ಜರ್ಮನಿಯಲ್ಲಿ ಮಳೆ,ಹೊಳೆ,ಹಿಮ,ಸೂರ್ಯ ಮತ್ತು ಗಯತೆಯ ಒಂದು ಕವನ

Posted on ಆಗಷ್ಟ್ 7, 2011. Filed under: Uncategorized |


ಜರ್ಮನ್  ಕವಿ ಗಯತೆಯ ಒಂದು ಕವನ :

ನೋಡು! ಮದುವೆಯಾಗುವಾಗ ಸೂರ್ಯದೇವ

ಮಳೆಯ ಗೋಡೆಯೊಡನೆ

ಕಾಮನ ಬಿಲ್ಲು ಚೆಲ್ಲುತ್ತದೆ

ಹೊಂಗಿರಣಗಳೊಡನೆ ಮತ್ತೆ ಮತ್ತೆ !

ಅದೋ ಅಲ್ಲಿ ಇನ್ನೊಂದು ಕಮಾನು

ಮಂಜು ಅದರ ಸುತ್ತ ಮುತ್ತಿಕೊಂಡಾಗ

ಬಿಳಿಯದಾಗಿ ಕಂಡರೂ ಈ ಕಾಮನ ಬಿಲ್ಲು

ಅದು ಸ್ವರ್ಗವನು  ಗೆಲ್ಲುವ  ಬಿಲ್ಲು!

ಆದ್ದರಿಂದ ಮುದುಕರೆ ,ಈ ಬೆಳಕಿನ ಬಿಂಬ

ಆಹ್ಲಾದಗೊಳಿಸಲಿ ನಿಮ್ಮನು

ಬೆಳ್ಳಗಾಗಿರಬಹುದು  ನಿಮ್ಮ ಕೂದಲು

ಕೈಬಿಡಲಾರದು ಪ್ರೀತಿ  ಎಂದಿಗೂ  ನಿಮ್ಮನು.

ಕಳೆದ ಒಂದು ವರ್ಷದಲ್ಲಿ ಜರ್ಮನಿಯ ಬೇರೆ ಬೇರೆ ಸ್ಥಳಗಳಲ್ಲಿ  ನಾನು ಕಣ್ಣರಳಿಸಿ ನೋಡಿದ ಕ್ಯಾಮರಾ ಕಣ್ಣಲ್ಲಿ ಮಿಟುಕಿಸಿದ ಮಳೆ,ಹೊಳೆ, ಹಿಮ,ಸೂರ್ಯ -ಇವುಗಳ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇನೆ. ಕೊನೆಯ ಸಾಲಿನ  ಮೂರು ಚಿತ್ರಗಳು ಕಳೆದ ತಿಂಗಳು ಜುಲೈ ಕೊನೆಯ ವಾರ ವ್ಯೂರ್ತ್ಸ್ ಬುರ್ಗ್ ನಲ್ಲಿ ಇಡೀ ದಿನ ಮಳೆ ಸುರಿಯುತ್ತಿದ್ದಾಗ ಮಳೆಯ ನಡುವೆ ನಿಂತುಕೊಂಡು ತೆಗೆದವು .ಚಿತ್ರಗಳನ್ನು ಪೂರ್ಣಪ್ರಮಾಣದಲ್ಲಿ  ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

ಇದರೊಂದಿಗೆ ಜರ್ಮನ್ ಕವಿ  ಗಯತೆ ಮುದುಕರಿಗೆ ಸಮಾಧಾನ ಮಾಡಿದ ಒಂದು ಕವನವನ್ನು ಕನ್ನಡಕ್ಕೆ ರೂಪಾಂತರಿಸಿ ಕೊಟ್ಟಿದ್ದೇನೆ. ಮಳೆಯಲ್ಲಿ ಮನೆಯೊಳಗೇ ಕುಳಿತು ನಮಗೆ ವಯಸ್ಸಾಯಿತಲ್ಲಾ ಎಂದು ಚಿಂತಿಸುತ್ತಿರುವಾಗಲೇ ಎಲ್ಲೋ ಒಂದು ಹೊಸ ಕಮಾನು ನಮ್ಮ ಬದುಕಿನ ಕಾಮನ ಬಿಲ್ಲಿಗೆ ಸೇರಿಕೊಂಡು ನಮಗೆ ಉಲ್ಲಾಸ ತರುತ್ತದೆ.

ಹಿಂದಿನ ಎರಡು ಬರಹಗಳ ಹೀನ್ರಿಶ್ ಕ್ಲೆಯಿಸ್ಟ್ ಕತೆ ಮುಂದುವರಿಯುತ್ತದೆ – ಮುಂದಿನ ಬರಹಗಳಲ್ಲಿ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಜರ್ಮನಿಯಲ್ಲಿ ಮಳೆ,ಹೊಳೆ,ಹಿಮ,ಸೂರ್ಯ ಮತ್ತು ಗಯತೆಯ ಒಂದು ಕವನ”

RSS Feed for ಬಿ ಎ ವಿವೇಕ ರೈ Comments RSS Feed

VERY NICE PUBLISH SOME MORE PHOTOS OF THIS KIND

Thanks.See some previous posts of my blog.There are many such pictures.


Where's The Comment Form?

Liked it here?
Why not try sites on the blogroll...

%d bloggers like this: