ನಂದಿಕೂರಿನ ನೋವು :ನಿರ್ಲಕ್ಷ್ಯದ ರಾಜಕೀಯ

Posted on July 19, 2011. Filed under: Uncategorized |


ಈ ದಿನ ‘ಉದಯವಾಣಿ’ ಅಂತರ್ಜಾಲ ಪತ್ರಿಕೆಯಲ್ಲಿ ‘ಯುಪಿಸಿ ಎಲ್  ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಭೇಟಿ’ ಎಂಬ ಸುದ್ದಿ ಓದಿದೆ.

ಕಳೆದ ಎಪ್ರಿಲ್ ೯ರನ್ದು ನಂದಿಕೂರಿಗೆ  ಭೇಟಿ ಕೊಟ್ಟ ಬಳಿಕ ಆ ಕುರಿತು ಈ ಬ್ಲಾಗ್ ನಲ್ಲಿ ಎರಡು ಬರಹಗಳನ್ನು ಹಾಕಿದ್ದೇನೆ.’ನಂದಿಕೂರಿನಲ್ಲಿ ಕಂಡ  ಸಂಕಷ್ಟ ‘(ಮೇ ೭)  ಮತ್ತು ‘ ನಂದಿಕೂರಿಗೆ ಭೇಟಿ ಕೊಟ್ಟಾಗ ಕಂಡ ನೋಟ ‘( ಚಿತ್ರಗಳು-ಮೇ ೮ ).ಅವುಗಳನ್ನು ನೋಡದವರು ದಯವಿಟ್ಟು ಗಮನಿಸಿ.

ಕರಾವಳಿಯಲ್ಲಿ ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳು ಆಗಿದೆ.ನಾನು ಮೇ ಎರಡರಂದು ಊರಿನಿಂದ ಜರ್ಮನಿಗೆ ಬಂದಿರುವ ಕಾರಣ ,ಅಲ್ಲಿಯ ದಾರುಣತೆಯ ಪ್ರತ್ಯಕ್ಷ ಅರಿವು ನನಗಿಲ್ಲ.ಆದರೆ ಇವತ್ತಿನ ಸುದ್ದಿ ನೋಡಿದರೆ ,ನಿರ್ಲಕ್ಷ್ಯದ ರಾಜಕೀಯ ಎಷ್ಟು ಕ್ರೂರ ಎಂದು ಕಾಣಿಸುತ್ತದೆ.ಬೀಸು ಘೋಷಣೆಗಳು ,ಅಸ್ಪಷ್ಟ ಅಗೋಚರ ನೈತಿಕತೆಗಳು ,ರಾಷ್ಟ್ರೀಯ ಮಹತ್ವದ ಎಂದು ಬಿಂಬಿಸಲಾಗುವ ಉನ್ಮಾದದ ಚಳುವಳಿಗಳು ನಮ್ಮ ದೇಶದಲ್ಲಿ ನಮ್ಮ ಬಾಯ್ಮಾತಿನ ಕಾಳಜಿಗಳು ಆಗುತ್ತಿರುವಾಗ ,ನಂದಿಕೂರಿನ ಪರಿಸರದ ಹಳ್ಳಿಗಳ ಜನರ  ಗೋಳು ಮತ್ತು ನೋವು ,ಹೊಗೆಯಾಗಿ ನಮ್ಮನ್ನು ಕಾಡುತ್ತಿಲ್ಲ.ಪರಿಶೀಲನಾ ಸಮಿತಿ ,ಅದರಲ್ಲಿ ಯಾರು ಸದಸ್ಯರಿರಬೇಕು ಎನ್ನುವ ಚರ್ಚೆ ,ಬಳಿಕದ ವರದಿ -ಎಲ್ಲ ಮುಗಿದಾಗ ಆ ಹಳ್ಳಿಗಳಲ್ಲಿ ‘ಹಾರು ಬೂದಿ’ ಮಾತ್ರ ಉಳಿಯಬಹುದು.

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: