ಹುಣ್ಣಿಮೆಯ ರಾತ್ರಿ

Posted on ಏಪ್ರಿಲ್ 3, 2010. Filed under: Uncategorized |


File:Goethe (Stieler 1828).jpgಜರ್ಮನ್ ಕಾದಂಬರಿಕಾರ ಕವಿ ಲೇಖಕ ಗಯತೆ (೧೭೪೯-೧೮೩೨) ೧೭೭೦ ರಿಂದಲೇ  ಕವನ ಬರೆಯಲು ತೊಡಗಿದ.ತರುಣ ಗಯತೆಯಾ ಕವನಗಳು ೧೭೮೬ರ ವರೆಗೆ ಒಂದು ಹಂತವಾದರೆ ,ಬಳಿಕದ ೧೮೧೦ರ ವರೆಗಿನ ರಚನೆಗಳು ನಡು ವಯಸ್ಸಿನ ಎರಡೆನೆಯ ಹಂತ.೧೮೩೨ರಿನ್ದ ೧೮೩೨ರ ಕೊನೆಯ ಅವಧಿಯಲ್ಲಿ ಗಯತೆ ಬರೆದ ಕವನಗಳು ಹಿಂದಿನ ಕಾಲಘಟ್ಟಗಳ ರೂಪಾಂತರಗಳಾಗಿ ಕಾಣಿಸುತ್ತವೆ.ಅಂತಹ ಒಂದು ಕವನವನ್ನು ಕನ್ನಡದಲ್ಲಿ ‘ ಹುಣ್ಣಿಮೆಯ ರಾತ್ರಿ ‘ ಹೆಸರಿನಲ್ಲಿ ರೂಪಾಂತರಿಸಿ ,ಇಲ್ಲಿ ಕೊಡುತ್ತಿದ್ದೇನೆ.

-ಪಿಸುಗುಟ್ಟುತ್ತಿರುವುದು ಏನನು ಹೇಳು ಹುಡುಗಿ

ಕಂಪಿಸುತಿವೆ ತುಟಿಗಳು ಈಗಲೂ

ಗುನುಗುನಿಸುತಿರುವೆ ನಿನ್ನ ಪಾಡಿಗೆ ನೀನು

ಮೆದುವಾಗಿ ಗಾಳಿಯಂತೆ ,

ಇಷ್ಟು ಸಿಹಿ ಇರಲಿಲ್ಲ ವೈನ್ ನ ಗುಟುಕು ಎಂದೂ

ಅರಸುತಿರುವರೆ ಅವಳಿ ಸೋದರಿಯರು ನಿನ್ನ ಬಾಯಿಯ

ಸೆಳೆಯಲು ಅನುರೂಪದ ಸಂಗಾತಿಗಳನು ?

‘ಅವನಿಗೆ ಮುತ್ತಿಡಬೇಕು ನನಗೆ , ಅವನಿಗೆ ಮುತ್ತಿಡಬೇಕು ‘

ನೋಡು , ಈ ಸಂಶಯದ  ಕತ್ತಲೆಯಲಿ

ರೆಂಬೆಕೊಂಬೆಗಳು ಹೊಳೆಯುತಿವೆ ಅರಳುತಿವೆ ಹೇಗೆ !

ನಕ್ಷತ್ರಗಳ ಬೆಳಕಿನಾಟ , ಮಿನುಗು ಮಿನುಗೆಲೆ ನಕ್ಷತ್ರ !

ಗಿಡಗಂಟಿಯೊಳಗಿಂದ ಮರಕತದ ಹೊಳಪು

ಸಾವಿರದ ರತ್ನಗಳ ಮಿಂಚಿನಾಟ !

ಆದರೆ , ನಿನ್ನ ಭಾವಗಳೋ ಅಲೆದಾಡಿವೆ ದೂರ ದೂರ .

‘ಅವನಿಗೆ ಮುತ್ತಿಡಬೇಕು ನನಗೆ , ಅವನಿಗೆ ಮುತ್ತಿಡಬೇಕು ‘

ಈ ಸಿಹಿ-ಕಹಿಯಾದರೋ

ಗೊತ್ತು ಚೆನ್ನಾಗಿ ಅವನಿಗೆ ,ನಿನ್ನ ದೂರದೂರಿನ ಇನಿಯಗೆ ,

ಅನುಭವಿಸುತಾನೆ ನೋವಿನ ಸುಖವನು .

ಅಭಿನಂದಿಸಲು ಪರಸ್ಪರ ಆತ್ಮಸಾಕ್ಷಿಯಾಗಿ ಪ್ರಮಾಣ ಮಾಡಿದಿರಿ ನೀವು

ಹುಣ್ಣಿಮೆಯ ಚಂದಿರನ ಉದಯದಲಿ :

ಈಗ ಮತ್ತೆ ಬಂದಿದೆ ಅಪೂರ್ವ ಘಳಿಗೆ .

‘ಅವನಿಗೆ ಮುತ್ತಿಡಬೇಕು ನನಗೆ ,ಅವನಿಗೆ ಮುತ್ತಿಡಬೇಕು ‘

………………………………………………………………………………………………………………………………………………………..

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಹುಣ್ಣಿಮೆಯ ರಾತ್ರಿ”

RSS Feed for ಬಿ ಎ ವಿವೇಕ ರೈ Comments RSS Feed

“ನೋಡು , ಈ ಸಂಶಯದ ಕತ್ತಲೆಯಲಿ

ರೆಂಬೆಕೊಂಬೆಗಳು ಹೊಳೆಯುತಿವೆ ಅರಳುತಿವೆ ಹೇಗೆ !

ನಕ್ಷತ್ರಗಳ ಬೆಳಕಿನಾಟ , ಮಿನುಗು ಮಿನುಗೆಲೆ ನಕ್ಷತ್ರ !”

ತುಂಬಾ ಅಪರೂಪದ ಸಾಲುಗಳಿವು!ನೀವಿದನ್ನು ’ಗಯತೆ’ಯ ಕವಿತೆ ಎಂದು ಹೇಳದಿದ್ದಲ್ಲಿ, ನನ್ನಂಥ ದೇಸೀಯ ಒಂದೆರೆಡು ಭಾಷೆಗಳನ್ನು ಮಾತ್ರ ಬಲ್ಲವರಿಗೆ ಇದು ಅನುವಾದಿತ ಅಂತನ್ನಿಸುವುದೇ ಇಲ್ಲ ಸರ್. ಅನುವಾದಿತ ಅಂತ ಗೊತ್ತಾಗೋದು ವೈನ್ ನಿಂದಾಗಿ ಮಾತ್ರ.:-)
ಕವಿಯ ಪರಿಚಯಕ್ಕೆ ಧನ್ಯವಾದಗಳು.

ಜಯಲಕ್ಷ್ಮಿ ಅವರಿಗೆ ಥ್ಯಾಂಕ್ಸ್.ನಿಮ್ಮಂತಹ ಕಲಾವಿದೆ ಕಾಣುವ ನೋಟ ಕವನದ ಸಾರ್ಥಕತೆ .


Where's The Comment Form?

Liked it here?
Why not try sites on the blogroll...

%d bloggers like this: