ಈ ವಾರದ ಚಿತ್ರಗಳು : ಮಂಜು ,ಮಕ್ಕಳು,ಮ್ಯೂಸಿಯಂ

Posted on ನವೆಂಬರ್ 24, 2011. Filed under: ಜರ್ಮನಿ | ಟ್ಯಾಗ್ ಗಳು:, , , , , |


ಕಳೆದ ಒಂದು ವಾರದಲ್ಲಿ ನಾನು ತೆಗೆದ ಕೆಲವು ಚಿತ್ರಗಳು ಇಲ್ಲಿ ಇವೆ.ಆರಂಭದಲ್ಲಿ ಇರುವ ಮಂಜು ಮತ್ತು ಇಬ್ಬನಿಯ ಚಿತ್ರಗಳು ನಿನ್ನೆ ಬೆಳಗ್ಗೆ ನಮ್ಮ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಕ್ಯಾಂಪಸ್  ಹುಬ್ಲಂದ್ ನ ದಿನ್ನೆಯ  ಮೇಲಿನಿಂದ ತೆಗೆದವು.ಹುಲ್ಲುಹಾಸಿನ ಮೇಲೆ ಮತ್ತು ಗಿಡಗಳ ಮೇಲೆ ಮುತ್ತು ಚೆಲ್ಲಿದಂತೆ ಇದ್ದ ಮಂಜಿನ ಹನಿಗಳನ್ನು ಕಂಡು ಬೇಂದ್ರೆ ಅವರ ‘ಬೆಳಗು ‘ ಕವನ ನೆನಪಾಯಿತು.

ಜರ್ಮನ್ ಮಕ್ಕಳ ಚಿತ್ರಗಳು ಮೊನ್ನೆ ಭಾನುವಾರ ವ್ಯೂರ್ತ್ಸ್ ಬುರ್ಗ್ ನಗರದ ಬೀದಿಗಳಲ್ಲಿ ,ಸಂತೆಕಟ್ಟೆಯಲ್ಲಿ ಕಂಡ ಪುಟಾಣಿಗಳನ್ನು ಸೆರೆಹಿಡಿದವು.

ಕೊನೆಯಲ್ಲಿ ಇರುವವು -ಕಳೆದ ಶನಿವಾರ ಇಪೋಫೇನ್ ಎಂಬ ಹಳ್ಳಿಗೆ ಹೋಗಿ ,ಅಲ್ಲಿನ ಕ್ನೌಫ್ ಮ್ಯೂಸಿಯಂ ನಲ್ಲಿ ಕಂಡ ,ನನ್ನ ಗಮನ ಸೆಳೆದ ವಿಗ್ರಹಗಳು ,ಆಕೃತಿಗಳು.ಭಾರತದ ಹೆಸರು ಇರುವ ,ಪದ್ಮಾಸನದ ಭಂಗಿಯಲ್ಲಿ ಕುಳಿತ ಬುದ್ಧನ ಪ್ರತಿಕೃತಿ ಇಲ್ಲಿ ಇದೆ. ಪಾಕಿಸ್ಥಾನದಲ್ಲಿ  ದೊರೆತ ಬುದ್ಧನ ಪರಿನಿರ್ವಾಣದ ಪ್ರತಿಕೃತಿಯೂ  ಪಕ್ಕದಲ್ಲಿ ಇದೆ.

ಮಂಜು ಮತ್ತು ಇಬ್ಬನಿ ಕಣ್ಣಿಗೆ  ಮತ್ತು ಮನಸ್ಸಿಗೆ ತಣ್ಣನೆಯ ಹಿತಕರವಾದ ಸುಖವನ್ನು ಕೊಡುತ್ತವೆ.ಮಕ್ಕಳು ಎಲ್ಲೇ ಇರಲಿ -ಅವರು  ಯಾವಾಗಲೂ ಆಹ್ಲಾದದ ಉತ್ಸಾಹದ ಬುಗ್ಗೆಗಳು.ತಾವೂ ಸಂಭ್ರಮಿಸಿ ಕಾಣುವವರನ್ನೂ ತಮ್ಮ ಮಾಯಾ ಕಿನ್ನರ ಲೋಕಕ್ಕೆ ಸೆಳೆಯುವ ಮೋಹಕ ಚುಂಬಕ ಕಿನ್ನರಿ ಜೋಗಿಗಳು. ಅವರು ಬೆಳಕಿನ ಇಬ್ಬನಿಗಳು. ಕ್ನೌಫ್ ಮ್ಯೂಸಿಯಂ ನ ಬುದ್ಧ ಭಾರತದಲ್ಲಿ ಜನಿಸಿ ಜಗತ್ತಿನ ಅನೇಕ ದೇಶಗಳಲ್ಲಿ ತನ್ನ ಶಾಂತಿ ಸಂದೇಶದ ಮಂದಹಾಸದಿಂದ ಜಗತ್ತನ್ನು ಗೆದ್ದವನು , ಹೊಸಬೆಳಕನ್ನು ಕೊಟ್ಟವನು.ಭಾರತದ  ಪದ್ಮಾಸನದ ಬುದ್ಧ ಮತ್ತು ಪಾಕಿಸ್ಥಾನದ ಪರಿನಿರ್ವಾಣದ ಬುದ್ಧ -ಇಬ್ಬರೂ ಈ ಮ್ಯೂಸಿಯಂ ನಲ್ಲಿ ಅಕ್ಕಪಕ್ಕದಲ್ಲಿ ಸೌಹಾರ್ದವಾಗಿ ಇರುವ ನೋಟ ಇಲ್ಲಿದೆ.

ಬೇಂದ್ರೆ ಹಾಡು ಮತ್ತೆ ಮತ್ತೆ ಅನುರಣಿಸುತ್ತದೆ : ‘ ಇದು ಬೆಳಗಲ್ಲೋ ಅಣ್ಣಾ ! ‘

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: