ಮಳೆ,ಮಂಜು,ಜಲಪಾತ, ಸಮುದ್ರ :ಕಳೆದ ವಾರಗಳ ಚಿತ್ರಗಳು

Posted on ಸೆಪ್ಟೆಂಬರ್ 16, 2011. Filed under: ನಿಸರ್ಗ | ಟ್ಯಾಗ್ ಗಳು:, , , , , , |ಕೊಡಗಿನ ಮಡಿಕೇರಿ ಬಳಿಯ ಅಬ್ಬಿ ಜಲಪಾತ ,ತಲಕಾವೇರಿಯಲ್ಲಿನ ಮಂಜು,ಮಂಗಳೂರು ಬಳಿಯ ಸೋಮೇಶ್ವರದ ಸಮುದ್ರ -ನೀರಿನ ಈ ಮೂರು ‘ಅವತಾರ’ (=ಕೆಳಕ್ಕೆ ಇಳಿಯುವುದು)ಗಳನ್ನು  ಕಳೆದ ಎರಡು  ವಾರಗಳಲ್ಲಿ ಕಂಡು ,ನನ್ನ ಕ್ಯಾಮರಾವನ್ನು ಒದ್ದೆ ಮಾಡಿಕೊಂಡು ಮಳೆಯಲ್ಲಿ ತೆಗೆದ ಚಿತ್ರಗಳು ಇಲ್ಲಿವೆ.’ಮಡಿಕೇರಿಲಿ ಮಂಜು’ ಅನ್ನುವ ಜಿ .ಪಿ ರಾಜರತ್ನಂ ಕವನ ,ಎಸ.ವಿ.ಪರಮೇಶ್ವರ ಭಟ್ಟರ ‘ಉಪ್ಪು ಕಡಲು’ ವಿನ ಒಂದು ವಚನ ಮತ್ತು ಜಿ.ಎಸ.ಶಿವರುದ್ರಪ್ಪನವರ ‘ಬಂಡೆ-ಹೊಳೆ’ ಕವನ  ನೆನಪಾಗುತ್ತವೆ.

ಜಿ.ಪಿ.ರಾಜರತ್ನಂ ಅವರ ‘ಮಡಿಕೇರಿಲಿ ಮಂಜು’ ಕವನದ ಸಾಲುಗಳು :

‘ ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ

ಬೆಳ್ಳಿ  ಬಳಿದಿದ್ ರೋಡ್  ಇದ್ದಂಗೆ

ಸಾಫಾಗ್  ಅಳ್ಳ ತಿಟ್ಟಿಲ್ದಂತೆ

ಮಡಿಕೇರೀಲಿ  ಮಂಜು!

ಮಡಗಿದ್ದ್ ಅಲ್ಲೆ ಮಡಗಿದ್ದಂಗೆ

ಲಂಗರ್  ಬಿದ್ದಿದ್  ಅಡಗಿದ್ದಂಗೆ

ಸೀತಕ್  ಸಕ್ತಿ  ಉಡಗಿದ್ದಂಗೆ

ಅಳ್ಳಾಡಲ್ದು  ಮಂಜು!

ಮಲಗಾಕ್  ಸೊಳ್ಳೆ ಪರದೆ  ಕಟ್ಟಿ

ಒದಿಯಾಕ್ ಒಗೆದಿದ್  ದುಪಟೀ  ಕೊಟ್ಟಿ

ಪಕ್ದಾಗ್  ಗಂಧದ್ ಧೂಪ ಆಕ್ದಂಗೆ

ಮಡಿಕೇರೀ ಮೇಲ್ ಮಂಜು !’

ಎಸ.ವಿ.ಪರಮೇಶ್ವರ ಭಟ್ಟರು ತಮ್ಮ ‘ಉಪ್ಪು ಕಡಲು’ ವಚನ ಸಂಕಲನದಲ್ಲಿ ಕೊಡುವ ಮಂಗಳೂರಿನ ಸಮುದ್ರದ ಒಂದು ಚಿತ್ರಣ :

‘ ಓ ನನ್ನ ಪಶ್ಚಿಮ ಸಮುದ್ರವೇ

ಅಂಶಗಣದೊಳು ನೀನು ರುದ್ರ

ರಸಂಗಳೊಳು ನೀನು ರೌದ್ರ

ಛಂದದೊಳು  ನೀನು ಮತ್ತೇಭವಿಕ್ರೀಡಿತ

ವಾದ್ಯದೊಳು ನೀನು ರಮಡೋಲು

ನೃತ್ಯದೊಳು ನೀನು ಕಥಕ್ಕಳಿ

ಕಾವ್ಯಪ್ರಕಾರದೊಳು  ನೀನು ಕನ್ನಡ ಚಂಪು

ವಸ್ತು ವಿನ್ಯಾಸದೊಳು ನೀನು ಮಹಾಕಾದಂಬರಿ

ನನ್ನ ಅಜ್ನಾನದೀ ಬಿಕ್ಕಲು ಕೇಳಿ ನಗುವುದು ಈ ಹೆಗ್ಗಡಲು  ಸದಾಶಿವಗುರು .’

ಜಿ.ಎಸ.ಶಿವರುದ್ರಪ್ಪ ಅವರ ‘ಬಂಡೆ-ಹೊಳೆ’ ಎನ್ನುವ ಕವನವು  ನೀರಿನ ಹರಿಯುವಿಕೆಗೆ ಬದುಕಿನ ದರ್ಶನದ ಅರ್ಥವನ್ನು ಧ್ವನಿಸುತ್ತದೆ :

‘ಹರಿದೋಡುವೀ ಹೊನಲ ಮಧುರ ಮಂಜುಳಗೀತೆ

ತಡೆದು ನಿಲ್ಲಿಸಿತು ಮನವ ,  ಎಲ್ಲಿಂದಲೋ ಬಂದು

ಮತ್ತೆಲ್ಲಿಗೋ ಹರಿವ ಈ ನಿರಂತರ ಹೊನಲ

ಬಳಗದಂತಿವೆ  ನೂರು ಕಗ್ಗಲ್ಲ ಬಂಡೆಗಳು .

ಹರಿಯುತಿದೆ ಹೊಳೆ ,ಹರಿಯಲಾರವು ಬಂಡೆ ! ಪಾಪ

ಮೂಕ ಮೌನದಿ ಕೂತು ಇಂತೇಸು  ದಿನ ರಾತ್ರಿ 

ನೋಡಿ ಕೊರಗುತಲಿಹವೋ ….ಎಂಬ ಚಿಂತೆಯೊಳಿರಲು

ಮಧುರ ಮಂಜುಳಗೀತೆ  ಮತ್ತೆ ತಣಿಸಿತು ಕಿವಿಯ .

ತನ್ನ ಪಾಡಿಗೆ ತಾನು ಹರಿದೋಡುವೀ ಹೊನಲ

ಈ ಬಗೆಯ ಬಂಡೆಗಳು ತಡೆಯದಿರೆ , ಎದೆಯೊಡ್ಡಿ

ನಿಲಿಸದಿರೆ , ಹೊಮ್ಮುತ್ತಿತ್ತೇನಿಂಥ ಮಧುರ ಮಂ-

ಜುಳಗೀತ ? ಹರಿವ ಮೌನವ ತಡೆದು ಮಧುರ ಗಾ-

ನವ ಕಡೆದು ಕೊಡುವ ಬಂಡೆಯ ಕಡೆಗೆ ನಿಡು ನೋಡಿ

ನಿಂತೇ ನಾ ಬಿಗಿದಿರಲು ಮಧುರ ರಾಗದ ಮೋಡಿ ! ‘

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಮಳೆ,ಮಂಜು,ಜಲಪಾತ, ಸಮುದ್ರ :ಕಳೆದ ವಾರಗಳ ಚಿತ್ರಗಳು”

RSS Feed for ಬಿ ಎ ವಿವೇಕ ರೈ Comments RSS Feed

ನಯನ ಮನೋಹರವಾಗಿದ ಸಾರ್…


Where's The Comment Form?

Liked it here?
Why not try sites on the blogroll...

%d bloggers like this: