ಹಿಮ ಕವಿತೆಗಳು

Posted on ಡಿಸೆಂಬರ್ 1, 2010. Filed under: Uncategorized |


ನಾನು ತೆಗೆದ ಹಿಮ ಫೋಟೋಗಳು, ಅದು ನೋಡಿದಾಗ ಮೂಡಿದ ಸಾಲುಗಳೂ ಇಲ್ಲಿವೆ-

ಹುಲ್ಲಾದರೇನು ಮನೆಯಾದರೇನು ಶಿವ
ಕಲ್ಲಾದರೇನು ಕಾರಾದರೇನು ಶಿವ
ಹಿಮದ ಕೈಲಾಸ ಮಾಡುವಿ ,ನೀನು ಶಿವಾ

ಕಲ್ಲಿನ ಗೊಂಬೆಗೆ ಹಿಮದ ಸ್ನಾನವ ಮಾಡಿದೊಡೆ
ಕಲ್ಲು ಕರಗುವ ಸಮಯ ಬಂದೊಡೆ
ಹಿಮದ ಕಲ್ಲು ಆದರೂ ಕರಗಿಸಬಹುದೇ ನಮ್ಮನು ?

ಚೆಲ್ಲಿದರೋ ಮಲ್ಲಿಗೆಯಾ
ಗಿಡ ಗಂಟೀಯ ತಲೆ ಮೇಲೆಲ್ಲಾ
ತಣ್ಣನೆಯ ನುಣ್ಣನೆಯ ಬೆಣ್ಣಿಯಾ

ಎಲ್ಲಿ ನೋಡಿದರೂ ಗಲ್ಲಿ ಗಲ್ಲಿಯಲಿ
ಬಿಡಿಸಿದ್ದಾರೆ ಯಾರು ಹಿಮದ ರಂಗವಲ್ಲಿ

ನಾ ನಡೆದ ಹಾದಿಯಲಿ ಕಲ್ಲಿಲ್ಲ ಮುಳ್ಳಿಲ್ಲ
ನನ್ನ ಹೆಜ್ಜೆ ಗುರುತು ಕರಗುತದೆ ,ಇನ್ನಿಲ್ಲ

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

4 Responses to “ಹಿಮ ಕವಿತೆಗಳು”

RSS Feed for ಬಿ ಎ ವಿವೇಕ ರೈ Comments RSS Feed

ನಾ ನಡೆದ ಹಾದಿಯಲಿ ಕಲ್ಲಿಲ್ಲ ಮುಳ್ಳಿಲ್ಲ
ನನ್ನ ಹೆಜ್ಜೆ ಗುರುತು ಕರಗುತದೆ ,ಇನ್ನಿಲ್ಲ !

…. ಸರ್ ನಿಮ್ಮ ಹಿಮದ ಸಾಲುಗಳು, ಅದಕ್ಕೆ ಒಪ್ಪುವ ಫೋಟೋ -ಎರಡೂ ಕಾವ್ಯಗಳೆ. ಕಡೆಯ ಸಾಲುಗಳಂತೂ, ಸುಖಕರ ವಲಯದಲ್ಲಿ ಜೀವಿಸುತ್ತಿರುವ ನಮ್ಮ ನಡುವಿನ ಮಧ್ಯಮ ವರ್ಗದ ಮಂದಿಯನ್ನು ನೆನಪಿಸಿತು. ಅವರ ಹಾದಿಯಲ್ಲೂ, ಏನು ಇರುವುದಿಲ್ಲ. ಸೊ, ಬದುಕಿನ ಪಯಣದಲ್ಲಿ ಅವರ ಹೆಜ್ಜೆಗಳು ಮೂಡುವುದಿಲ್ಲ. ಆದರೆ, ಕೆಲವರ ಹಾದಿಯಲ್ಲಿ ಕಲ್ಲು-ಮುಳ್ಳು ಬದಲು, ಕಲ್ಲನ್ನೇ ಕರಗಿಸುವ ಹಿಮ ಇರುತ್ತದೆ. ಆದರೂ, ಅವರ ಹೆಜ್ಜೆ ಗುರುತು ಕರಗುವುದಿಲ್ಲ. ಮತ್ತೆ ಮತ್ತೆ ಮೂಡುತ್ತಲೇ ಇರುತ್ತವೆ !

– ಪಾರ್ವತಿ ಚೀರನಹಳ್ಳಿ

ಪ್ರಿಯ ಚೀರನಹಳ್ಳಿ ರಾಜೀವ್,
ನಿಮ್ಮ ಒಳನೋಟ ತುಂಬಾ ಅರ್ಥಪೂರ್ಣ ಆಗಿದೆ.ನಿಮ್ಮ ಮಾತುಗಳನ್ನು ಓದಿದ ಮೇಲೆ ಹೌದಲ್ಲಾ ಅನ್ನಿಸಿತು.ನನ್ನನ್ನು ನಾನೇ ಅರಿಯಲು ನಿಮ್ಮ ಪ್ರತಿಕ್ರಿಯೆ ಅವಕಾಶ ಕಲ್ಪಿಸಿತು.
ಧನ್ಯವಾದ,
ನಮಸ್ಕಾರ
ವಿವೇಕ ರೈ

ಪ್ರಿಯ ವಿವೇಕ ರೈ ಅವರಿಗೆ:
ನಿಮ್ಮ ’ವಚನಗಳು’ ಹಾಗೂ ಚಿತ್ರಗಳು ಒಂದಕ್ಕೊಂದು ಪೂರಕವಾಗಿವೆ; ಎರಡೂ ಸೇರಿ ಒಂದು ವಿಶಿಷ್ಟ ಅನುಭವವನ್ನು ಕೊಡುತ್ತವೆ. ಹಿಮವು ನಿಮ್ಮ ಮನಸ್ಸನ್ನು ಕರಗಿಸಿ ನಿಮ್ಮ ಕಾವ್ಯಶಕ್ತಿಯನ್ನು ಉದ್ದೀಪನಗೊಳಿಸುವಂತಿದ್ದರೆ ನೀವು ಇನ್ನೂ ಕೆಲವು ವರ್ಷಗಳ ಕಾಲ ವೂಜ಼್ಬರ್ಗ್‍ನಲ್ಲಿಯೇ ಇರಿ; ಇಲ್ಲಿಗೆ ಅನಂತರ ಬರುವ ಹೊತ್ತಿಗೆ ಒಂದು ಉತ್ತಮ ಕವನ ಸಂಕಲನ ಸಿದ್ಧವಗಿರುತ್ತದೆ. ಒಟ್ಟಿನಲ್ಲಿ ಚಿತ್ರ-ಕಾವ್ಯದ ಸಂತೋಷವನ್ನು ಕೊಟ್ಟ ನಿಮಗೆ ವಂದನೆಗಳು.
ಸಿ. ಎನ್. ರಾಮಚಂದ್ರನ್

ಪ್ರಿಯ ಪ್ರೊ.ರಾಮಚಂದ್ರನ್ ಅವರಿಗೆ ,
ನಮಸ್ಕಾರ ಮತ್ತು ಥ್ಯಾಂಕ್ಸ್.
ವಾಲ್ಮೀಕಿ ರಾಮಾಯಣ ನಿಮಗೆ ಗೊತ್ತಿರುವ ವಿಷಯ.’ಶೋಕಂ ಶ್ಲೋಕತ್ವಮಾಗತಃ ‘.
ಹಿಮದ ಹುತ್ತದಲ್ಲಿ ಈಗ ವಾಸಿಸುತ್ತಿರುವ ನಾನು ಗೀಚಿದ ಗೀಮಾಯನವನ್ನು ನೀವು ‘ಕವಿತೆ’ಎಂದು ಭಾವಿಸಿ ಮೆಚ್ಚಿದ ಮೇಲೆ ,ಹಿಮದ ಹುತ್ತದಲ್ಲಿ ‘ಹಿಮೇಶ್ವರ ಆಗಲು ನಾನು ಸಿದ್ಧ.ಆದರೆ ಇಲ್ಲೂ ಹಿಮ ಕರಗಿದ ಮೇಲೆ ಮುಂದೇನು?
ಹಿಮ ಇರದ ,ಮಮ ಇರದ ,ನಿಯಮ ಇರದ ‘ಅನಿಕೇತನ’ ಎಲ್ಲಿದೆ?
ಪ್ರೀತಿಯಿಂದ
ವಿವೇಕ ರೈ


Where's The Comment Form?

Liked it here?
Why not try sites on the blogroll...

%d bloggers like this: