ಅಗ್ರಾಳ ಲೇಖನ ಮಾಲೆ:ವರ್ಣ ಮಾತ್ರಂ ಕಲಿಸಿದಾತಂ ಗುರು

Posted on ಮಾರ್ಚ್ 23, 2010. Filed under: ನನ್ನ ಅಪ್ಪ.. |


1946ರ ಬಳಿಕ ಪುಣಚಾ ಪರಿಯಾಲ್ತಡ್ಕ ಎಲಿಮೆಂಟರಿ ಶಾಲೆಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಮೂರು ಬಾರಿ ಅಧ್ಯಾಪಕನಾಗಿ ಮಕ್ಕಳಿಗೆ ಪಾಠ ಮಾಡಿದ ಅನುಭವ ಅಪೂರ್ವವಾದುದು. ಆ ಶಾಲೆಯ ಅಧ್ಯಾಪಕರು ತರಬೇತಿಗೆ ಹೋದಾಗ ಅಧ್ಯಾಪನ ಮಾಡಲು ನನಗೆ ಕರೆ ಬರುತ್ತಿತ್ತು. ನಾನು ಪಾಠ ಮಾಡಿದ್ದು 2 ಮತ್ತು 3ನೇ ತರಗತಿಗಳಿಗೆ. ಒಟ್ಟು 3 ವರ್ಷಗಳ ಕಾಲ ಅಧ್ಯಾಪಕನಾಗಿದ್ದ ಧನ್ಯತಾಭಾವ ನನ್ನದು. ನನ್ನ ಅಧ್ಯಾಪನಕ್ಕೆ ನನಗೆ ತಿಂಗಳಿಗೆ 30 ರೂಪಾಯಿ ಸಂಬಳ. ಅದರಲ್ಲಿ 5 ರೂಪಾಯಿಯನ್ನು ಶಾಲಾ ಫಂಡಿಗೆ ತೆಗೆದುಕೊಂಡು, ಉಳಿದ 25 ರೂಪಾಯಿಯನ್ನು ನನಗೆ ವೇತನವಾಗಿ ಕೊಡುತ್ತಿದ್ದರು. ಈ ಎಲ್ಲ ಹಣಕ್ಕಿಂತ ನನಗೆ ಮುಖ್ಯವಾದದ್ದು, ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ನನಗೆ ಸಿಕ್ಕಿದ ಸದವಕಾಶ. ಮುಂದೆ ಮಕ್ಕಳ ಮನೋವಿಜ್ಞಾನದ ಬಗ್ಗೆ ಪುಸ್ತಕಗಳನ್ನು ಓದಿದೆ, ಮಕ್ಕಳ ಶಿಕ್ಷಣದ ಬಗ್ಗೆ ಲೇಖನಗಳನ್ನು ಬರೆದೆ.

ಸಂಕೋಲೆ ಹಿಡಿದದ್ದು, ಅಂಕೆಗಳ ಎಣಿಸಿದ್ದು

ಮಾತ್ರಾರ್ಜಿತ ಕೃಷಿ ಭೂಮಿಯಿಂದಲೇ ಜೀವನ ಸಾಗಿಸುವುದು ಕಷ್ಟವಾಗಿತ್ತು. ಜೊತೆಗೆ ಯಾವುದಾದರೂ ಉದ್ಯೋಗ ಬೇಕಿತ್ತು. ಹಾಗಾಗಿ 1938ರಲ್ಲಿ ಪಡುಬಿದ್ರಿಯಲ್ಲಿ ಸರ್ವೆ ಟ್ರೈನಿಂಗ್ ಮಾಡಿದೆ, ಶ್ಯಾನುಭೋಗನಾಗಲು ಅರ್ಹತೆ ಪಡೆದೆ. ಆದರೆ ಪೂರ್ಣ ಪ್ರಮಾಣದ ಶ್ಯಾನುಭೋಗ ಉದ್ಯೋಗ ದೊರೆಯಲಿಲ್ಲ. ಆರ್ಯಾಪು ಗ್ರಾಮದ ಶ್ಯಾನುಭೋಗರಿಗೆ ಸಹಾಯಕನಾಗಿ ಸ್ವಲ್ಪ ಕಾಲ ಕೆಲಸ ಮಾಡಿದೆ. ಸರ್ವೆ ಟ್ರೈನಿಂಗ್ ಕಲಿತದ್ದಕ್ಕೆ ಸಂಕೋಲೆ ಹಿಡಿಯುವ ಯೋಗ ದೊರೆಯಿತು.

ನನ್ನ ಮಾವ – ಹೆಂಡತಿಯ ತಂದೆ – ಬೈಲುಗುತ್ತು ಸಂಕಪ್ಪ ರೈಯವರು ಪುಣಚಾ ಗ್ರಾಮದ ಪಠೇಲರಾಗಿದ್ದರು. ಅವರು ರಜೆ ಹಾಕಿದಾಗಲೆಲ್ಲ ಬದಲಿ ಪಠೇಲನಾಗಿ ನಾನು ಕಾರ್ಯ ನಿರ್ವಹಿಸುತ್ತಿದ್ದೆ. ಆ ಕಾಲಕ್ಕೆ ಪಠೇಲರಿಗೆ ಗ್ರಾಮ ನ್ಯಾಯಾಧೀಶನ ಅಧಿಕಾರವಿತ್ತು. ಊರಿನಲ್ಲಿ ನಡೆಯುತ್ತಿದ್ದ ಅನೇಕ ವಿವಾದಗಳನ್ನು ಬಗೆಹರಿಸುವುದು, ಅಪರಾಧಿಗಳಿಗೆ ಶಿಕ್ಷೆ ಕೊಡುವುದು, ಕಂದಾಯ ವಸೂಲು ಮಾಡುವುದು, ಗ್ರಾಮದ ಜನನ ಮರಣ ಮುಂತಾದ ಲೆಕ್ಕಪತ್ರ ಇಡುವುದು – ಹೀಗೆ ಬಹುಬಗೆಯ ಅಧಿಕಾರ ಜವಾಬ್ದಾರಿಗಳಿದ್ದುವು. 1974ರ ಬಳಿಕ ಒಂದು ವರ್ಷ ನಾನು ಸ್ವತಂತ್ರವಾಗಿ ಪುಣಚಾ ಗ್ರಾಮದ ಪಠೇಲನಾಗಿ ಕೆಲಸ ಮಾಡಿದೆ. ಆ ಕಾಲಕ್ಕೆ ‘ಗ್ರಾಮ ಲೆಕ್ಕಿಗ’ ಹುದ್ದೆ ಪ್ರತ್ಯೇಕವಾಗಿ ಇದ್ದ ಕಾರಣ, ಪಠೇಲರ ಮುಖ್ಯ ಕೆಲಸ ಜನನ – ಮರಣ ರಿಜಿಸ್ತ್ರಿ ಮಾಡುವುದಕ್ಕಷ್ಟೇ ಸೀಮಿತವಾಗಿತ್ತು. ಅಂದು ಇಟ್ಟ ಅಂಕೆಗಳ ಲೆಕ್ಕ ಇಂದು ನೆನಪು ಮಾಡಿಕೊಳ್ಳಲಾರೆ. ಆದರೆ ಪಠೇಲರಿಗೆ ದೊರೆಯುತ್ತಿದ್ದ ಸಂಬಳ ಈಗಲೂ ನೆನಪಿದೆ – ತಿಂಗಳಿಗೆ 20 ರೂಪಾಯಿ.

ಮುಂದಿನ ಭಾಗ : ಖಾದಿ ತೊಟ್ಟು ಗಾದಿ ಬಯಸದ ಹಾದಿ ತುಳಿದದ್ದು

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

2 Responses to “ಅಗ್ರಾಳ ಲೇಖನ ಮಾಲೆ:ವರ್ಣ ಮಾತ್ರಂ ಕಲಿಸಿದಾತಂ ಗುರು”

RSS Feed for ಬಿ ಎ ವಿವೇಕ ರೈ Comments RSS Feed

ಸಾರ್ ತುಂಬಾ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರ್ತಾ ಇದೆ. ಆದ್ರೆ…ನೀವು ಸ್ವಲ್ಪ ಸ್ವಲ್ಪಾನೆ ಉಣಿಸುತ್ತೀರಿ…ಹೆಚ್ಚು ಹೆಚ್ಚು ಬಡಿಸಬಾರದೇಕೆ….!?
ಪ್ರೀತಿಯಿಂದ,

ಸಂತೋಷ್, ನಮಸ್ಕಾರ.
ಮುಂದೆ ಹೆಚ್ಚು ಬಡಿಸುತ್ತೇನೆ.ನಾನು ಬ್ಲಾಗ್ ಅಡುಗೆಯನ್ನು ಹೊಸತಾಗಿ ಕಲಿತವನು.ನಿಮ್ಮ ಪ್ರೀತಿ ಸಂತೋಷ ಕೊಡುತ್ತದೆ.


Where's The Comment Form?

Liked it here?
Why not try sites on the blogroll...

%d bloggers like this: