ವೇಣಿ ಸಂಹಾರ, ಊರುಭಂಗ, ಕುಮಾರ ಸಂಭವ

Posted on ಮಾರ್ಚ್ 19, 2010. Filed under: Uncategorized |


ಪ್ರೊ.ಎಸ.ವಿ ಪರಮೇಶ್ವರ ಭಟ್ಟರು (ಎಸ್ವಿಪಿ) ಸದಾ ಹಾಸ್ಯದ ಮೂಲಕವೇ ಬದುಕಿನ ಕಹಿಯನ್ನು ಮರೆಯುತ್ತಿದ್ದರು.

ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಅವರು ನಿರ್ದೇಶಕರು ಮತ್ತು ಕನ್ನಡ ಪ್ರೊಫೆಸರ್ ಆಗಿದ್ದಾಗ ನಾನು ಎಂ.ಎ ವಿದ್ಯಾರ್ಥಿ(೧೯೬೮-೧೯೭೦). ಆಗ ಅಲ್ಲಿ ನಾರಾಯಣ ಗಟ್ಟಿ ಎನ್ನುವ ಜವಾನ ಇದ್ದ. ಕಲ್ಲಡ್ಕದವನು. ತುಂಬಾ ಪ್ರಾಮಾಣಿಕ. ಅವನಲ್ಲಿ ಇವರು ಹೇಳುತ್ತಿದ್ದ ಒಂದು ಜೀವನ ತತ್ವ: ‘ ನಾರಾಯಣ, ನೀನು ಯಾವುದೇ ಕೆಲಸ ಮಾಡುವಾಗಲೂ ದೇವರು ನಮ್ಮನ್ನು ಹುಟ್ಟಿಸಿದ್ದು ಈ ಕೆಲಸಕ್ಕಾಗಿಯೇ ಎಂದು ಮಾಡಬೇಕು.ನೀನು ಲಕೊಟೆಗೆ ಸ್ಟಾಂಪ್ ಹಚ್ಚುವಾಗ, ನಾನು ಹುಟ್ಟಿದ್ದೇ ಲಕೊಟೆಗೆ ಸ್ಟಾಂಪ್ ಹಚ್ಚುವುದಕ್ಕೆ ಎಂದು ಕೆಲಸ ಮಾಡಬೇಕು. ಊಟ ಮಾಡುವಾಗ ನಾನು ಹುಟ್ಟಿದ್ದೇ ಊಟ ಮಾಡುವುದಕ್ಕೆ ಎಂದು ಊಟಮಾಡಬೇಕು.. ಲಕೋಟೆಗೆ ಸ್ಟಾಂಪ್ ಹಚ್ಚುವಾಗ ಊಟದ ಚಿಂತೆ ಮಾಡಬಾರದು, ಊಟ ಮಾಡುವಾಗ ಲಕೋಟೆಗೆ ಸ್ಟಾಂಪ್ ಹಚ್ಚುವ ಚಿಂತೆ ಮಾಡಬಾರದು. ಆಗ ಎರಡೂ ಕೆಲಸಗಳು ಚೆನ್ನಾಗಿ ಆಗುತ್ತವೆ.’

ಹಾಸ್ಯದ ಹಾಗೆ ಕಂಡರೂ ಈ ಮಾತುಗಳ ಹಿಂದೆ ಕಾಯಕದ ತತ್ವದ ಜೀವನದರ್ಶನವಿದೆ. ನಾನು ನನ್ನ ಬದುಕಿನಲ್ಲಿ ಇದನ್ನು ಒಂದು ಆದರ್ಶವೆಂದು ಭಾವಿಸಿ ಅನುಸರಿಸಲು ಪ್ರಯತ್ನಿಸಿದ್ದೇನೆ. ಹಾಗಾಗಿ ಈಗ ನಾನು ತಿಳಿದುಕೊಂಡಿರುವುದು,’ನಾನು ಹುಟ್ಟಿದ್ದೇ ಜರ್ಮನಿಯ ವ್ಯೂರ್ತ್ಸ್ ಬುರ್ಗ್ಲ್ ನಲ್ಲಿ ಕನ್ನಡ ಕಲಿಸಲು’ಎಂದು.

ಎಸ್ವಿಪಿ ತರಗತಿಯ ಪಾಠಗಳಲ್ಲಿ ಶೃಂಗಾರದ ನಿದರ್ಶನಗಳ ಮೂಲಕ ತರುಣ ವಿದ್ಯಾರ್ಥಿಗಳಲ್ಲಿ ಲವಲವಿಕೆ ತುಂಬುತ್ತಿದ್ದರು.ಅಲ್ಲಿ ಶೀಲ ಅಶ್ಲಿಲಗಳ ಗೊಂದಲ ಇರಲಿಲ್ಲ. ಒಂದು ಬಾರಿ ತರಗತಿಯಲ್ಲಿ ಅವರು ಹೇಳಿದ ಜೋಕು:

ಅವರು ಕನ್ನಡ ಪಾಠ ಮಾಡುವ ಸಂಸ್ಥೆಯಲ್ಲಿ ಸಂಸ್ಕೃತ ಅಧ್ಯಾಪಕರೊಬ್ಬರು ಇದ್ದರು. ಸಾಮಾನ್ಯವಾಗಿ ಅಧ್ಯಾಪಕರು ವರ್ಷದ ಕೊನೆ ಹತ್ತಿರವಾದಂತೆ ತಮ್ಮ ಪಾಠಗಳನ್ನು ಮುಗಿಸುವ ತರಾತುರಿಯಲ್ಲಿ ಇರುತ್ತಾರೆ . ಒಬ್ಬರು ಇನ್ನೊಬ್ಬರಲ್ಲಿ ನಿಮ್ಮ ಪೋರ್ಷನ್ ಎಷ್ಟಾಯಿತು ಎಂದು ಕೇಳುತ್ತಾರೆ. ಭಟ್ಟರು ಸಂಸೃತ ಪಂಡಿತರಲ್ಲಿ ಕೇಳಿದರಂತೆ :’ ಪಂಡಿತರೇ, ವೇಣಿ ಸಂಹಾರ ಆಯಿತೋ ?’ ಎಂದು. ಪಂಡಿತರು ಸಹಜವಾಗಿಯೇ ಹೇಳಿದರು,’ ಆಯಿತು’ ಎಂದು. ಭಟ್ಟರು ಮತ್ತೆ ಕೇಳಿದರು ,’ಮುಂದೆ ಏನು ಮಾಡಿದಿರಿ ?’ ಪಂಡಿತರು ಮುಗ್ಧವಾಗಿಯೇ ಉತ್ತರಿಸಿದರು : ‘ಊರುಭಂಗ .’ ಭಟ್ಟರ ಮುಂದಿನ ಕೀಟಲೆಯ ಪ್ರಶ್ನೆ ; ‘ಹಾಗಾದರೆ ಮುಂದೆ ಕುಮಾರಸಂಭವ ಆಗಿರಬೇಕಲ್ಲ ?’

‘ಪ್ರೊಫೆಸರ್ ಎಸ ವಿಪಿ ಮೊದಲ ಭಾರಿ ಈ ಪ್ರಸಂಗ ಹೇಳಿದಾಗ ಅರ್ಥವಾಗದೆ ನಾವು ವಿದ್ಯಾರ್ಥಿಗಳು ಗಂಭೀರವಾಗಿದ್ದೆವು. ಮತ್ತೆ ಅವರೇ ಎರಡನೇ ಬಾರಿ ಹೇಳಿ ನಕ್ಕಾಗ ,ಸಂಸ್ಕೃತದ ಈ ಮೂರು ಕೃತಿಗಳ ಹೆಸರುಗಳ ಅನುಕ್ರಮಣಿಕೆಯ ಹಿಂದಿನ ಘೋರ ಶೃಂಗಾರ  ನಿಧಾನವಾಗಿ ತಲೆಗೆ ಹೊಕ್ಕಿತು.ಎಷ್ಟಾದರೂ ಓದುವ ಹುಡುಗರಲ್ಲವೇ?

*** ನನ್ನ ಬ್ಲಾಗ್ ನಲ್ಲಿ ಇರುವ ಇನ್ನೊಂದು ಬರಹ -‘ಪ್ರೀತಿಯ ಶಿಷ್ಯರ ಆತ್ಮೀಯ ಗುರು:ಎಸ.ವಿ.ಪರಮೇಶ್ವರ ಭಟ್ಟ ‘ .ಇದನ್ನು ಓದಿರಿ.***

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

5 Responses to “ವೇಣಿ ಸಂಹಾರ, ಊರುಭಂಗ, ಕುಮಾರ ಸಂಭವ”

RSS Feed for ಬಿ ಎ ವಿವೇಕ ರೈ Comments RSS Feed

’ಅಳು ನುಂಗಿ ನಗು ಒಮ್ಮೆ ನಾನೂ ನಕ್ಕೇನ’ ಎಂಬ ಬೇಂದ್ರೆ ನುಡಿಯನ್ನು ತಮ್ಮ ಅಂತರಾತ್ಮಕ್ಕೇ ಬೋಧಿಸಿ ಅದರಂತೆ ಜೀವನ ನಡೆಸಿದ ಮಹಾನ್ ವ್ಯಕ್ತಿ ಎಸ್.ವಿ. ಪರಮೇಶ್ವರ ಭಟ್ಟರು. ಎಸ್.ವಿ.ಪಿ. ಅವರ ’ಇಂದ್ರಚಾಪ’ ನನ್ನ ಅಭಿಪ್ರಾಯದಲ್ಲಿ ಕನ್ನಡದ ಮೇರುಕೃತಿಗಳಲ್ಲೊಂದು. (’ಇಂದ್ರಚಾಪ’ದಲ್ಲಿನ ಶಿವಧನುಸ್ಸಿನ ಹಾಸ್ಯಪ್ರಸಂಗವನ್ನು ವಿವೇಕ ರೈಗಳು ಈ ಹಿಂದೆ ತಮ್ಮ ಬರಹವೊಂದರಲ್ಲಿ ಉಲ್ಲೇಖೀಸಿದ್ದನ್ನು ಓದಿದ್ದ ನೆನಪು ನನಗೆ.)
ಅಂದಹಾಗೆ, ಎಸ್.ವಿ.ಪಿ. ಅವರ ಜನ್ಮಸ್ಥಳ ವಿದ್ಯಾರಣ್ಯಪುರ. ನನ್ನ ಪ್ರಸ್ತುತ ವಾಸಸ್ಥಳವೂ ವಿದ್ಯಾರಣ್ಯಪುರ! ಆದರೆ, ಮೊದಲಿನದು ಶೃಂಗೇರಿಯ, ಸೊಬಗಿನ ವಿದ್ಯಾರಣ್ಯಪುರ; ನಾನಿರುವುದು ಬೆಂಗಳೂರಿನ ಕಾಂಕ್ರಿಟ್ ಕಾಡು ವಿದ್ಯಾರಣ್ಯಪುರ!

’ಅಳು ನುಂಗಿ ನಗು ಒಮ್ಮೆ ನಾನೂ ನಕ್ಕೇನ’ ಎಂಬ ಬೇಂದ್ರೆ ನುಡಿಯನ್ನು ತಮ್ಮ ಅಂತರಾತ್ಮಕ್ಕೇ ಬೋಧಿಸಿ ಅದರಂತೆ ಜೀವನ ನಡೆಸಿದ ಮಹಾನ್ ವ್ಯಕ್ತಿ ಎಸ್.ವಿ. ಪರಮೇಶ್ವರ ಭಟ್ಟರು. ಎಸ್.ವಿ.ಪಿ. ಅವರ ’ಇಂದ್ರಚಾಪ’ ನನ್ನ ಅಭಿಪ್ರಾಯದಲ್ಲಿ ಕನ್ನಡದ ಮೇರುಕೃತಿಗಳಲ್ಲೊಂದು. (’ಇಂದ್ರಚಾಪ’ದಲ್ಲಿನ ಶಿವಧನುಸ್ಸಿನ ಹಾಸ್ಯಪ್ರಸಂಗವನ್ನು ವಿವೇಕ ರೈಗಳು ಈ ಹಿಂದೆ ತಮ್ಮ ಬರಹವೊಂದರಲ್ಲಿ ಉಲ್ಲೇಖಿಸಿದ್ದನ್ನು ಓದಿದ್ದ ನೆನಪು ನನಗೆ.)
ಅಂದಹಾಗೆ, ಎಸ್.ವಿ.ಪಿ. ಅವರ ಜನ್ಮಸ್ಥಳ ವಿದ್ಯಾರಣ್ಯಪುರ. ನನ್ನ ಪ್ರಸ್ತುತ ವಾಸಸ್ಥಳವೂ ವಿದ್ಯಾರಣ್ಯಪುರ! ಆದರೆ, ಮೊದಲಿನದು ಶೃಂಗೇರಿಯ, ಸೊಬಗಿನ ವಿದ್ಯಾರಣ್ಯಪುರ; ನಾನಿರುವುದು ಬೆಂಗಳೂರಿನ ಕಾಂಕ್ರಿಟ್ ಕಾಡು ವಿದ್ಯಾರಣ್ಯಪುರ!

ಎಸ್ವಿಪಿ ಬಗ್ಗೆ ಮೌಖಿಕ ಪರಂಪರೆಯಲ್ಲಿ ನೂರಾರು ನೆನಪುಗಳಿವೆ.ಮುಂದಿನ ವಾರ ಅವರ ಬಗ್ಗೆ ನನ್ನ ಬ್ಲಾಗಿನಲ್ಲಿ ಶಿಷ್ಯನಾಗಿ ಒಂದು ಲೇಖನ ಹಾಕುತ್ತೇನೆ.

ಎಸ್.ವಿ.ಪಿ. ಅವರನ್ನು ಕುರಿತ ನಿಮ್ಮ ಲೇಖನ ಸ್ವಲ್ಪ ಸಮಯ ಮನಸ್ಸನ್ನು ಆರ್ದ್ರಗೊಳಿಸಿತು (ಎಸ್. ವಿ. ಪಿ. ಅವರಷ್ಟು ಬದುಕಿನ ಕಹಿಯನ್ನು ಉಂಡವರು ಮತ್ತೊಬ್ಬರಿಲ್ಲ ಎಂದು ಕಾಣುತ್ತದೆ); ಮತ್ತು ನನ್ನನ್ನು ಮಹಾರಾಜಾಸ್ ಕಾಲೇಜಿಗೆ ಒಯ್ದಿತು. ೫೪-೫೫ ಮತ್ತು ೫೫-೫೬ ಈ ಎರಡು ವರ್ಷಗಳಲ್ಲಿ ಕನ್ನಡ ಮೈನರ್ ತೆಗೆದುಕೊಂಡ ನಾನು ಎಸ್. ವಿ. ಪಿ. ಅವರ ವಿದ್ಯಾರ್ಥಿಯಾಗುವ ಭಾಗ್ಯ ಪಡೆದಿದ್ದೆ. ನೀವು ಗುರುತಿಸಿರುವಂತೆ, ತಮ್ಮ ಬದುಕಿನ ವಿಷವನ್ನು ಮರೆಯಲು ತರಗತಿಗಳಲ್ಲಿ ಸ್ವಲ್ಪ ’obscene’ ಎನ್ನಬಹುದಾದ ಜೋಕುಗಳನ್ನು ನಮ್ಮೊಡನೆ ಹಂಚಿಕೊಳ್ಳುತ್ತಿದ್ದರು.
ಮೊದಲನೆಯ ವರ್ಷವೆಂದು ಕಾಣುತ್ತದೆ; ಹರಿಹರನ “ಗಿರಿಜಾ ಕಲ್ಯಾಣ”ದ (“ನಂಬಿಯಣ್ಣನ ರಗಳೆ”ಯೋ?) ಒಂದು ಪ್ರಸಂಗ. ಅಲ್ಲಿ ಒಂದು ಸಾಲು ಹೀಗೆ ಬರುತ್ತದೆ: “ಪಿಂತೆಲ್ಲಮಂ ನಿತಂಬಂ.” ಇದನ್ನು ನಿಧಾನವಾಗಿ ಎರಡು ಬಾರಿ ಓದಿದ ಎಸ್.ವಿ.ಪಿ. “ಮುಂತೆಲ್ಲಮುಂ ….?” ಎಂದು ನಮ್ಮನ್ನು ಪ್ರಶ್ನಾರ್ಥಕವಾಗಿ ನೋಡಿದರು. ನಾವು ಸುಮ್ಮನಿದ್ದಾಗ ಅವರೇ ಹೀಗೆ ಆ ಸಾಲನ್ನು ಮುಗಿಸಿದರು: “ಮುಂತೆಲ್ಲಮುಂ ಯೋನಿ.” ಸಂಕೋಚ-ಕುತೂಹಲ-ಗಾಬರಿ ಇವೆಲ್ಲಾ ಭಾವನೆಗಳಿಂದ ಆಹತರಾದ ನಾವು ಒಬ್ಬರೊಬ್ಬರ ಮುಖ ನೋಡಲೂ ಆಗದೆ ನೆಲ ನೋಡುತ್ತಿದ್ದೆವು — ಕಾರಣ, ನಮ್ಮ ಆ ಚಿಕ್ಕ ತರಗತಿಯಲ್ಲಿ ವಿದ್ಯಾರ್ಥಿನಿಯರೂ ಇದ್ದರು.

ಪ್ರೊಫೆಸರ್ ರಾಮಚಂದ್ರನ್ ,ಮಾಹಿತಿಗಾಗಿ ಧನ್ಯವಾದ.ಎಸ್ವಿಪಿ ಜೋಕ್ ಗಳ ಭಂಡಾರ ಅವರ ವಿದ್ಯಾರ್ಥಿಗಳ ನೆನಪಿನ ಕೋಶಗಳಲ್ಲಿ ಹುದುಗಿವೆ.ಶೃಂಗಾರದ ಬಗ್ಗೆ ನಮಗಿದ್ದ ಅಳುಕನ್ನು ತಮ್ಮ ತರಗತಿಯ ಪಾಠಗಳಲ್ಲಿ ನಿವಾರಿಸುತ್ತಿದ್ದರು.


Where's The Comment Form?

Liked it here?
Why not try sites on the blogroll...

%d bloggers like this: