿದುಕೊಂಡು ಮಳೆಯ ದೃಶ್ಯಗಳನ್ನು ಬರಸೆಳೆದುಕೊಂಡು ರಸ್ತೆಗೆ ಬಂದಾಗ ,ಮಳೆಯಿಂದ ಆಶ್ರಯ ಪಡೆಯಲು ಓಡುವವರು ಮಿಂಚಿಹೋದರು.ಸಿಕ್ಕಿದಷ್ಟನ್ನು ಗಬಗಬನೆ ಕೆಮರಾಕ್ಕೆ ತಿನ್ನಿಸುತ್ತಾ ,ನನ್ನ ವಾಸಕ್ಕೆ ಹಿಂದಿರುಗುವಷ್ಟರಲ್ಲಿ ಮಳೆ ನಿಂತುಹೋಗಿತ್ತು.ಚಳಿಗಾಲದ ಮಳೆಯ ತುಂತುರುಹನಿಗಳು ಸುಂದರ ಆಲಿಕಲ್ಲುಗಳಾಗಿ  ಇಲ್ಲಿ ಚೆಲ್ಲಿಕೊಂಡಿವೆ.

ಇವನ್ನು ದೊಡ್ಡದಾಗಿ ಕಾಣಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “Main and Rain today in Wurzburg-ಮಾಯಿನ್ ಮತ್ತು ಮಳೆ :ಇವತ್ತು ವ್ಯೂರ್ತ್ಸ್ ಬುರ್ಗಿನಲ್ಲಿ”

RSS Feed for ಬಿ ಎ ವಿವೇಕ ರೈ Comments RSS Feed

ಸರ್, ನಮಸ್ಕಾರ.

ಚಿತ್ರಗಳು ತುಂಬ ಸುಂದರವಾಗಿವೆ. ಕಪ್ಪುಬಿಳುಪಿನ ಚಿತ್ರದಂತೆ ಕಾಣುತ್ತಿವೆ. ನಿಮ್ಮ ನಾಡಿನಲ್ಲೂ ಅಕಾಲಿಕ ಮಳೆ ಬರುತ್ತಿದೆ. ಚಳಿ ಶುರುವಾಗಿದೆ. ನಿಮ್ಮ ನಾಡಿನವರಿಗೆ ಜರ್ಮನ್ ಚಿತ್ರಣವನ್ನು ನೀಡಿದ್ದಕ್ಕೆ ನನ್ನಿ.

ಶಶಿಕುಮಾರ್ ,ಥ್ಯಾಂಕ್ಸ್ ನಿಮ್ಮ ನಲ್ನುಡಿಗೆ ಮತ್ತು ನನ್ನ ಬ್ಲಾಗನ್ನು ನಿಮ್ಮ ಸಂಪರ್ಕ ಕೊಂಡಿಯೊಂದಿಗೆ ಜೋಡಿಸಿದ್ದಕ್ಕೆ ಕೂಡಾ.


Where's The Comment Form?

Liked it here?
Why not try sites on the blogroll...

%d bloggers like this: