ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?..

Posted on ಡಿಸೆಂಬರ್ 29, 2010. Filed under: Uncategorized |


ಕುವೆಂಪು ಜನ್ಮದಿನ -ದಶಂಬರ ೨೯

‘ಕಡಲ್ಗಿದಿರ್ ಪನಿಗೇಮ್ ಪ್ರದರ್ಶನಂ ‘ -‘ಶ್ರೀರಾಮಾಯಣ ದರ್ಶನಂ ‘ ಊರ್ಮಿಳೆ.

**

“ಸದ್ಯ ,ಫಲಾಕಾಂಕ್ಷೆಗಿಂತಲೂ ಕೀರ್ತಿಮೋಹದಿಂದ ಹೆಚ್ಹು ಅನಾಹುತವಾಗುತ್ತದೆ…ಮಂದಿಯ ಕೈಚಪ್ಪಾಳೆ ,ವೃತ್ತಪತ್ರಿಕೆಗಳ ಅಗ್ಗದ ಸ್ತುತಿ,ಬಿರುದು ಬಾವಲಿಗಳ ವ್ಯಾಮೋಹ -ಇವುಗಳಿಗೆ ವಶನಾಗದೆ ,ತಾನು ಹಿಡಿದ ಕೆಲಸವನ್ನು ಪಟ್ಟು ಹಿಡಿದು ನಿಶ್ಶಬ್ದವಾಗಿ ಮಾಡುವಾತನೇ ಕರ್ಮಯೋಗಿ.”

**

‘ನಿರಂಕುಶಮತಿಗಳಾಗಬೇಕಾದರೆ ದಾಸ್ಯಬುದ್ಧಿ ತೊಲಗಬೇಕು,ದಾಸ್ಯಬುದ್ಧಿ ತೊಲಗಬೇಕಾದರೆ ಸ್ವತಂತ್ರವಾಗಿ ಜೀವಿಸಲು ಪ್ರಯತ್ನಿಸಬೇಕು.’

**

‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’

‘ಸ್ವರ್ಗ ಹೋಗುವುದಿಲ್ಲ , ನರಕ ಬರುವುದು ಇಲ್ಲ ;

ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ

ಎದೆಯ ದನಿ ಧರ್ಮನಿಧಿ ! ಕರ್ತವ್ಯವದುವೆ ವಿಧಿ !

ನಂಬದನು ; ಅದನುಳಿದು ಋಷಿಯು ಬೇರಿಲ್ಲ !’

**

‘ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ

ಬಡತನವ ಬುದಮುಟ್ಟ ಕೀಳಬನ್ನಿ ‘

‘ಸಿಲುಕದಿರಿ ಮತವೆಂಬ ಮೋಹದಜ್ನಾನಕ್ಕೆ

ಮತಿಯಿಂದ ದುಡಿಯಿರೈ ಲೋಕಹಿತಕೆ

ಆ ಮತದ ಈ ಮತದ ಹಳೆಮತದ ಸಹವಾಸ

ಸಾಕಿನ್ನು ಸೇರಿರೈ ಮನುಜ ಮತಕೆ

ಓ ,ಬನ್ನಿ ,ಸೋದರರೆ ,ವಿಶ್ವಪಥಕೆ

ಕುವೆಂಪು

 

 

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

4 Responses to “ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?..”

RSS Feed for ಬಿ ಎ ವಿವೇಕ ರೈ Comments RSS Feed

ಹತ್ತಾರು ಹುಚ್ಚರಿರೆ ಹುಚ್ಚನಲ್ಲದ ನರನು ಹುಚ್ಚಾಗಿ ತೋರುವನು- ಕುವೆಂಪು

ಪ್ರಿಯ ಪ್ರೊ. ರೈ ಅವರಿಗೆ:
ಕುವೆಂಪು ಸ್ಮರಣಾರ್ಥ ನೀವು ನಿಮ್ಮ ಬ್ಲಾಗ್‍ನಲ್ಲಿ ಹಾಕಿರುವ ಅವರ ಕುಟುಂಬದ ಅಪರೂಪದ ಭಾವಚಿತ್ರ ಮತ್ತು ಉದಹಸಿರುವ ಅವರ ಕಾವ್ಯದ ಸಾಲುಗಳು ಅರ್ಥಪೂರ್ಣವಾಗಿವೆ. ಧನ್ಯವಾದಗಳು.
ಸಿ. ಎನ್. ರಾಮಚಂದ್ರನ್

ಪ್ರಿಯ ಪ್ರೊ.ರಾಮಚಂದ್ರನ್, ನೀವು ನೋಡಿದಿರಿ ಎನ್ನುವುದೇ ಸಂಭ್ರಮ.ನಿಮ್ಮ ಮೆಚ್ಹುಗೆ ಪರಮ ಸಂತೋಷ.
ನಮಸ್ಕಾರ
ವಿವೇಕ ರೈ

ಏನು ಮರೆತರೂ ಕುವೆಂಪು ಅವರ ಕನ್ನಡ ಪ್ರೇಮ ಮತ್ತು ವಿಶ್ವಮಾನವ ಮತವನ್ನು ಮರೆಯಲಾಗದು. ಅವರನ್ನು ನೆನಪಿಸಿದ್ದಕ್ಕೆ ಮತ್ತು ಸಂದೇಶದಿಂದ ಎಚ್ಚರಿಸಿದ್ದಕ್ಕೆ ವಂದನೆಗಳು ಸರ್ ..

ಈಶ್ವರ ಭಟ್ ಕೆ


Where's The Comment Form?

Liked it here?
Why not try sites on the blogroll...

%d bloggers like this: