‘ಪ್ರಜಾವಾಣಿ’ಯಲ್ಲಿ ನನ್ನ ವಿಮರ್ಶೆ

Posted on ಮೇ 16, 2010. Filed under: Uncategorized |


ಬಯಲ ಬೆಳಕು
ಸಂ: ಡಾ. ಅಪ್ಪಗೆರೆ ಸೋಮಶೇಖರ್,
ಪು.376, ಬೆ.ರೂ.250.
ಪ್ರ: ದೇಸಿ ಪುಸ್ತಕ, ವಿಜಯನಗರ, ಬೆಂಗಳೂರು- 560 040

ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಕನ್ನಡ ಸಾಹಿತ್ಯದಲ್ಲಿ ಹೊಸ ಹೊಳಹಿನ ಕವಿಯಾಗಿ ಬುದ್ಧನ ಮಾರ್ಗದಲ್ಲಿ ಹೊಸ ದಾರಿಗಳನ್ನು ಕ್ರಮಿಸುತ್ತಾ ಬಂದವರು. ಶಮಗುಣದ ಮಂದಸ್ಮಿತ, ಅನ್ವೇಷಣೆಯ ಕಣ್ಣೋಟ, ಸಮುದಾಯವನ್ನು ಸೇರಿಸಿಕೊಂಡು ಪ್ರಶಾಂತವಾಗಿ ನಡೆಯುವ ದಿಟ್ಟ ಹೆಜ್ಜೆ ಇವೆಲ್ಲ ಮೂಡ್ನಾಕೂಡು ಬದುಕು ಬರಹಗಳಲ್ಲಿ ಕಾಣುವ ಜಲಚಿಹ್ನೆಗಳು. ಕವನ, ಕಥೆ, ನಾಟಕ, ವ್ಯಕ್ತಿಚಿತ್ರ, ಚಿಂತನ, ಅನುವಾದ, ಸಂಪಾದನೆ ಹೀಗೆ ಎಲ್ಲೇ ಹೆಜ್ಜೆ ಇಟ್ಟರೂ ಅಲ್ಲೆಲ್ಲ ಬಹುರೂಪಿಯಾಗಿ ನೊಂದವರ ನೋವು ಚಂದಿರನ ಕಣ್ಣಾಗಿ, ಹಿಂಗಲಾರದ ಹುಣ್ಣಾಗಿ ಬೆಳೆಯುತ್ತ ಅಂತಿಮವಾಗಿ ಬೋಧಿವೃಕ್ಷವಾಗಿ ಚಾಚಿಕೊಳ್ಳುವ ಸಂಕಥನ ಒಂದು ಅದ್ಭುತ ರೂಪಕ. ಅಂಬೇಡ್ಕರ್ ಬದುಕು ಮತ್ತು ಬರಹಗಳು ಕೊಡುವ ರೂಪಕದ ರೂಪಾಂತರಗಳು ಮೂಡ್ನಾಕೂಡು ಅವರ ಬರಹಗಳಲ್ಲಿ, ಕನ್ನಡದ ಮಣ್ಣಿನಲ್ಲಿ ಕಣ್ಣು ಕವಿ ಮೂಗುಗಳಿಗೆ ಹೊಸ ಅನುಭವವನ್ನು ಕೊಡುತ್ತವೆ. ಚಪ್ಪಲಿಯಿಂದ ಬೋಧಿವೃಕ್ಷದವರೆಗೆ ದುಃಖದ ನೋವು ಮತ್ತು ಆನಂದದ ಶಾಂತಸ್ಥಿತಿಯವರೆಗಿನ ಬಹುರೂಪಿ ಚಿಂತನಾವಿನ್ಯಾಸಗಳು ಮೂಡ್ನಾಕೂಡು ಬರಹಗಳ ಅನನ್ಯತೆಯನ್ನು ಪ್ರಕಟಿಸುತ್ತವೆ.

ಮೈಸೂರು, ಚಾಮರಾಜನಗರ ಮತ್ತು ಗುಲ್ಬರ್ಗಗಳಲ್ಲಿ ನಡೆದ ಮೂಡ್ನಾಕೂಡು ಸಾಹಿತ್ಯ ಮಂಥನಗಳು, ಸ್ಪಂದನ ಪ್ರತಿಸ್ಪಂದನಗಳೊಂದಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಅವರ ಸಾಹಿತ್ಯದ ಅನುಸಂಧಾನ ನಡೆಸಿದ ಭಿನ್ನ ಚಿಂತನೆಯ ಲೇಖನಗಳು ಇಲ್ಲಿ ಆಯ್ಕೆಗೊಂಡಿವೆ. ಜೊತೆಗೆ ಚಿನ್ನಸ್ವಾಮಿ ಅವರ ವ್ಯಕ್ತಿತ್ವ ಮತ್ತು ಅವರ ಜೊತೆಗಿನ ಸಂದರ್ಶನ ಹಾಗೂ ಅವರನ್ನು ಕುರಿತ ಇಂಗ್ಲಿಷ್ ಲೇಖನಗಳು ಕೂಡ ಮೂಡ್ನಾಕೂಡು ಅನುಸಂಧಾನಕ್ಕೆ ಹೆಚ್ಚಿನ ವ್ಯಾಪಕತೆಯನ್ನು ತಂದುಕೊಟ್ಟಿವೆ. ಹಿರಿಯ ಸಂಶೋಧಕ, ಕವಿ ಡಾ. ಎಲ್. ಬಸವರಾಜು ಅವರು ‘ಅವರ ಮಾತೆಲ್ಲ ಚಿನ್ನ-ಸ್ವಾಮಿ’ ಎಂದಿರುವಂತೆ ಸಂಯಮ, ಪಕ್ವತೆಯ ಅಭಿವ್ಯಕ್ತಿ, ಪ್ರೀತಿಯ ಒಳಗೊಳ್ಳುವಿಕೆ ಇಪ್ಪತ್ತೊಂದನೇ ಶತಮಾನಕ್ಕೆ, ನವಬೌದ್ಧಿಕ ಜಗತ್ತಿಗೆ ನವಬುದ್ಧತ್ವದ ಬೆಳಕಾಗಿ ಮೂಡ್ನಾಕೂಡು ಅವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಅಧ್ಯಯನ ಸಂತೋಷವನ್ನು ಕೊಡುತ್ತದೆ. ಹೀಗಾಗಿ ಸಾಂಪ್ರದಾಯಿಕ ವಿಚಾರ ಸಂಕಿರಣಗಳ ಲೇಖನಗಳಿಗಿಂತ ಬೇರೆಯಾಗಿ ಆಪ್ತತೆ, ಆತ್ಮೀಯತೆಯ ಆವರಣವೊಂದರ ಸೃಷ್ಟಿ ಈ ಗ್ರಂಥದ ಓದಿನಿಂದ ದೊರೆಯುತ್ತದೆ. ಸಾರಿಗೆಯ ಬಸ್ಸಿನಲ್ಲಿ ಕಿರುವಿಶ್ವದ ಗದ್ದಲದ ನಡುವೆ ಕೆ.ಎಸ್. ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯ ಕವನಗಳ ನಾದಲೀಲೆಯಂತೆ ಇಪ್ಪತ್ತೊಂದನೇ ಶತಮಾನದ ಜಾಗತೀಕರಣದ ಭೋಗ-ಹಿಂಸೆಯ ಆರ್ಭಟದ ನಡುವೆ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವನಗಳು ಮತ್ತು ಸಾಹಿತ್ಯ ನಮಗಾಗಿ ಪುಟ್ಟ ‘ವಿಹಾರ’ವೊಂದನ್ನು ನಿರ್ಮಿಸುತ್ತವೆ.

‘ಬಯಲ ಬೆಳಕು’ ಗ್ರಂಥದ ಮೂಲಕ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಾಹಿತ್ಯ ಮತ್ತು ಬದುಕಿನ ಬಹುರೂಪಿ ದರ್ಶನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸಂಪಾದಕ ಡಾ. ಅಪ್ಪಗೆರೆ ಸೋಮಶೇಖರ ಅವರು ಅಭಿನಂದನಾರ್ಹರು.
(ಮುನ್ನುಡಿಯಲ್ಲಿ)

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: