ಕೊಬ್ಬಿಸಿದ ಬಾತುಕೋಳಿಯ ಲಿವರ್ :ಫ್ರಾನ್ಸ್ ಮತ್ತು ಜರ್ಮನಿ ಜಗಳ

Posted on ಜುಲೈ 30, 2011. Filed under: ಜರ್ಮನಿ | ಟ್ಯಾಗ್ ಗಳು:, , |


ಜರ್ಮನಿಯ ಮಾಧ್ಯಮಗಳಲ್ಲಿ  ಈಗ ಚರ್ಚೆಯಾಗುತ್ತಿರುವ ಒಂದು ವಿವಾದದ ವಿಷಯ ‘ಬಲವಂತವಾಗಿ ತಿನ್ನಿಸಿ ಕೊಬ್ಬಿಸಿದ ಬಾತುಕೋಳಿಯ ಲಿವರ್ ‘ನ್ನು ( Foie gras )ಆಹಾರಮೇಳದಲ್ಲಿ ಪ್ರದರ್ಶಿಸುವ ಬಗ್ಗೆ. ಜರ್ಮನಿಯ ನಗರ ಕೋಲನ್ ನಲ್ಲಿ ಬರುವ ಅಕ್ಟೋಬರದಲ್ಲಿ ಜಗತ್ತಿನ ಅತಿದೊಡ್ಡ ಆಹಾರ ಮೇಳ ‘Anuga ‘ ನಡೆಯುತ್ತದೆ.ಇದರಲ್ಲಿ  ಫ್ರಾನ್ಸೆ ದೇಶವು Foie gras  ಇದರಿಂದ ತಯಾರಿಸಿದ ಖಾದ್ಯಗಳನ್ನು ಪ್ರದರ್ಶಿಸಲು ಸಿದ್ಧತೆ ನಡೆಸಿದೆ.ಇದರ ಪ್ರದರ್ಶನಕ್ಕೆ ಜರ್ಮನಿ ವಿರೋಧ ವ್ಯಕ್ತಪಡಿಸಿದೆ.ಫ್ರಾನ್ಸಿನ ಕೃಷಿ ಸಚಿವರು ಬ್ರುನೋ ಲೇ ಮರಿಎ  ಜರ್ಮನಿಯಲ್ಲಿ ನಡೆಯುವ ಈ ಆಹಾರ ಮೇಳವನ್ನು ಫ್ರಾನ್ಸ್ ಬಹಿಷ್ಕರಿಸುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.ಅದಕ್ಕೆ ಜರ್ಮನ್ ಸಚಿವರಾದ ಐಗ್ನೆರ್ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ .ಹೀಗೆ ಯೂರೋಪಿನ ಎರಡು ಪ್ರಮುಖ ದೇಶಗಳ ನಡುವಿನ ವಿವಾದಕ್ಕೆ ಕಾರಣವಾದದ್ದು ‘ಬಾತುಕೋಳಿಯ ಲಿವರ್’. ಅದು ಸಹಜವಾದ ಲಿವರ್ ಅಲ್ಲ.ಬಾತುಕೋಳಿಗಳಿಗೆ ಬಲವಂತವಾಗಿ ತಿನ್ನಿಸಿ ,ಅವಗಳ ಲಿವರ್ ನ್ನು ಕೊಬ್ಬಿಸಿ ,ಬಳಿಕ ಅದನ್ನು ಮನುಷ್ಯರು ತಿನ್ನುವ ಪ್ರಕ್ರಿಯೆ.

ಫ್ರೆಂಚ್ ಭಾಷೆಯಲ್ಲಿ ‘ Foie gras’   ಎಂದರೆ ‘ಬಾತುಕೋಳಿಗಳಿಗೆ  ಬಲವಂತವಾಗಿ ಆಹಾರ ಕೊಟ್ಟು ಕೊಬ್ಬಿಸಿದ ಅವುಗಳ ಲಿವರ್’. ಇದು ಫ್ರಾನ್ಸ್ ನಲ್ಲಿ ಬಹಳ ಜನಪ್ರಿಯ ಆಹಾರ.ಅದು ಬಾತುಕೋಳಿಯ ಸಹಜ ಲಿವರ್ ಗಿಂತ ಹೆಚ್ಚು ರುಚಿಕರ ಎನ್ನುವುದು ಫ್ರೆಂಚರ ಬಾಯಿರುಚಿಯ ಚಪಲ. ಆದರೆ ಈರೀತಿ ಹಕ್ಕಿಗಳಿಗೆ ಬಲವಂತವಾಗಿ ಕಾಳು ಮುಂತಾದ ಆಹಾರ ತಿನ್ನಿಸಿ ಅವುಗಳ ಲಿವರ್ ನ್ನು ಕೃತಕವಾಗಿ ಕೊಬ್ಬಿಸುವುದರ  ಕುರಿತು  ಪ್ರಾಣಿಗಳ ಬಗ್ಗೆ ಸಂವೇದನೆ ಉಳ್ಳ ಜರ್ಮನಿಯಂತಹ ದೇಶಗಳು ವಿರೋಧ ವ್ಯಕ್ತಪಡಿಸಿವೆ.ಜರ್ಮನಿಯಲ್ಲಿ ಈ ರೀತಿ ಬಲವಂತವಾಗಿ ಹಕ್ಕಿಗಳಿಗೆ ಆಹಾರ ತಿನ್ನಿಸಿ ಕೃತಕವಾಗಿ ಅವುಗಳ ಲಿವರ್ ಕೊಬ್ಬಿಸುವುದನ್ನು ಕ್ರೌರ್ಯ ಎಂದು ಪರಿಗಣಿಸಲಾಗಿದೆ.’ಸಾಂಸ್ಕೃತಿಕ ಪ್ರತಿರೋಧ’ ಎನ್ನುವ ಪರಿಕಲ್ಪನೆಯನ್ನು ಇಲ್ಲಿನ ಪ್ರಾಣಿ ಸಂಬಂಧಿ ನಿಯಮಾವಳಿಯಲ್ಲಿ ಸೇರಿಸಲಾಗಿದೆ .ಈಗ ಯೂರೋಪಿನ ಅನೇಕ ದೇಶಗಳು ಈ ‘ಬಾತುಕೋಳಿಯ ಕೊಬ್ಬಿಸಿದ ಲಿವರ್’ ನ್ನು ತಮ್ಮ ಆಹಾರದಲ್ಲಿ ನಿಷೇಧಿಸಿವೆ.ಆದರೆ ಅಮೇರಿಕ ಮತ್ತು ಯೂರೋಪಿನ ಕೆಲವು ದೇಶಗಳಿಗೆ  ಫ್ರಾನ್ಸ್ ತನ್ನ  ‘ಬಾತುಕೋಳಿ ಕೊಬ್ಬಿಸಿದ ಲಿವರ್’ನ್ನು  ರಫ್ತು ಮಾಡುತ್ತಿದೆ. ಪ್ರಾಣಿಗಳಿಗೆ ತಿನ್ನಿಸುವುದರಲ್ಲಿ  ಬಲವಂತ ಮತ್ತು ಕ್ರೌರ್ಯದ ಚರ್ಚೆಯು ನೈತಿಕತೆಯ ಪ್ರಶ್ನೆ ಯಾಗಿ ಮುಖ್ಯವಾಗುತ್ತದೆ.

ನಮ್ಮ ದೇಶದಲ್ಲಿ ‘ತಿನ್ನುವುದು’ ಮತ್ತು ‘ತಿನ್ನಿಸುವುದು’ ಅನ್ನುವುದಕ್ಕೆ ಆಧುನಿಕ ಅರ್ಥಗಳು ಚಲಾವಣೆಯಲ್ಲಿ ಇವೆ. ಇಲ್ಲಿ ಜರ್ಮನಿಯಲ್ಲಿ ಕುಳಿತು ನಮ್ಮ ದೇಶದ ಸುದ್ದಿಗಳನ್ನು ಅಂತರ್ಜಾಲದಲ್ಲಿ ದಿನಾ ಓದುತ್ತಿರುವಾಗ ,ಕೆಲವು ಕಾಲದಿಂದ ಅದೇ ಸುದ್ದಿ – ತಿಂದವರ ಮತ್ತು ತಿನ್ನಿಸಿದವರದ್ದೇ  ಲೋಕದ ಅಗಣಿತ ಸಂಗತಿಗಳು.ಬಾನು ಭೂಮಿ ಭೂಗರ್ಭಗಳಲ್ಲಿ ಎಲ್ಲೆಲ್ಲೂ ತಿನ್ನುವ ,ತಿಂದು ಕೊಬ್ಬುವ ಆಹಾರದ ಬಹುರೂಪಗಳು. ಅದಕ್ಕೆ ಸ್ಥಳ ಕಾಲಗಳ ಅಂತರ ಇಲ್ಲ.ಅದು ತರಂಗಾಂತರದಿಂದ ತೊಡಗಿ, ಆಟದ ಮೈದಾನದಲ್ಲಿ ಎಲ್ಲ ಬಗೆಯ ಆಟವಾಡಿ, ವಾಮನನ ಮೂರು ಪಾದಗಳು ತ್ರಿವಿಕ್ರಮವಾಗಿ ಎಲ್ಲ ಭೂಮಿಯನ್ನು ಬಲಿಯಾಗಿ ನೊಣೆದು  ನುಂಗಿ, ಪಾತಾಳಕ್ಕೆ ಇಳಿದು ಕಲ್ಲುಮಣ್ಣು ತಿಂದು ಕೊಬ್ಬಿದ ಕೊಬ್ಬಿಸಿದ ‘ಲಿವರ್ ಗಳು’.

ಈ ಕೊಬ್ಬಿದ ಕೊಬ್ಬಿಸಿದ ಆಹಾರವನ್ನು ಬಹಿಷ್ಕರಿಸುವ ‘ಸಾಂಸ್ಕೃತಿಕ  ಪ್ರತಿರೋಧ ‘ದ ನೈತಿಕತೆ ಮಾತ್ರ ನಮ್ಮ ದೇಹವನ್ನು  ನಮ್ಮ ದೇಶವನ್ನು ಕಾಪಾಡಬಲ್ಲುದು.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಕೊಬ್ಬಿಸಿದ ಬಾತುಕೋಳಿಯ ಲಿವರ್ :ಫ್ರಾನ್ಸ್ ಮತ್ತು ಜರ್ಮನಿ ಜಗಳ”

RSS Feed for ಬಿ ಎ ವಿವೇಕ ರೈ Comments RSS Feed

illi eega aaguthiruva vidyamanagala bagge alli neeveshtu nondidderembudu nimma ee dinada lekhanadalli gothaguthade.alli bathukoliyannoo ashtondu maanaveeyavagi noduva janariruvaga illi…..!!!?

ನಾಗೇಶ್ ,ಥ್ಯಾಂಕ್ಸ್. ಸಮಸ್ತ ಜೀವಿಗಳು ಸಮಾನ.ಮನುಷ್ಯರು ಹೊಟ್ಟೆಬಾಕರಾಗಬಾರದು.


Where's The Comment Form?

Liked it here?
Why not try sites on the blogroll...

%d bloggers like this: