ಲೋಹಿಯಾ ಡಾಕ್ಟರೇಟ್ ನ ಅಪೂರ್ವ ದಾಖಲೆಗಳು :ಬರ್ಲಿನ್ ನಿಂದ

Posted on ಆಗಷ್ಟ್ 3, 2011. Filed under: Uncategorized | ಟ್ಯಾಗ್ ಗಳು:, , , |


ಮೊದಲನೆಯದಾಗಿ  ನನ್ನ ಇದೇ ಬ್ಲಾಗ್ ನಲ್ಲಿ ಜುಲೈ ೫ ,೨೦೧೧ ರಂದು ಪ್ರಕಟಿಸಿದ ‘ಬರ್ಲಿನ್ ನೊಳಗೊಂದು ಸುತ್ತು :ಲೋಹಿಯಾ -ಕೆಲವು ಅಪೂರ್ವ ಚಿತ್ರಗಳು ‘ ಎಂಬ ಲೇಖನವನ್ನು ಗಮನಿಸಿರಿ. ಇದಕ್ಕೆ ಹಿನ್ನೆಲೆಯಾಗಿ ನನ್ನ ‘ಬ್ಲಾಗಿಲನು ತೆರೆದು ‘ಪುಸ್ತಕದಲ್ಲಿ ( ಪ್ರಗತಿ ಗ್ರಾಫಿಕ್ಸ್ ,ಬೆಂಗಳೂರು,೨೦೧೧) ಇರುವ  ‘ಬರ್ಲಿನ್ ನಲ್ಲಿ ಲೋಹಿಯಾ’ ಬರಹವನ್ನು ಪರಿಶೀಲಿಸಿರಿ. ( ಇದು ಮೊದಲು ‘ಪ್ರಜಾವಾಣಿ ಸಾಪ್ತಾಹಿಕ ಪುರವಣಿ’ ೨೭ ಮಾರ್ಚ್ ೨೦೧೧ ರಲ್ಲಿ ಪ್ರಕಟವಾಗಿತ್ತು.)

ರಾಮಮನೋಹರ ಲೋಹಿಯಾ ಅವರು ಅಕ್ಟೋಬರ ೧೯೨೯ರಿನ್ದ ಮಾರ್ಚ್ ೧೯೩೩ರವರೆಗೆ  ಜರ್ಮನಿಯ ಬರ್ಲಿನಿನ ಫ್ರೀದ್ರಿಶ್  ವಿಲ್ ಹೆಲ್ಮ್ ವಿಶ್ವವಿದ್ಯಾಲಯ  ( ಈಗಿನ ಹುಂಬೋಲ್ತ್  ವಿಶ್ವವಿದ್ಯಾಲಯ )ದಲ್ಲಿ   ಡಾಕ್ಟರೇಟ್ ಪದವಿಯ  ಸಂಶೋಧನಾ ವಿದ್ಯಾರ್ಥಿ ಆಗಿದ್ದರು. ಅವರ ಸಂಶೋಧನೆಯ ವಿಷಯ – ‘ಭಾರತದಲ್ಲಿ ಉಪ್ಪಿನ ತೆರಿಗೆ ‘. ಲೋಹಿಯಾ ಅವರ ಡಾಕ್ಟರೇಟ್ ಸಂಶೋಧನೆಯ ನೋಂದಣಿ ಮತ್ತು ಮೌಲ್ಯಮಾಪನದ ವಿವರಗಳನ್ನು ಮೇಲೆ ಉಲ್ಲೇಖಿಸಿದ ನನ್ನ ಎರಡನೆಯ  ಬರಹದಲ್ಲಿ  ಕೊಟ್ಟಿದ್ದೇನೆ.

ಕಳೆದ ಜೂನ್ ೧೪ರನ್ದು ನಾನು ಬರ್ಲಿನಿನ ಹುಂಬೋಲ್ತ್  ವಿಶ್ವವಿದ್ಯಾಲಯದ  ಪತ್ರಾಗಾರಕ್ಕೆ ಭೇಟಿ ಕೊಟ್ಟು ,ಲೋಹಿಯಾ ಅವರ ಡಾಕ್ಟರೇಟ್ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ,ಅವುಗಳನ್ನು ಪ್ರತಿಮಾಡಿಕೊಂಡು ತಂದಿದ್ದೇನೆ. ಅವುಗಳಲ್ಲಿ ಕೆಲವು ದಾಖಲೆಗಳ ಪ್ರತಿಗಳನ್ನು  ಸ್ಕ್ಯಾನ್ ಮಾಡಿ ಇಲ್ಲಿ ಕೊಟ್ಟಿದ್ದೇನೆ. ಜರ್ಮನ್ ಭಾಷೆಯಲ್ಲಿ ಇರುವ ಈ ಧಾಖಲೆಗಳಲ್ಲಿ ಕೆಲವು ಕೈಬರಹದಲ್ಲಿವೆ, ಕೆಲವು ಬೆರಳಚ್ಚಿನಲ್ಲಿವೆ.  ಲೋಹಿಯಾ ಅವರ ಸಹಿ ಇರುವ ಕಾಗದಗಳೂ ಇಲ್ಲಿವೆ.  ಎಲ್ಲ ಕಡೆ ದಿನಾಂಕಗಳನ್ನು ನಮೂದಿಸಲಾಗಿದೆ.  ಮೌಲ್ಯಮಾಪಕರು ಮತ್ತು ಡೀನ್ ಅವರು ಮಾಡಿದ ಶಿಫಾರಸುಗಳು  ಅವರದ್ದೇ ಆದ ಕೈಬರಹದಲ್ಲಿ ಇವೆ.

ದಾಖಲೆ ೧:

ಫಿಲಾಸಫಿಕಲ್  ಫ್ಯಾಕಲ್ಟಿ

ಡೀನ್ -೧೯೩೨-೩೩

ಡಾಕ್ಟರಲ್ -ಪುಸ್ತಕ ಸಂಖ್ಯೆ .೧೦೫                                              ಜರ್ನಲ್ ಸಂಖ್ಯೆ .೩೨೯

ಸಂಶೋಧನಾ ವಿದ್ಯಾರ್ಥಿ : ರಾಮ್ ಮನೋಹರ್  ಲೋಹಿಯಾ

‘ಸ್ಟೇಟ್ ಸಯನ್ಸಾಸ್ ‘ ವಿಷಯದಲ್ಲಿ ತನ್ನ ಪಿಎಚ್ .ಡಿ.ಪರೀಕ್ಷೆಯನ್ನು ಘೋಷಿಸುತ್ತಿದ್ದಾರೆ.

ಅರ್ಜಿ:

೧.ವ್ಯಕ್ತಿ ಪರಿಚಯ  : ಇದೆ.

೨.ಲಿಖಿತ ಪ್ರಮಾಣಪತ್ರ : ಇದೆ

ಅವರು ಈ ಮಹಾಪ್ರಬಂಧವನ್ನು ತಾವೇ  ಬರೆದರು. ಬೇರೆಯವರ ಸಹಾಯವನ್ನು ಪಡೆದಿಲ್ಲ. ಅವರು ಇದನ್ನು ಬೇರೆ ಯಾವುದೇ ಫ್ಯಾಕಲ್ಟಿಗೆ ಸಲ್ಲಿಸಿಲ್ಲ.                                 ಈ ಮಹಾಪ್ರಬಂಧವನ್ನು ಪೂರ್ಣ ಪ್ರಮಾಣದಲ್ಲಾಗಲೀ ಆಂಶಿಕವಾಗಿ ಆಗಲೀ ಎಲ್ಲೂ ಈವರೆಗೆ ಪ್ರಕಟಿಸಿಲ್ಲ.

೩.ಡಿಗ್ರಿ ಪ್ರಮಾಣಪತ್ರಕ್ಕೆ ಅರ್ಜಿ :

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯ ನೋಂದಣಿ ಆಗಿದೆ.

೪.ಅಭ್ಯರ್ಥಿಯ ಕೊನೆಯ ಶೈಕ್ಷಣಿಕ ಪದವಿ ಪತ್ರ :

ಬ್ಯಾಚಲರ್ ಆಫ್ ಆರ್ಟ್ಸ್ . ಕಲ್ಕತ್ತಾ  ವಿಶ್ವವಿದ್ಯಾಲಯ  .೨೪ ಆಗಸ್ಟ್ ೧೯೨೯.

೫. ಮೂರು ವರ್ಷಗಳ ಶೈಕ್ಷಣಿಕ ಆವಧಿಯ ಸಾಕ್ಷ್ಯ :

ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಐದು ಸೆಮೆಸ್ಟರ್ ಗಳು ಮತ್ತು ೨೭.೧೨.೧೯೩೨ ರ ಯು.ಐ.೨೮೩೩೦ ಎ.ಪಿ. ನಿಯಮಾವಳಿಯಂತೆ ಒಂದು  ಅತಿಥಿ-ಸೆಮೆಸ್ಟರ್ ನ್ನು ಸೇರಿಸಲಾಗಿದೆ.

೬.ಸಂಶೋಧನಾ ಮಹಾಪ್ರಬಂಧದ   ಶೀರ್ಷಿಕೆ :

” ಭಾರತದಲ್ಲಿ ಉಪ್ಪಿನ ತೆರಿಗೆ ”

೭.ಶೂಮಹೆರ್ ಮತ್ತು  ಬೆರ್ನ್ ಹರ್ದ್   ಅವರಲ್ಲಿ ಈ ಮಹಾಪ್ರಬಂಧವನ್ನು ಮೌಲ್ಯಮಾಪನ ಮಾಡಿ ,ಅದಕ್ಕೆ ಸೂಕ್ತ ಶ್ರೇಯಾಂಕವನ್ನು ಕೊಡಲು ನಾನು ಕೇಳಿಕೊಳ್ಳುತ್ತೇನೆ.

ಬರ್ಲಿನ್ ,೨೪ ಜನವರಿ ೧೯೩೩                                                                      ಡೀನ್, ಫಿಲಾಸಫಿಕಲ್ ಫ್ಯಾಕಲ್ಟಿ

___________

” ಶ್ಲಾಘನೀಯ ”

ನನ್ನ ಗೌರವಾನ್ವಿತ ಸಹೋದ್ಯೋಗಿಗಳ  ಗಮನಕ್ಕೆ –

ಬರ್ಲಿನ್,೧೬ ಫೆಬ್ರವರಿ ೧೯೩೩

ಡೀನ್,ಫಿಲಾಸಫಿಕಲ್  ಫ್ಯಾಕಲ್ಟಿ

ಈ ದಿನಾಂಕ ನಡೆದ ಸಭೆಯಲ್ಲಿ ಅನುಮೋದನೆಗೊಂಡಿದೆ :

೧೬.೨.೧೯೩೩

ಡೀನ್

ದಾಖಲೆ ೨ :

ರಾಮ್ ಮನೋಹರ್ ಲೋಹಿಯಾ                                                                                    ಬರ್ಲಿನ್  ಶರ್ಲ್ ಬಿ .೯       ೨೮.೧೧.೩೨

೭೫೬೮/೧೨೦

ಬಾದನಲ್ಲೇ ೧

ನಾನು ಮೆಟ್ರಿಕುಲೆಶನ್ ನ್ನು ಬಾಂಬೆ ವಿಶ್ವವಿದ್ಯಾಲಯದಲ್ಲಿ ಮುಗಿಸಿ,ಬೆನಾರಸ್ ವಿಶ್ವವಿದ್ಯಾಲಯದಲ್ಲಿ ೧೯೨೫-೨೭ ರಲ್ಲಿ  ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ  ೧೯೨೯ರಲ್ಲಿ ಶಿಕ್ಷಣ ಪಡೆದು ಬಿ.ಎ.ಪದವಿ ಹೊಂದಿದ್ದೇನೆ.

ಬೆರ್ಲಿನ್ ವಿಶ್ವವಿದ್ಯಾಲಯದಲ್ಲಿ ೧೯೨೯-೩೦ರಲ್ಲಿ ವಿಂಟರ್ ಸೆಮೆಸ್ಟರ್ ಸಹಿತ ಐದು ಸೆಮೆಸ್ಟರ್ ಗಳನ್ನೂ ಮುಗಿಸಿದ್ದೇನೆ.ಇನ್ನು ಉಳಿದ  ಒಂದು ಸೆಮೆಸ್ಟರ್ ನ್ನು  ಭಾರತದಲ್ಲಿ ‘ ಗೆಸ್ಟ್ ಸೆಮೆಸ್ಟರ್ ‘ಆಗಿ ಅಧ್ಯಯನ ಮಾಡಲು ಅನುಮತಿ ಕೋರುತ್ತೇನೆ.

ರಾಮ್ ಮನೋಹರ್ ಲೋಹಿಯಾ

ಡೀನ್  ಅವರಿಗೆ

ಫಿಲಾಸಫಿಕಲ್ ಫ್ಯಾಕಲ್ಟಿ

ಬರ್ಲಿನ್ ವಿಶ್ವವಿದ್ಯಾಲಯ

‘ಕಲ್ಕತ್ತಾದಲ್ಲಿನ  ಯಶಸ್ವಿಯಾದ ಅಧ್ಯಯನವನ್ನು ಗಮನಕ್ಕೆ ತೆಗೆದುಕೊಂಡು ರಾಮ್  ಲೋಹಿಯಾ ಅವರ ಅರ್ಜಿಯನ್ನು ನಾನು ವಿಶೇಷವಾಗಿ  ಶಿಫಾರಸು ಮಾಡುತ್ತೇನೆ.ಅವರು ಬುದ್ಧಿವಂತ ,ಅಧ್ಯಯನಶೀಲ ವಿದ್ಯಾರ್ಥಿಯೆಂದು ನಾನು ಪರಿಗಣಿಸುತ್ತೇನೆ.’

ಶೂಮಹರ್

೨೮.೧೧.೧೯೩೨

ದಾಖಲೆ ೩:

ನಾನು ಈ ಮಹಾಪ್ರಬಂಧವನ್ನು  ಸ್ವತಂತ್ರವಾಗಿ ,ಯಾರ ಸಹಾಯವೂ ಇಲ್ಲದೆ  ರಚಿಸಿದ್ದೇನೆ ,ಇದನ್ನು ಬೇರೆ ಯಾವುದೇ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿಲ್ಲ ಮತ್ತು

ಇದನ್ನು ಪೂರ್ಣವಾಗಿ ಆಗಲೀ ಆಂಶಿಕವಾಗಿ ಆಗಲೀ ಎಲ್ಲೂ ಪ್ರಕಟ ಮಾಡಿಲ್ಲ ಎಂದು ಪ್ರಮಾಣೀಕರಿಸುತ್ತೇನೆ.

ರಾಮ್ ಮನೋಹರ್  ಲೋಹಿಯಾ

ಬರ್ಲಿನ್,೨೪.೧.೧೯೩೩

ಎಲ್ಲ ಕಾಗದ ಪತ್ರಗಳನ್ನು ಮತ್ತು  ಮಹಾಪ್ರಬಂಧವನ್ನು ಹಿಂದಕ್ಕೆ ಪಡೆದಿದ್ದೇನೆ.

ರಾಮ್ ಮನೋಹರ್ ಲೋಹಿಯಾ

೨೫.೨.೧೯೩೩

ದಾಖಲೆ ೪ :

ಬರ್ಲಿನ್,ದಿನಾಂಕ  ೨೪ ಜನವರಿ ೧೯೩೩

” ಭಾರತದಲ್ಲಿ ಉಪ್ಪಿನ ತೆರಿಗೆ ” ಎಂಬ ನನ್ನ ಈ ಮಹಾಪ್ರಬಂಧವನ್ನು ಮತ್ತು ಇದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಸಲ್ಲಿಸುತ್ತಾ , ಡಾಕ್ಟರೇಟ್ ಪರೀಕ್ಷೆಗೆ ನನ್ನ ಅರ್ಜಿಯನ್ನು ಸ್ವೀಕರಿಸಲು ಕೇಳಿಕೊಳ್ಳುತ್ತೇನೆ.

ಈ ಕೆಳಗೆ ಕಾಣಿಸಿದ ವಿಷಯಗಳಲ್ಲಿ ನನಗೆ ಪರೀಕ್ಷೆ ನಡೆಸಲು ಕೋರುತ್ತೇನೆ.

ಮುಖ್ಯ ವಿಷಯ :ರಾಷ್ಟ್ರೀಯ ಆರ್ಥಿಕತೆ

ಪೂರಕ ವಿಷಯ :ತತ್ವ ಶಾಸ್ತ್ರ ಮತ್ತು ಇತಿಹಾಸ

ನಿಮ್ಮ ವಿಶ್ವಾಸಿ

ರಾಮ್ ಮನೋಹರ್  ಲೋಹಿಯಾ

ಶರ್ಲೋತ್ತೆನ್ ಬುರ್ಗ್ ೯

ಬಾದೆನಲ್ಲೇ ೧

ಇವರಿಗೆ : ಡೀನ್

ಫಿಲಾಸಫಿಕಲ್ ಫ್ಯಾಕಲ್ಟಿ

ಬರ್ಲಿನ್ ವಿಶ್ವವಿದ್ಯಾಲಯ

ದಾಖಲೆ ೫ :

ವ್ಯಕ್ತಿ ವಿವರ

ಭಾರತದ ಅಕ್ಬರ್ ಪುರದಲ್ಲಿ  ಹೀರಾಲಾಲ್ ಲೋಹಿಯಾ ಎಂಬ ವೈಶ್ಯರ ಮಗನಾಗಿ ೨೩ ಮಾರ್ಚ್ ೧೯೧೦ರನ್ದು ನಾನು ಜನಿಸಿದೆ.ನಾನು ಕಲಕತ್ತಾ ವಿಶ್ವವಿದ್ಯಾಲಯದಲ್ಲಿ ನಾಲ್ಕು ಸೆಮೆಸ್ಟರ್ ಅಧ್ಯಯನ ಮಾಡಿ ೧೯೨೯ನೆಯ ಇಸವಿಯಲ್ಲಿ ನನ್ನ ಬಿ ಎ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ನಾನು ೧೯೨೯ರ ‘ಚಳಿಗಾಲದ ಅವಧಿ’ಯಿಂದ  ಬರ್ಲಿನಿನ ಫ್ರೀಡ್ರಿಶ್  ವಿಲ್ ಹೆಲ್ಮ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಶೂಮಹರ್ ಅವರ ಸೆಮಿನಾರ್ ತರಗತಿಗಳಲ್ಲಿ ‘ರಾಷ್ಟ್ರೀಯ ಆರ್ಥಿಕತೆ ‘ ಎಂಬ ವಿಷಯವನ್ನು ಅಧ್ಯಯನ ಮಾಡಿದ್ದೇನೆ.

ರಾಮ್ ಮನೋಹರ್ ಲೋಹಿಯಾ

ದಾಖಲೆ ೬ :

ಫಿಲಾಸಫಿಕಲ್   ಫ್ಯಾಕಲ್ಟಿ

೨೩ ಫೆಬ್ರವರಿ  ೧೯೩೩

ಪರೀಕ್ಷೆಯ  ಅಭ್ಯರ್ಥಿ :    ಲೋಹಿಯಾ  ರಾಮ್ ಮನೋಹರ್

ಪರೀಕ್ಷಕರು : ಶೂಮಹರ್,  ಬೆರ್ನ್ ಹರ್ದ್, ಒಂಕೆನ್ ,  ದೆಸ್ಸೋಯಿರ್ .

ಮೌಖಿಕ ಪರೀಕ್ಷೆಯ ಶ್ರೇಯಾಂಕ : ಶ್ಲಾಘನೀಯ

ಶೂಮಹರ್  ಟಿಪ್ಪಣಿ :

ಭಾರತದ ಹಣದ ಸ್ವರೂಪ ; ಕಾಗದ ರೂಪದ ಹಣಕ್ಕೆ ಇಂಗ್ಲೆಂಡ್ ಬದಲಾವಣೆಗೊಂಡದ್ದು-ಇದರ ಕಾರಣ ಮತ್ತು ಪರಿಣಾಮಗಳು ; ಭೂಕಂದಾಯ ಮತ್ತು ಉದ್ಯಮಶೀಲತೆಯ ಲಾಭ ; ವ್ಯವಹಾರದ ಕಾರ್ಯಗಳು .

‘  ಉತ್ತಮ ‘

ಒಂಕೆನ್ ಟಿಪ್ಪಣಿ :

ಸಾಮ್ರಾಜ್ಯಶಾಹಿ ಇತಿಹಾಸ ರಚನೆ ; ೧೮ನೆಯ ಶತಮಾನದ ಇಂಗ್ಲೆಂಡ್ ;ಭಾರತವನ್ನು ವಶಪಡಿಸಿಕೊಂಡದ್ದು ; ಈಸ್ಟ್  ಇಂಡಿಯ ಕಂಪೆನಿ ;ಅಮೇರಿಕಾದ ಉತ್ತರಾಧಿಕಾರ ;ಆರ್ಥಿಕ ಮತ್ತು ರಾಜಕೀಯ ಕಾರಣಗಳು ;ಬರ್ಕ್ ; ೧೮೭೭ರ ಒರಿಯೆಂಟ್  ಯುದ್ಧ;

‘ಉತ್ತಮದಿಂದ  ಅತ್ಯುತ್ತಮ ‘

ಬೆರ್ನ್ ಹರ್ದ್  ಶಿಫಾರಸು  :

‘ಉತ್ತಮ’

ದೆಸ್ಸೋಯಿರ್ ಟಿಪ್ಪಣಿ :

ಮನೋವೈಜ್ಞಾನಿಕ  ಪ್ರಯೋಗ ; ಜ್ಞಾಪಕ ಶಕ್ತಿಯ ಬಗೆಗಳು ; ನೀತ್ಷೆ ; ಗುಲಾಮರನ್ನು ಬಳಸುವ ನೈತಿಕತೆ ; ನಿರಂತರ ಹಿಮ್ಮುಖತೆ ;ಹಿಂದುತ್ವದ ಸಂಬಂಧ .

‘ಅತ್ಯುತ್ತಮ’

( ಸ್ಕ್ಯಾನ್ ಮಾಡಿದ  ದಾಖಲೆಗಳನ್ನು  ಪೂರ್ಣಪ್ರಮಾಣದಲ್ಲಿ  ಸ್ಪಷ್ಟವಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ .)

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

6 Responses to “ಲೋಹಿಯಾ ಡಾಕ್ಟರೇಟ್ ನ ಅಪೂರ್ವ ದಾಖಲೆಗಳು :ಬರ್ಲಿನ್ ನಿಂದ”

RSS Feed for ಬಿ ಎ ವಿವೇಕ ರೈ Comments RSS Feed

ಸರ್
ಭಾರತದ ಒಂದು ಅಸಮಾನ್ಯ ವ್ಯಕ್ತಿತ್ವ ಶ್ರೀ ರಾಮಮನೋಹರ ಲೋಹಿಯಾ ಅವರಿಗೆ ಸಂಬಂಧಿಸಿ ಮಹತ್ವದ ವಿಚಾರಗಳನ್ನು ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಅನಂತಾನಂತ ಧನ್ಯವಾದಗಳು. ಬುದ್ಧ ಭಾರತದಲ್ಲಿ ಕಳೆದುಹೋದ ಹಾಗೆ ಲೋಹಿಯಾ ಕೂಡಾ ಕಳೆದುಹೋಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮಂತಹವರು ನೀಡುವ ಇಂತಹ ತುಣುಕುಗಳು ಒಂದರೆಕ್ಷಣವಾದರೂ ಅವರ ಬಗ್ಗೆ ಯೋಚಿಸುವಂತೆ ಮಾಡುತ್ತವೆ. ಧನ್ಯವಾದಗಳು

ಧನ್ಯವಾದಗಳು ನಿಮ್ಮ ಕಾಳಜಿಗಾಗಿ.

Wow! I am thrilled after reading and seeing documents!

Purushotham,
Thanks for the compliments.

Cum laude- grade obtained by Shri Lohia, The influence he had on most of us – egregia cum laude!!!. The formal grades does not matter, what matters is the changed ideology many that he influenced. – Dr. Hampapur Sunderraj Giridhar

Very true.His thoughts influenced many of us.Unfortunately in India now ,the dominant ideologies are caste,religion,power and money.I put this document from historical perspective.


Where's The Comment Form?

Liked it here?
Why not try sites on the blogroll...

%d bloggers like this: