Walnut,Peanut ,Cashew nut ,Coconut are not ‘Nuts’ ,Strawberry is ‘Nut’!

Posted on ಡಿಸೆಂಬರ್ 2, 2011. Filed under: ಜರ್ಮನಿ, Nuts | ಟ್ಯಾಗ್ ಗಳು:, , , , |


ನಮ್ಮ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ವಿದೇಶಿ ವಿಜ್ಞಾನಿಗಳ ಕೂಟದ ಈಬಾರಿಯ ಸಮ್ಮಿಲನ -ನವಂಬರ ೨೩-ದಲ್ಲಿ ನಮ್ಮ ಸಂಘಟನೆಯ ಕ್ರಿಯಾಶೀಲ ಸಂಯೋಜಕಿಯರಲ್ಲಿ ಒಬ್ಬರಾದ ಡಾ.ಅಂಗೆಲಿಕಾ  ಶಾರ್ತ್ಲ್ ( Angelika Schartl) ಪ್ರಸ್ತುತ ಪಡಿಸಿದ ಪ್ರಾಯೋಗಿಕ  ಉಪನ್ಯಾಸ : ‘Nuts……and not nuts.’ ಡಾ.ಅಂಗೆಲಿಕಾ ಸಸ್ಯವಿಜ್ಞಾನದಲ್ಲಿ ಮಾಸ್ಟರ್ ಮತ್ತು ಡಾಕ್ಟರೇಟ್ ಪದವಿ ಹೊಂದಿದ್ದು, ಇಲ್ಲಿನ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ   ತೋಟಗಾರಿಕಾ ಇಲಾಖೆಯಲ್ಲಿ ವಿಜ್ಞಾನಿಯಾಗಿ  ಕಾರ್ಯ ನಿರ್ವಹಿಸುತ್ತಿದ್ದಾರೆ.ತೋಟದ ಗಿಡ,ಹೂ,ಹಣ್ಣು,ಕಾಯಿ ಮುಂತಾದವುಗಳ ನಿರ್ವಹಣೆ ,ಸಂಶೋಧನೆಗಳನ್ನು ಉತ್ಸಾಹ ಮತ್ತು ಆಸಕ್ತಿಯಿಂದ ನಡೆಸುತ್ತಿದ್ದಾರೆ.

ಮೊನ್ನೆಯ ಅವರ ಉಪನ್ಯಾಸದಲ್ಲಿ ವಿಷಯಮಂಡನೆಯ ಜೊತೆಗೆ ಪರದೆಯ ಮೇಲೆ ಅವುಗಳಿಗೆ ಸಂಬಂಧಪಟ್ಟ  ದೃಶ್ಯಗಳನ್ನು ಪ್ರದರ್ಶಿಸುವುದರೊಂದಿಗೆ ,ಸುಮಾರು ಇಪ್ಪತ್ತರಷ್ಟು Nuts ನಾಮಾಂಕಿತಗಳನ್ನು ಚೀಲಗಳಲ್ಲಿ ತುಂಬಿ ನಮಗೆ ತೋರಿಸಲು ತಂದಿದ್ದರು.ಮೊದಲು ಅವುಗಳನ್ನು ಒಡೆದು ,ಸೀಳಿ ಅದರ ಒಳ ಮತ್ತು ಹೊರ ಮೈಗಳನ್ನು ತೋರಿಸಿ ,ಬಳಿಕ ಅವುಗಳನ್ನು  ಮೈಕ್ರೋಸ್ಕೊಪಿನ ಮೂಲಕ ಪರದೆಯ ಮೇಲೆ ಸೂಕ್ಷ್ಮವಾಗಿ  ಪ್ರದರ್ಶಿಸಿದರು. ಒಂದೊಂದು  Nut ನ ವಿವರ ಮುಗಿದೊಡನೆಯೇ ಅದರ ಹೊರಮೈ ಮತ್ತು ಒಳಮೈ ನೋಡಲು ಮತ್ತು ರುಚಿ ನೋಡಲು   ನಮಗೆ ದೊರೆಯುತ್ತಿದ್ದದ್ದು  ಒಂದು ಮುಖ್ಯ ಆಕರ್ಷಣೆಯಾಗಿತ್ತು.ಎಲ್ಲರೂ ಅವುಗಳನ್ನು  ಬಾಯಿಯಲ್ಲಿ ಹಾಕಿಕೊಂಡು ಕಟಕಟನೆ ಕುಟುಂ ಕುಟುಂ ಎಂದು  ಕಡಿಯುತ್ತಾ ಉಪನ್ಯಾಸದ ವಿಷಯಗಳನ್ನು ಬಾಯ್ಗತ ಮಾಡಿಕೊಳ್ಳುತ್ತಿದ್ದರು.

ಕಾಯಿ,ಬೀಜ,ಕಾಳು,ತಿರುಳು- ಹೀಗೆ ನಾನಾ ಹೆಸರುಗಳಲ್ಲಿ ಕನ್ನಡದಲ್ಲಿ Nuts  ಎನ್ನುವುದು ಬಳಕೆಯಾಗುತ್ತಿದೆ.ಕಡಲೆಕಾಯಿ,ತೆಂಗಿನಕಾಯಿ,ಗೇರುಬೀಜ (ಗೋಡಂಬಿ ),ಕಡಲೆ ಬೀಜ, ನೆಲಕಡಲೆ ,ಬಟಾಣಿ,ಬಾದಾಮಿ,ಆಕ್ರೋಡು ,ಪಿಸ್ತಾ – ಹೀಗೆ ಅನೇಕ ಬಗೆಯವು Nuts  ವ್ಯಾಪ್ತಿಯಲ್ಲಿ ಸೇರುತ್ತವೆ.ಯಾವುದೇ ಅಂಗಡಿಗೆ ಹೋಗಿ Nuts ಎಂದರೆ ಇಂತಹ ಅನೇಕ ಬಗೆಗಳು ಕೊಳ್ಳಲು ಮತ್ತು  ಕಡಿಯಲು ಸಿಗುತ್ತವೆ.

ಆದರೆ ಇವುಗಳಲ್ಲಿ ಹೆಚ್ಚಿನವು ,Nuts  ಅಲ್ಲ ಎಂದು ಅಂಗೆಲಿಕಾ ಹೇಳಿದಾಗ ಅವುಗಳನ್ನು ನಾಲಗೆಗಳ ಮೂಲಕ ಪರೀಕ್ಷೆ ಮಾಡುತ್ತಿದ್ದ   ನಾವು ಒಂದು ಕ್ಷಣ ನಮ್ಮ ಬಾಯಿಯ ಕೆಲಸಕ್ಕೆ ವಿರಾಮಕೊಟ್ಟು ಅವರತ್ತ ನೋಡಿದೆವು.ಸಸ್ಯವಿಜ್ಞಾನದ  ಪ್ರಯೋಗಗಳನ್ನು ಆಧರಿಸಿ  ಈ   Nuts ನ  ಸಸ್ಯ,ಹೂವು,ಕಾಯಿ,ಬೀಜ,ತೊಗಟೆ ,ಒಳ ಪದರುಗಳು,ಹಣ್ಣು ,ಸಿಪ್ಪೆ -ಹೀಗೆ ಎಲ್ಲವನ್ನೂ ಬಿಡಿಸಿ ಬಿಡಿಸಿ ಕೊನೆಗೂ ಅಂಗೆಲಿಕಾ ಹೇಳಿದ್ದು ಇವು ಯಾವುವೂ ಸಸ್ಯವಿಜ್ಞಾನದ ಪರಿಭಾಷೆಯಲ್ಲಿ  Nuts  ಅಲ್ಲ ಎಂದು.ಇವುಗಳಲ್ಲಿ ಹೆಚ್ಚಿನವು ಅಡುಗೆಯ ಪರಿಭಾಷೆಯಲ್ಲಿ Culinary Nuts  ಎಂದು.ಇತ್ತೀಚೆಗಿನವರೆಗೂ Nuts  ಎಂದೇ ಭಾವಿಸಲಾಗಿದ್ದ  Walnut ಇದರ ಪೊರೆಯು  ಹೂವಿನ ಅಂಡಾಶಯದಿಂದ ಬೆಳೆಯುವುದಿಲ್ಲ ಎಂದು ಎರಡು ವರ್ಷಗಳ ಹಿಂದೆ ಸಂಶೋಧಕರೊಬ್ಬರು ಕಂಡುಹಿಡಿದ ವಿಷಯ ತಿಳಿಸಿದರು.

ಮತ್ತೆ ಯಾವುವೆಲ್ಲ Nuts ಆಗುತ್ತವೆ ಎಂದು ಅಂಗೆಲಿಕಾ ತೋರಿಸಿದವುಗಳಲ್ಲಿ ನಮಗೆ ಆಶ್ಚರ್ಯ ಉಂಟುಮಾಡಿದ್ದು  ಸ್ಟ್ರಾಬೆರಿ .ನಾವು ಹಣ್ಣು ಎಂದೇ ಅಂಗಡಿಗಳಿಂದ ಕೊಳ್ಳುವ ಮತ್ತು ಬೇರೆ ಬೇರೆ ರೂಪಗಳಲ್ಲಿ ತಿನ್ನುವ  ಸ್ಟ್ರಾಬೆರಿ ಹಣ್ಣು -ಅದು Nut  ಎಂದ ಮೇಲೆ ,ನಾವು ಸ್ಟ್ರಾಬೆರಿ ಯನ್ನು ಮತ್ತೆ ತಿಂದೆವು -ಹಣ್ಣನ್ನು ಕಾಯಿಯಂತೆ !

‘ಎಲ್ಲಾ ಬೀಜ ಒಳಗೆ, ಗೇರು ಬೀಜ ಹೊರಗೆ’ ಎನ್ನುವ ಗಾದೆಮಾತನ್ನು ನಾವು ಚಿಕ್ಕಂದಿನಿಂದ ಕೇಳಿದ್ದೆವು.ಗೇರು ಹಣ್ಣು-ಬೀಜ (ಗೋಡಂಬಿ) ತನ್ನ ಆಕಾರದಿಂದ ಕುತೂಹಲ ಉಂಟುಮಾಡುತ್ತದೆ.ಈಗ ಎಲ್ಲ ಬೀಜ ,ಕಾಯಿ,ಕಾಳು,ಧಾನ್ಯಗಳೂ ವಿಚಿತ್ರ ಅನ್ನಿಸತೊಡಗಿದವು .ಹೂವು ಚಿರುಟಿಹೋಗಿ ,ಕಾಯಿ ಆಗುತ್ತದೆ ಎಂದಾಗ ತಾಯಿ ಎಲ್ಲಿ ಮತ್ತು ಮಗು ಎಲ್ಲಿ ಎನ್ನುವ ಗೊಂದಲ.’ಬೀಜ ವೃಕ್ಷ ನ್ಯಾಯ ‘ ದಂತೆ ಯಾವುದು ಮೊದಲು ಎನ್ನುವ ಜಿಜ್ಞಾಸೆ  ನಮ್ಮನ್ನು ದಾರ್ಶನಿಕತೆಯ ಕಡೆಗೆ ಕೊಂಡೊಯ್ಯಬಲ್ಲುದು.

ಎಲ್ಲರೂ ಹಣ್ಣು-ಕಾಯಿ-ಬೀಜಗಳನ್ನು ಬಾಯಿಯಲ್ಲಿ ಮತ್ತು ಮನಸ್ಸಿನಲ್ಲಿ ಮೆಲುಕು ಹಾಕುತ್ತಿದ್ದಾಗ ರೋಮಾನಿಯಾದ ಸಂಶೋಧಕ ದಂಪತಿಗಳು -ಒಯನ ಕುರ್ತೆಫ್ ಮತ್ತು ವಲೆಂತಿನ್ ಕುರ್ತೆಫ್  – ಅವರ  ಒಂದು ವರ್ಷದ ಪುಟಾಣಿ ಬೋತೆಜ್ ಲುಕ  ,ಆಮ್ಮ ಅಪ್ಪನನ್ನು ಬಿಟ್ಟು ನನ್ನ ಮಡಿಲಲ್ಲಿ ಕುಳಿತುಕೊಂಡು ಸ್ಟ್ರಾಬೆರಿ  ಬಾಯಿಗೆ ಹಾಕಲು ತೊಡಗಿದ.ನಾಳೆ ಇವನು ದೊಡ್ಡವನಾದ ಮೇಲೆ ಇನ್ನು ಏನು ಸಂಶೋಧನೆ ಮಾಡಿ ಏನೇನಕ್ಕೆ ಯಾವ  ಯಾವ ಹೆಸರು ಕೊಡುತ್ತಾನೋ ಎನ್ನುವ ಕುತೂಹಲ ನಮ್ಮದು.ಯಾರನ್ನೂ Nut  ಎಂದು ಕರೆಯದಿದ್ದರೆ ಸಾಕು!

ಚಿತ್ರಗಳನ್ನು ದೊಡ್ಡಪ್ರಮಾಣದಲ್ಲಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “Walnut,Peanut ,Cashew nut ,Coconut are not ‘Nuts’ ,Strawberry is ‘Nut’!”

RSS Feed for ಬಿ ಎ ವಿವೇಕ ರೈ Comments RSS Feed

ಸರ್. ನಮಸ್ಕಾರ,
ನಿಮ್ಮ ಬ್ಲಾಗ್ ಲಲ್ಲಿ ಇಳಿದು ನೋಡಿದೆ.

ನಮಸ್ಕಾರ.ಸಂತೋಷ ಆಯಿತು.


Where's The Comment Form?

Liked it here?
Why not try sites on the blogroll...

%d bloggers like this: