ಮಕ್ಕಳಿವರೇನಮ್ಮ ಬಲು ಚೂಟಿ

Posted on August 1, 2011. Filed under: Uncategorized |


ಜರ್ಮನಿಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ನಾನು ಕ್ಯಾಮರದಲ್ಲಿ ಮಿಟುಕಿಸಿದ ಮಕ್ಕಳ ಚಿತ್ರಗಳು.ಮಕ್ಕಳು  ಹಿಮಗಾಲದಲ್ಲಿ ,ಬೇಸಗೆಯಲ್ಲಿ,ಹೊಳೆಯ ಬದಿಯಲ್ಲಿ ,ಕಾಡಿನಲ್ಲಿ ,ಮನೆಯ ಒಳಗೆ ಮತ್ತು ಹೊರಗೆ ಕ್ರಿಯಾಶೀಲವಾಗಿರುವ ನೋಟಗಳು ಇಲ್ಲಿವೆ.ನಿಸರ್ಗದೊಡನೆ ಬೆರೆಯುತ್ತಲೇ  ಮಕ್ಕಳು ಬೆಳೆಯುವ ಅವಕಾಶಗಳ ಸಾಧ್ಯತೆಗಳು ಮಕ್ಕಳ ವಿಕಾಸದಲ್ಲಿ ಮುಖ್ಯವಾಗುತ್ತವೆ.ಕನ್ನಡದ ಹಿರಿಯ ಸಾಹಿತಿ  ಶಿವರಾಮ ಕಾರಂತರು ಮಕ್ಕಳ ಇಂತಹ ವಿಕಾಸದ ಬಗ್ಗೆ ವಿಶೇಷವಾಗಿ ಕನ್ನಡದಲ್ಲಿ ಬರೆದಿದ್ದಾರೆ.ಪುತ್ತೂರಿನಲ್ಲಿ ತಮ್ಮ ಮನೆಯನ್ನೇ ‘ ಬಾಲವನ ‘ ಮಾಡಿ ,ಮಕ್ಕಳ ಕೂಟವನ್ನು ಕಟ್ಟಿ ಅನೇಕ ಮಕ್ಕಳ ಬೆಳವಣಿಗೆಗೆ ಸೃಜನಶೀಲ ಆಯಾಮವನ್ನು ಕೊಟ್ಟಿದ್ದಾರೆ.ಯುರೋಪಿನಲ್ಲಿ ಮಕ್ಕಳ ವಿಕಾಸಕ್ಕೆ ಸಂಬಂಧಿಸಿದಂತೆ ನಡೆದ ಪ್ರಯೋಗಗಳನ್ನು ಅಧ್ಯಯನ ಮಾಡಿದ್ದ ಕಾರಂತರು ತಮ್ಮ ವಿಶ್ವಕೋಶಗಳ ಮೂಲಕ ಅದನ್ನು ಕನ್ನಡ ಮಕ್ಕಳಿಗೆ ಬಿಟ್ಟುಹೋಗಿದ್ದಾರೆ.ಆದರೆ ನಾವು ಇಂದು ಪುಸ್ತಕಗಳ ಮಣಭಾರದಲ್ಲಿ ನಮ್ಮ ಮಕ್ಕಳು ಬಾಗಿ,ಔಪಚಾರಿಕ ಶಿಕ್ಷಣದ ಮಿಲಟರಿ ಶಿಸ್ತಿನಲ್ಲಿ ತಮ್ಮ ಸಹಜ ಸೃಜನಶೀಲ ಬೆಳವಣಿಗೆಗಳಿಂದ ವಿಮುಖರಾಗುವಂತೆ ಮಾಡುತ್ತಿರುವುದು ದುರಂತದ ವಿದ್ಯಮಾನ.

ಚಿತ್ರಗಳನ್ನು ಪೂರ್ಣಪ್ರಮಾಣದಲ್ಲಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ಮಕ್ಕಳಿವರೇನಮ್ಮ ಬಲು ಚೂಟಿ”

RSS Feed for ಬಿ ಎ ವಿವೇಕ ರೈ Comments RSS Feed

ಚಿತ್ರಗಳು ಚೆನ್ನಾಗಿವೆ ಸರ್🙂


Where's The Comment Form?

Liked it here?
Why not try sites on the blogroll...

%d bloggers like this: