ಮತ್ತೆ ಜರ್ಮನಿಗೆ..

Posted on ಮೇ 5, 2011. Filed under: Uncategorized |


ಮತ್ತೆ ಜರ್ಮನಿಗೆ ಈಗ ಹೊರಟಿದ್ದೇನೆ.ಇನ್ನು ಐದು ಗಂಟೆಯೊಳಗೆ ಬೆಂಗಳೂರು ಬಿಟ್ಟು ಜರ್ಮನಿಯ ವ್ಯೂತ್ಸ್ ಬುರ್ಗಿಗೆ ಪ್ರಯಾಣ.ಅಲ್ಲಿ ವಿವಿಯಲ್ಲಿ ನಾಳೆ ಬೇಸಗೆ ಸೆಮೆಸ್ಟರ್ ಆರಂಭ.ಮೂರು ತೊಂಗಳು -ಜುಲೈ ೩೧ರ ವರೆಗೆ ಮತ್ತೆ ಅಧ್ಯಾಪನ,ಸಮಾಲೋಚನೆ,ಸೆಮಿನಾರ್ ಮತ್ತು ಅಧ್ಯಯನ.ಫೆಬ್ರವರಿ ಕೊನೆಯಲ್ಲಿ ಜರ್ಮನಿಯಿಂದ ಕರ್ನಾಟಕಕ್ಕೆ ಬಂದೆ.ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನದಿಂದ ತೊಡಗಿ ಕಳೆದ ವಾರ ಬೀದರಿನಲ್ಲಿ ನಡೆದ ಅಖಿಲ ಭಾರತ ಜಾನಪದ ಸಮ್ಮೇಳನದ ವರೆಗೆ ಕೆಲವು ಕಾರ್ಯಕ್ರಮಗಳಲ್ಲಿ ಪಾಲುಗೊಂಡೆ.ಬಿಜಾಪುರ ಮಹಿಳಾ ವಿವಿಯಲ್ಲಿ ‘ಮಾಧ್ಯಮ ಮತ್ತು ಮಹಿಳೆ’ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆ,ಕನ್ನಡ ವಿವಿ ,ಹಂಪಿಯ ‘ದ್ರಾವಿಡ ಜಾನಪದ ವಿಶ್ವಕೋಶ’ದ ಬಿಡುಗಡೆ-ಇನ್ನೆರಡು ಮುಖ್ಯ ಕಾರ್ಯಕ್ರಮಗಳು.

ನನ್ನ ಬ್ಲಾಗ್ -ಫೆಸ್ ಬುಕ್ ಬರಹಗಳ ಸಂಕಲನ ‘ಬ್ಲಾಗಿಲನು ತೆರೆದು..’ಪುಸ್ತಕ ಹೊರತಂದದ್ದು ತುಂಬಾ ಸಮಾಧಾನ ಕೊಟ್ಟ ಸಂಗತಿ. ಅದರ ಬಿಡುಗಡೆ ಒಂದು ಸಂಭ್ರಮ. ಜಿ.ಎನ್. ಮೋಹನ್ ಅವರ ‘ಮೀಡಿಯ ಮಿರ್ಚಿ ”ಡೋರ್ ನಂಬರ್ ೧೪೨’ ಮತ್ತು ಜೋಗಿ ಅವರ ‘ಊರ್ಮಿಳಾ’ ಕಾದಂಬರಿಗಳನ್ನು ಬೆಂಗಳೂರಲ್ಲಿ ಲೋಕಾರ್ಪಣೆ ಮಾಡಿದ್ದು ಒಂದು ಆಹ್ಲಾದದ ಅನುಭವ. ಜರ್ಮನಿಯಿಂದ ಕರ್ನಾಟಕಕ್ಕೆ ಬಂದಿದ್ದ ಪ್ರೊ.ಬ್ರೂಕ್ನರ್ ಮತ್ತು ಬೆಂಜಮಿನ್ ಜೊತೆಗೆ ಕರಾವಳಿಯ ಬಾರ್ಕೂರು, ಬಸರೂರು, ಕೊಲ್ಲೂರು, ಮರವಂತೆ, ಕಾಪು, ಸುರತ್ಕಲ್, ಮಂಗಳೂರು ತಿರುಗಾಡಿದ್ದು, ಮಾರಿ ದೇವತೆಗಳ ಅನೇಕ ಗುಡಿಗಳನ್ನು ಅಧ್ಯಯನಕ್ಕಾಗಿ ಸಂದರ್ಶಿಸಿದ್ದು ಒಳ್ಳೆಯ ಅನುಭವ .ಪಣಂಬೂರು ಬೀಚಿನಲ್ಲಿ ನೀರಲ್ಲಿ ನೆನೆದದ್ದು ,ಮಲ್ಪೆಯ ತೀರದಲ್ಲಿ ಮೀನಿನ ವಾಸನೆ ಹೀರಿಕೊಂಡದ್ದು ನಾಸ್ಟಾಲ್ಜಿಯಾ.ಜರ್ಮನಿಯಿಂದ ಬಂದ ವಿದ್ಯಾರ್ಥಿಗಳು -ಲಿಯಾ ಮತ್ತು ವೆಂಜೆಲ್ ಅವರನ್ನು ಮಂಗಳೂರು ಸುತ್ತಾಡಿಸಿದ್ದು ನನ್ನ ಊರನ್ನು ಮತ್ತೆ ನೋಡಲು ಅವಕಾಶ ಕಲ್ಪಿಸಿತು.

ಹಿರಿಯ ಸಾಹಿತಿ ಅಮೃತ ಸೋಮೇಶ್ವರ ಮತ್ತು ಪರಿಸರವಾದಿ ಮಂಗಳೂರಿನ ಮೋಹನ್ ಜೊತೆಗೆ ಪಡುಬಿದ್ರಿ ಬಳಿಯ ನಂದಿಕೂರಿನ ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಎಂಟು ಹಳ್ಳಿಗಳನ್ನು ಸುತ್ತಾಡಿ ಸುಮಾರು ಮಂದಿ ಸಂತ್ರಸ್ಥರನ್ನು ಮಾತಾಡಿಸಿ ಅವರ ಸಂಕಷ್ಟಗಳನ್ನೂ ಆಲಿಸಿದ್ದು ಒಂದು ನೋವಿನ ಅನುಭವ.ಉಪ್ಪುನೀರು ಮತ್ತು ಹಾರುಬೂದಿಯಿಂದ ಅಲ್ಲಿನ ಪ್ರಸಿದ್ಧ ಮಲ್ಲಿಗೆ ಹೂ ಮತ್ತು ಜನರ ಸುಕುಮಾರ ಬದುಕು ಕರಟಿ ಹೋಗುತ್ತಿದೆ.

ಈ ಎರಡು ತಿಂಗಳ ಅವಧಿಯಲ್ಲಿ ಅನೇಕ ಹಿರಿಯರನ್ನು ,ಸ್ನೇಹಿತರನ್ನು,ವಿದ್ಯಾರ್ಥಿಗಳನ್ನು ಕಾಣಲು ಮಾತಾಡಲು ಸಾಧ್ಯ ಆದದ್ದು ನನಗ ಧನ್ಯತೆಯ ಸಂತೃಪ್ತಿಯ ನೆನಪು.ಚೆನ್ನೈಗೆ ಹೋಗಿ ಗೆಳೆಯ ಜಾನಪದ ವಿದ್ವಾಂಸ ಮುತುಕುಮಾರಸ್ವಾಮಿಯನ್ನು ಕಂಡೆ ,ಅವರ ಸಂಶೋಧನಾ ಕೇಂದ್ರವನ್ನು ಸಂದರ್ಶಿಸಿದೆ.

ಜರ್ಮನಿ ಸೇರಿದ ಬಳಿಕ ಸ್ಥಗಿತ ಆಗಿರುವ ನನ್ನ ಬ್ಲಾಗಿಗೆ ಮರು ಜೀವ ಕೊಡುತ್ತೇನೆ.ನನ್ನದೇ ವೆಬ್ ಸೈಟ್ ಆರಂಭಿಸಬೇಕು.ಇನ್ನಷ್ಟು ಓದಬೇಕು.ಹೊಸ ವಿದ್ಯಾರ್ಥಿಗಳನ್ನು ಕಾಣಬೇಕು.ನಾಟಕ,ಒಪೆರ ನೋಡಬೇಕು.ಎಲ್ಲದಕ್ಕೂ ನನ್ನ ಸ್ನೇಹಿತರು ನಿಮ್ಮ ಸದಾಶಯ ಬೇಕು.ನಾಳೆಯಿಂದ ಸೂರ್ಯ ಬೆಳಗುವ ನನ್ನ ವ್ಯೂತ್ಸ್ ಬುರ್ಗಿನಲ್ಲಿ ನನ್ನ ಕರ್ನಾಟಕವನ್ನು ಅರಸುತ್ತೇನೆ.

೦೧ ಮೇ ೨೦೧೧ ರಂದು ಬರೆದದ್ದು 

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

4 Responses to “ಮತ್ತೆ ಜರ್ಮನಿಗೆ..”

RSS Feed for ಬಿ ಎ ವಿವೇಕ ರೈ Comments RSS Feed

Great Sir!

ಪುರುಷೋತ್ತಮ್,ಥ್ಯಾಂಕ್.

sir nimma message nodi nanage nanu sagabekada dari estu doddadu endu gottaguttide. tantragnankke vandanegalu, iddakke doorada lekkave illa allave. nimmannu betti madiddu nanagu sambrama.

nandini

ನಂದಿನಿ,ನಿಮ್ಮನ್ನು ಭೇಟಿ ಆದದ್ದು ,ಮಾತಾಡಿದ್ದು ತುಂಬಾ ಸಂತೋಷ .ಥ್ಯಾಂಕ್ಸ್.


Where's The Comment Form?

Liked it here?
Why not try sites on the blogroll...

%d bloggers like this: