ಮೇಲೊಂದು ಗರುಡ ಹಾರುತಿಹುದು

Posted on ಆಗಷ್ಟ್ 15, 2011. Filed under: ಸ್ವಾತಂತ್ರ್ಯ | ಟ್ಯಾಗ್ ಗಳು:, , , |


ಕನ್ನಡದ ಹಿರಿಯ ಕವಿ ಪು.ತಿ.ನರಸಿಂಹಾಚಾರ್  ಅವರು ೧೯೪೭ರಲ್ಲಿ ಬರೆದ ಒಂದು ಮಹತ್ವದ ಕವನ – ‘ನೆರಳು’.  ಗಾಂಧೀಜಿಯನ್ನು ಗರುಡನ ರೂಪಕದ ಮೂಲಕ ವಿವರಿಸುತ್ತಾ ಅವರ ಪ್ರಭಾವದ ‘ನೆರಳು’  ಭೂಮಿಯಲ್ಲಿ ಚಲಿಸುವ ವರ್ಣನೆ ಆ ಕವನದಲ್ಲಿ ಇದೆ. ಇವತ್ತು ಗಾಂಧಿ ಅವರ ಆದರ್ಶ ,ಮೌಲ್ಯಗಳು ಬಹುತೇಕ ಕಣ್ಮರೆ ಆಗಿವೆ. ಈಗ ಗರುಡ ಇಲ್ಲ ಅಷ್ಟೇ ಅಲ್ಲ, ಗರುಡನ ನೆರಳೂ ಕಣ್ಮರೆಯಾಗಿದೆ.  ‘ಅದಕೋ ಅದರಿಚ್ಚೆ ಹಾದಿ, ಇದಕು ಹರಿದತ್ತ ಬೀದಿ’ ಎನ್ನುವ ಪುತಿನ ಕವನದ ಸಾಲುಗಳು ಈ ಸಂದರ್ಭದಲ್ಲಿ ವ್ಯಂಗ್ಯದ  ಭಿನ್ನ ಅರ್ಥವನ್ನು ಕೊಡಬಹುದು. ಧರ್ಮ,ಜಾತಿ,ಪಂಗಡ,ಪ್ರದೇಶ, ಪಕ್ಷಗಳ ನೂರಾರು ಬೀದಿಗಳಲ್ಲಿ ನೆರಳುಗಳು ಕೂಡಾ ಇಲ್ಲದೆ ಜನರು ಎತ್ತೆತ್ತಲೋ ಹರಿಯುತ್ತಿರುವಾಗ ಕವಿ ಮಾತು ಇನ್ನಷ್ಟು ನೆನಪಾಗುತ್ತದೆ  : ‘ ಇದ ನೋಡಿ ನಾನು ನೆನೆವೆನಿಂದು  – ಇಂಥ ನೆಳಲೇನು ಗಾಂಧಿಯೆಂದು!’

ಮತ್ತೆ ಮತ್ತೆ ಓದಿದಷ್ಟೂ ಈ ಕವನ ಪ್ರಸ್ತುತ ಸಂದರ್ಭದಲ್ಲಿ ಸಮಕಾಲೀನ ಅರ್ಥಗಳನ್ನು ಕೊಡುವ ಧ್ವನಿ ಶಕ್ತಿಯನ್ನು  ಹೊಂದಿದೆ.

ಸ್ವಾತಂತ್ರ್ಯ ದಿನದ ನೆನಪಿನಲ್ಲಿ ಪುತಿನ ಅವರ ‘ನೆರಳು’ ಕವನವನ್ನು ಇಲ್ಲಿ ಕೊಡಲಾಗಿದೆ:

ಮೇಲೊಂದು ಗರುಡ ಹಾರುತಿಹುದು

ಕೆಳಗದರ ನೆರಳು ಓಡುತಿಹುದು

ಅದಕೊ ಅದರಿಚ್ಚೆ ಹಾದಿ

ಇದಕು ಹರಿದತ್ತ ಬೀದಿ.

ನೆಲನೆಲದಿ ಮನೆಯ ಮನೆಯ ಮೇಲೆ

ಕೊಳ ಬಾವಿ ಕಂಡು ಕಾಣದೋಲೆ

ಗಿಡ ಗುಲ್ಮ ತೆವರು ತಿಟ್ಟು

ಎನ್ನದಿದಕೊಂದೆ ನಿಟ್ಟು.

ಗಾಳಿ ಬೆರಗಿದರ ನೆಲದೊಳೋಟ !

ವೇಗಕಡ್ಡ ಬಹುದಾದ  ಹೂಟ?

ಸಿಕ್ಕು ದಣಿವಿಲ್ಲದಂತೆ

ನಡೆಯಿದಕೆ ನಿಲ್ಲದಂತೆ.

ಇದ ನೋಡಿ ನಾನು ನೆನೆವೆನಿಂದು

ಇಂಥ ನೆಳಲೇನು ಗಾಂಧಿಯೆಂದು !

ಹರಿದತ್ತ ಹರಿಯ ಚಿತ್ತ

ಈ ಧೀರ ನಡೆವನತ್ತ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ಮೇಲೊಂದು ಗರುಡ ಹಾರುತಿಹುದು”

RSS Feed for ಬಿ ಎ ವಿವೇಕ ರೈ Comments RSS Feed


Where's The Comment Form?

Liked it here?
Why not try sites on the blogroll...

%d bloggers like this: