ಅಗ್ರಾಳ ಲೇಖನ ಮಾಲೆ:ಮಾತನ್ನು ಆಡುವ ಕಲೆಗಾರಿಕೆ

Posted on ಮಾರ್ಚ್ 30, 2010. Filed under: ನನ್ನ ಅಪ್ಪ.. |


1935, ನಾನು ಪುತ್ತೂರಿನ ಬೋರ್ಡು ಹೈಸ್ಕೂಲಿನಲ್ಲಿ ಮೂರನೇ ಫಾರ್ಮಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲ. ಸ್ಕೂಲ್ಡೇಗಾಗಿ ಏರ್ಪಡಿಸಿದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ ಬಂದಿತು. ಇದು ನನ್ನ ಭಾಷಣ ಕಲೆಯ ಮೊದಲನೆಯ ಪಾಠ. ಆಮೇಲೆ ಭಾರತ ಸ್ವಾತಂತ್ರ್ಯ ಚಳುವಳಿ, ಕಾಂಗ್ರೆಸ್, ಚುನಾವಣೆ – ಹೀಗೆ ಮಾತನ್ನು ಆಡುವ ಕಲೆಗಾರಿಕೆ ಬೆಳೆಯುತ್ತಾ ಬಂತು. ರಾಜಕೀಯ, ಸಾಹಿತ್ಯಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡುವ ಅವಕಾಶಗಳನ್ನು ಯಾವುದನ್ನೂ ಕಳೆದುಕೊಳ್ಳಲಿಲ್ಲ. ನನ್ನ ಸಾಹಿತ್ಯದ ಓದು, ಪತ್ರಿಕೆಗಳ ಪಠನದ ಪ್ರಯೋಜನವನ್ನು ಭಾಷಣಗಳಲ್ಲಿ ಅಳವಡಿಸಿಕೊಂಡೆ.

ಎನ್.ಎಸ್. ಕಿಲ್ಲೆಯವರ ವಾದಕ್ಕೆ ವಿರುದ್ಧವಾಗಿ ಭಾಷಣ ಮಾಡಿದ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ‘ಅಳಿಯ ಕಟ್ಟಿನ ಸುಧಾರಣೆ’ಯನ್ನು ಕುರಿತ ಚರ್ಚೆಯೊಂದರಲ್ಲಿ ಅಳಿಯಕಟ್ಟಿನಲ್ಲಿ ಬದಲಾವಣೆ ಬೇಡವೆಂದು ಎನ್.ಎಸ್. ಕಿಲ್ಲೆ, ಎ.ಬಿ. ಶೆಟ್ಟಿ, ಕೆ.ಎಸ್. ಹೆಗ್ಡೆ ಅವರಂತಹ ಕಾನೂನುತಜ್ಞರು, ವಾಗ್ಮಿಗಳು, ಹಿರಿಯರು ವಾದಿಸಿದರು. ನಾನು ಇದಕ್ಕೆ ವಿರುದ್ಧವಾಗಿ ಮಾತನಾಡಿದೆ. ನನಗೆ ಬೆಂಬಲವಾಗಿ ಮಾತನಾಡಿದವರು ಪುಷ್ಪಾ ಜೆ. ಶೆಟ್ಟಿ, ಶಿವಪೂಂಜಾ ಮುಂತಾದವರು. ನನ್ನ ವಾದದ ಸಾರಾಂಶ ಹೀಗಿತ್ತು : ಕಾಲಸ್ಥಿತಿ ಬದಲಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ಸ್ವಾತಂತ್ರ್ಯ ಬೇಕು. ಅಳಿಯಕಟ್ಟಿನ ಕುಟುಂಬದ ಗಂಡು ಸದಸ್ಯನೊಬ್ಬನಿಗೆ ಆಸ್ತಿಯಲ್ಲಿ ದೊರೆಯುವ ಪಾಲು ಅತ್ಯಲ್ಪ. ಅವಿಭಕ್ತ ಕುಟುಂಬದ ಯಜಮಾನನಾದವನು ಒಬ್ಬ ಗಂಡು ಸದಸ್ಯನಿಗೆ 4 ಮುಡಿಯಷ್ಟರ ಪಾಲನ್ನು ಕೊಡದಿದ್ದರೆ ಆತ ಏನು ಮಾಡಬೇಕು? ಹೆಂಡತಿ ಮಕ್ಕಳನ್ನು ಹೇಗೆ ಸಾಕಬೇಕು? ಸಂಪ್ರದಾಯ ನಿಷ್ಠೆಯಿಂದ ವ್ಯಕ್ತಿಗತ ಪ್ರತಿಭೆ ಕಮರಿ ಹೋಗುತ್ತದೆ. ಆದ್ದರಿಂದ ಅಳಿಯಕಟ್ಟಿನ ಪದ್ಧತಿ ಬದಲಾಗಬೇಕು. ಒಟ್ಟಿನಲ್ಲಿ ಪರ್ ಕ್ಯಾಪಿಟಾ ಪಾಲು ಸಿಗಬೇಕು. ನಾನು ನನ್ನ ಅನುಭವವನ್ನೇ ಆಧರಿಸಿ ವಾದ ಮಾಡಿದ್ದೆ. ಮುಂದೆ ಅನೇಕರಿಗೆ ಇದು ಮನವರಿಕೆ ಆಯಿತು.

ಪುತ್ತೂರಿನಲ್ಲಿ ಒಂದು ಬಾರಿ ಒಂದು ವಿಶಿಷ್ಟ ಕಾರ್ಯಕ್ರಮ. ‘ನನ್ನ ವೃತ್ತಿ ಮೇಲು’ ಎಂಬ ವಿಷಯದ ಬಗ್ಗೆ ಬೇರೆ ಬೇರೆ ವೃತ್ತಿಯವರಿಂದ ಭಾಷಣ. ನಾನು ಪತ್ರಕರ್ತ ವೃತ್ತಿಯ ಬಗ್ಗೆ ಮಾತನಾಡಿದೆ. ನನ್ನ ಭಾಷಣಕ್ಕೆ ಮೆಚ್ಚುಗೆ ದೊರೆಯಿತು.

ನಾನು ಚಿಕ್ಕಂದಿನಿಂದಲೇ ಯಕ್ಷಗಾನದಿಂದ ಪ್ರಭಾವಿತನಾಗಿದ್ದೆ. ಪುಣಚಾ ಗ್ರಾಮದ ಒಳಗೆ ತಾಳಮದ್ದಳೆ ಕೂಟಗಳಲ್ಲಿ ಅರ್ಥ ಹೇಳುತ್ತಿದ್ದೆ. ಯಕ್ಷಗಾನ ಮಾದರಿಯ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದೆ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: