ಚಳಿಗಾಲದ ಸಂಕ್ರಮಣ :ಕೋಟಿನ ಭಾನುವಾರದ ಕೆಲವು ಚಿತ್ರಗಳು

Posted on ಅಕ್ಟೋಬರ್ 31, 2011. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್ | ಟ್ಯಾಗ್ ಗಳು:, , , , , |


ನಿನ್ನೆ ಭಾನುವಾರ ಬೆಳಗ್ಗೆ ಎದ್ದವನೇ ನನ್ನ ವಾಚಿನ ಮುಳ್ಳನ್ನು ಒಂದು ಗಂಟೆ ಹಿಂದಕ್ಕೆ ತಿರುಗಿಸಿದೆ.ಜರ್ಮನಿಯಲ್ಲಿ ಚಳಿಗಾಲದ ಕಾಲ ಆರಂಭವಾಯಿತು.ಮೊನ್ನೆ ವರೆಗೆ ನಮ್ಮ ದೇಶಕ್ಕಿಂತ  ಮೂರೂವರೆ ಗಂಟೆ ಹಿಂದೆ ಇದ್ದದ್ದು ,ನಿನ್ನೆಯಿಂದ ನಾಲ್ಕೂವರೆ ಗಂಟೆ ಹಿಂದಕ್ಕೆ ಸರಿಯಿತು.ಹಾಗಾಗಿ ಇವತ್ತಿನಿಂದ ಹಿಂದಿಗಿಂತ ಒಂದು ಗಂಟೆ ಮೊದಲು ಬೆಳಗ್ಗೆ ಏಳಬೇಕು.ಹೊರಗೆ ನೋಡಿದರೆ ಕತ್ತಲೆ ,ಇಲ್ಲವೇ ಮಂಜು.ಗಡಿಯಾರ ನೋಡಿಕೊಂಡು ಕಾಲ ನಿರ್ಣಯಿಸಲು ತೊಡಗಿದ ಮೇಲೆ ನಮ್ಮ ಪರಂಪರೆಯ ‘ಕಾಲಜ್ಞಾನ ‘ ಮರೆತುಹೋಗಿದೆ.

ನಿನ್ನೆ ಇಲ್ಲಿನವರ ಪಾಲಿಗೆ ಸಂಕ್ರಮಣ.ಒಂದು ಕಾಲದ ಅವಧಿ ಮುಗಿದು ಇನ್ನೊಂದು ಅವಧಿ ಬರುವ ಸ್ಥಿತ್ಯಂತರದ ಕ್ಷಣ ಅಥವಾ ದಿನವೇ ಸಂಕ್ರಾಂತಿ.ಇದು ಒಂದು ರೀತಿಯಲ್ಲಿ ‘ಚಳಿಯ ಸಂಕ್ರಮಣ’. ಹಾಗಾಗಿ ಈ ಭಾನುವಾರವನ್ನು ಇಲ್ಲಿನ ಜನರು ಸಂಭ್ರಮದಿಂದ ಆಚರಿಸುತ್ತಾರೆ.ನಾನು ಮೊದಲಬಾರಿ ೨೦೦೯ರಲ್ಲಿ ವ್ಯೂರ್ತ್ಸ್ ಬುರ್ಗಿಗೆ ಬಂದಾಗ ನಾನು ಕಂಡ ಇಂತಹ ‘ಚಳಿಯ ಸಂಕ್ರಾಂತಿ’ಯನ್ನು ಕುರಿತು ನನ್ನ ಬ್ಲಾಗಿನಲ್ಲಿ ‘ಒಂದು ಕೋಟಿನ ಭಾನುವಾರ’ ಎನ್ನುವ ಬರಹ ಬರೆದಿದ್ದೆ.(೧೮ ನವಂಬರ ೨೦೦೯ ). ನಿನ್ನೆ ಭಾನುವಾರವಾದರೂ ಅಂಗಡಿಗಳೆಲ್ಲ ತೆರೆದಿದ್ದುವು.ಜನರು ಚಳಿಗಾಲದ ಹೊಸ ಕೋಟು ಕೊಳ್ಳಲು ಕೋಟಿನ ಅಂಗಡಿಗಳಿಗೆ ಮುಗಿಬೀಳುತ್ತಿದ್ದರು.ಮಾರ್ಕೆಟ್ ಸ್ಥಳದಲ್ಲಿ ಜಾತ್ರೆಯ ಸಂಭ್ರಮ ಇತ್ತು.ಬಗೆಬಗೆಯ ವಸ್ತುಗಳನ್ನು ಮಾರುವ ಅಂಗಡಿಗಳು.ಬಟ್ಟೆ,ಬುಟ್ಟಿ, ಕಡಲೇಕಾಯಿಯ ಕುಟುಂಬದ ಸದಸ್ಯರು,ಸಿಹಿತಿಂಡಿಗಳು,ಚಹಾದ ಅದ್ಭುತ ಜಗತ್ತು,ಚಾಕು ಕತ್ತರಿಗಳ ಹರಿತದ ಲೋಕ, ಮಕ್ಕಳ ಆಟಿಕೆಗಳ ಮಾಯಾ ಪ್ರಪಂಚ,ಸ್ಥಳೀಯ ತಿಂಡಿ ತಿನಿಸುಗಳು,ಮತ್ತೆ ಸಾಮಾನ್ಯವಾಗಿ ರೆಸ್ಟೋರೆಂಟ್ ಗಳಲ್ಲಿ ದೊರೆಯದ ಬಿಸಿ ಬಿಸಿ ವೈನ್ ,ಮಕ್ಕಳ ತಿರುಗುವ ತೊಟ್ಟಿಲುಗಳು,ಹಾಡಿನಿಂದ ರಂಜಿಸುವ ಅಲೆಮಾರಿ ಹಾಡುಗಾರರು –ಹೀಗೆ ಎಲ್ಲಿ ನೋಡಿದರೂ ಜನಸಂದಣಿ ಮತ್ತು ಅಂಗಡಿಗಳ ಕಿಣಿಕಿಣಿ .

ನಿನ್ನೆ ಸಂಜೆ ನಾನು ತೆಗೆದ ಫೋಟೋಗಳು ಇಲ್ಲಿ ಇವೆ.ಅವುಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿರಿ .

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

3 Responses to “ಚಳಿಗಾಲದ ಸಂಕ್ರಮಣ :ಕೋಟಿನ ಭಾನುವಾರದ ಕೆಲವು ಚಿತ್ರಗಳು”

RSS Feed for ಬಿ ಎ ವಿವೇಕ ರೈ Comments RSS Feed

Dear Sir,

Namaskaaragalu.nimma blog oduvaagalella Wurz burg kanna munde bandu nillutthade. Namagoo allige bandu nimma paatha keluva aase aagutthide.

Srinivas deshpande

ದೇಶಪಾಂಡೆ ಅವರಿಗೆ ನಮಸ್ಕಾರ.ಬ್ಯಾಂಕಿನ ಕೆಲಸ,ಸಾಹಿತಿಗಳ ಒಡನಾಟ ,ಕಾರ್ಯಕ್ರಮಗಳ ಓಡಾಟಗಳ ನಡುವೆ ಬಿಡುವು ಮಾಡಿಕೊಂಡು ನೀವು ನನ್ನ ಬ್ಲಾಗ್ ಬರಹ ಓದುತ್ತಿರುವುದು ಸಂತೋಷ.ಜರ್ಮನಿಗೆ ವ್ಯೂರ್ತ್ಸ್ ಬುರ್ಗ್ ಗೆ ಖಂಡಿತ ಬನ್ನಿ.ಇನ್ನೊಂದು ತಿಂಗಳು ಕಳೆದರೆ ಇಲ್ಲಿ ಹಿಮದ ನಡುವೆಯೇ ಓಡಾಡಬಹುದು.

Respected sir,

I have read your article on ” Chaligalada sankramana: kotina bhanuvarada kela chitragalu” and immediately recollected G.S.Shivarudrappa’s “Masco dalli ippatteradu dinagalu”. Thank you very much for sharing the same by putting your experiences with rare pictures. Hope you are enjoying this winter with spreading your valuable knowledge in Germany that too ONE HOUR EXTRA !!!. German students are lucky enough to have a multifaceted teacher like you. Your writings of this subject are really influencing me to visit the distant place during winter. Thank you sir. Take care. . . .


Where's The Comment Form?

Liked it here?
Why not try sites on the blogroll...

%d bloggers like this: