ಅಗ್ರಾಳ ಲೇಖನ ಮಾಲೆ : ಬಾನಬೆಟ್ಟಿನಲ್ಲಿ ಬಿತ್ತಿದ್ದು, ಬಾನು ಬುವಿಗಳನು ಬೆಸೆದದ್ದು

Posted on ಮಾರ್ಚ್ 15, 2010. Filed under: ನನ್ನ ಅಪ್ಪ.. |


1936ರಲ್ಲಿ ಶಾಲೆ ಬಿಟ್ಟು ಅಗ್ರಾಳಕ್ಕೆ ಬಂದೆ. ನಮ್ಮ ಕುಟುಂಬದ ಪಾಲಿಗೆ ಸಿಕ್ಕಿದ ಭೂಮಿ ಬಹಳ ಕಡಮೆ. ದೊರೆತದ್ದು ಬಾನಬೆಟ್ಟುವಿನ ಒಣಭೂಮಿ. ‘ಬಾನಬೆಟ್ಟು’ ಎಂದರೆ ಬಾನಿನ – ಆಕಾಶದ – ಅಂದರೆ ಮಳೆಯ ನೀರಿನಿಂದ ಮಾತ್ರವೇ ಕೃಷಿ ಮಾಡಬಹುದಾದ ಬೆಟ್ಟುಗದ್ದೆ. ಇದರ ಹತ್ತಿರ ಕೆರೆಗಳನ್ನು ತೋಡಿಸಿ, ಸ್ವಲ್ಪ ಅಡಕೆ ತೋಟ ಮಾಡಿದೆ. ಬೆಟ್ಟುಗದ್ದೆಗಳಲ್ಲಿ ಒಂದು ಬೆಳೆಯ ಭತ್ತದ ಕೃಷಿ ಮಾಡಿದೆ. ಈ ಕೃಷಿಯ ಉತ್ಪನ್ನ ವರ್ಷದಲ್ಲಿ ಆರು ತಿಂಗಳ ಜೀವನೋಪಾಯಕ್ಕೇ ಸಾಕಾಗುತ್ತಿರಲಿಲ್ಲ. ಇದಕ್ಕಾಗಿ ಸಣ್ಣಪುಟ್ಟ ವ್ಯಾಪಾರಗಳನ್ನು ಮನೆಯಲ್ಲೇ ಮಾಡಿದೆ. ಕಾಲಕ್ಕೆ ಅನುಗುಣವಾಗಿ ಸಣ್ಣ ಸಣ್ಣ ಕಸುಬುಗಳಲ್ಲಿ ತೊಡಗಿಸಿಕೊಂಡೆ.

ಆದರೂ ಮಣ್ಣಿನ ಸಂಬಂಧ ನನಗೆ ಎಲ್ಲಕ್ಕಿಂತಲೂ ಪ್ರಿಯವಾದದ್ದು. ಅದು ಬರೇ ಹಣ ತರುವ ಮೂಲವಾಗಿ ಮಾತ್ರ ನನ್ನ ಪಾಲಿಗೆ ಇರಲಿಲ್ಲ. ಅಗ್ರಾಳದ ಮಣ್ಣಿನಲ್ಲಿ ಆ ಕಾಲಕ್ಕೆ ಆ ಊರಿಗೆ ಅಪೂರ್ವವಾದ ಹಣ್ಣಿನ ಬೆಳೆಗಳನ್ನು ಬೆಳೆಸಿದೆ. ಮಾವು, ಚಿಕ್ಕು, ಅನಾನಾಸು, ಪಪ್ಪಾಯಿ ಗಿಡಗಳನ್ನು ನೆಟ್ಟು ಹಣ್ಣುಗಳನ್ನು ಪಡೆದೆ. ಆದರೆ ಈ ಹಣ್ಣುಗಳನ್ನು ಮಾರಾಟ ಮಾಡಲಿಲ್ಲ, ಮನೆಯಲ್ಲಿ ಎಲ್ಲರಿಗೆ ಬಂದವರಿಗೆ ‘ಪಲಾಹಾರ’ದ ಸವಿಯನ್ನು ಉಣ್ಣಿಸಿದೆ. ನಾನೂ ಉಂಡೆ. ಅಗ್ರಾಳದ ಮನೆಯ ಅಂಗಳದಲ್ಲಿ ಹೂ ಗಿಡಗಳನ್ನು ತಂದು ನೆಟ್ಟು ಬೆಳೆಸಿದೆ. ವಿವಿಧ ಜಾತಿಯ ದಾಸವಾಳಗಳು, ಗುಲಾಬಿ ಗಿಡಗಳು, ಬೋಗನ್ವಿಲ್ಲಾಗಳು ಮನೆಯ ಸುತ್ತಲೂ ಆವರಿಸಿದುವು. ಫ್ಯಾಶನ್ ಫ್ರುಟ್ ಎನ್ನುವ ಹಣ್ಣನ್ನು ಬೆಳೆಸಿದೆ. ಶರ್ಬತ್ತಿಗೆ ಅದು ಬಹಳ ಉಪಯುಕ್ತವಾಗಿತ್ತು. ಚಕ್ಕೂರ್ ಮನೀಸ್ ಎಂಬ ಸೊಪ್ಪಿನ ಗಿಡವನ್ನು ಬೆಳೆಸಿದೆ. ಅದರ ಸೊಪ್ಪು ಪದಾರ್ಥಕ್ಕೆ ಬಹಳ ರುಚಿಕರ. ಆಹಾರವಾಗಿ ಮತ್ತು ಔಷಧಕ್ಕಾಗಿ ಇಂಗಿನ ಗಿಡಗಳನ್ನು ನೆಟ್ಟೆ.

ಎಲ್ಲ ಹಳ್ಳಿಯ ಮನೆಗಳಂತೆ ಕೋಳಿ, ನಾಯಿ, ಬೆಕ್ಕುಗಳನ್ನು ಸಾಕಿದೆವು. ಜೊತೆಗೆ ಗಿಳಿ, ಬಾತುಕೋಳಿಗಳು ಮತ್ತು ಗಿನಿಫೌಲ್ ಎಂಬ ಅಪೂರ್ವ ಹಕ್ಕಿಗಳನ್ನು ಸಾಕಿದೆವು.

ಸಣ್ಣ ಹಿಡುವಳಿದಾರರಾಗಿರುವ ರೈತರ ಆರ್ಥಿಕ ಸಂಕಷ್ಟಗಳನ್ನು ಸ್ವತಃ ಅನುಭವಿಸಿದ ನಾನು ರೈತ ಸೇವಾ ಸಂಘಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಂಡೆ. ವಿಟ್ಲದ ರೈತ ಸೇವಾ ಸಂಘ, ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದೆ. ಆಗ ವಿಠಲದಾಸ ಶೆಟ್ಟಿ ಅವರು ಅದರ ಅಧ್ಯಕ್ಷರಾಗಿದ್ದರು. ಪುತ್ತೂರು ಬ್ಲಾಕ್ ಡೆವಲಪ್ಮೆಂಟ್ ಕಮಿಟಿಯ ಸದಸ್ಯನಾಗಿ ನನ್ನ ನೇಮಕವಾಯಿತು. ಆ ನೆಲೆಯಲ್ಲಿ 1958-59ರಲ್ಲಿ ರೈತ ಮುಂದಾಳುಗಳ ಶೈಕ್ಷಣಿಕ ಪ್ರವಾಸದ ತಂಡದ ನಾಯಕನಾಗಿ ನಾನು ಕಾರ್ಯ ನಿರ್ವಹಿಸಿದೆ. ಅದರ ಕುರಿತು ‘ಪ್ರವಾಸಾನುಭವ’ ಎಂಬ ಗ್ರಂಥವನ್ನು ಬರೆದೆ.

ಆಹಾರಕ್ಕಾಗಿ ಬೇಹಾರ

1937-38ರ ಅವಧಿಯಲ್ಲಿ ಅಗ್ರಾಳದಲ್ಲಿ ನೆಲೆಸಿದ್ದಾಗ, ಕೃಷಿಯ ಉತ್ಪನ್ನ ಹೊಟ್ಟೆ ತುಂಬಿಸಲು ಸಾಲದಾದಾಗ, ಮನೆಯಲ್ಲಿ ಇದ್ದುಕೊಂಡೇ ಸಣ್ಣಪುಟ್ಟ ವ್ಯಾಪಾರ ಸುರು ಮಾಡಿದೆ. ಆ ಕಾಲದಲ್ಲಿ ಓಲೆಬೆಲ್ಲ ಮಾಡುವವರಿಗೆ ಮಳೆಗಾಲದಲ್ಲಿ ಅವರ ಆರ್ಥಿಕ ಸಂಕಷ್ಟದ ಕಾಲದಲ್ಲಿ ಮುಂಗಡ ಹಣ ಕೊಡುತ್ತಿದ್ದೆ. ಅದಕ್ಕೆ ಪ್ರತಿಯಾಗಿ ಓಲೆಬೆಲ್ಲ ತಯಾರಾದಾಗ ಅವರು ಬೆಲ್ಲ ಕೊಡಬೇಕಾಗಿತ್ತು. ಹೀಗಾಗಿ ಮನೆಗೆ ಬೇಕಾದ ಖರ್ಚಿನ ಬೆಲ್ಲ ಈ ರೀತಿ ದೊರೆಯುತ್ತಿತ್ತು, ಆರ್ಥಿಕ ಹೊರೆ ಕಮ್ಮಿಯಾಗುತ್ತಿತ್ತು. 1956ರಲ್ಲಿ ಅಗ್ರಾಳದ ನಮ್ಮ ಮನೆಯಲ್ಲೇ ರೇಶನ್ ಅಂಗಡಿಯೊಂದನ್ನು ನಡೆಸಿದೆ. ಆಗ ಅದರ ಹೆಸರು‘Relief shop’ಎಂದಾಗಿತ್ತು. ಆಗ ಆಹಾರ ಧಾನ್ಯಗಳ ಕೊರತೆ ಬಹಳ ಇತ್ತು. ಸುಮಾರು ಒಂದೂವರೆ ವರ್ಷ ಈ ಅಂಗಡಿ ನಡೆಸಿದೆ. ಆ ಕಾಲದಲ್ಲಿ ಕಳ್ಳಸಂತೆಯಲ್ಲಿ ಧಾನ್ಯ ಮಾರಾಟ ಮಾಡದೆ ರೇಶನ್ ಅಂಗಡಿಯಲ್ಲೇ ಒದಗಿಸಿದ ಅಪೂರ್ವ ದಾಖಲೆ ನನ್ನದಾಗಿತ್ತು. ಹಾಗಾಗಿ ಇಡೀ ಗ್ರಾಮ ನನ್ನನ್ನು ಹೊಗಳಿತು, ಮೆಚ್ಚಿತು.

ಮಳೆಗಾಲದಲ್ಲಿ ಭತ್ತದವರಿಗೆ ಮುಂಗಡ ಹಣ ಕೊಡುತ್ತಿದ್ದೆ. ಕೊಯಿಲು ಆದ ಮೇಲೆ ಅವರು ಭತ್ತ ಕೊಡುತ್ತಿದ್ದರು. ವ್ಯಾಪಾರ ಮಾಡುವ ಉದ್ದೇಶದಿಂದ ಒಂದು ಭಂಡಸಾಲೆಯನ್ನು ಕಟ್ಟಿದೆ. ಆದರೆ ಅದರಲ್ಲಿ ವ್ಯಾಪಾರ ಮಾಡಲು ಆಗಲಿಲ್ಲ.

ಜೀವವಿಮೆಯ ಏಜಂಟ್ ಆಗಿ ಕೆಲಸ ಮಾಡಿದೆ. ಆಗ ಪುತ್ತೂರಿನ ರಾಜಾರಾಮ ಭಟ್ರವರು ನನ್ನ ಡೆವಲಪ್ಮೆಂಟ್ ಆಫೀಸರ್ ಆಗಿದ್ದರು.

ಜಮಖಾನೆ ಮತ್ತು ಬೆಡ್ ಶೀಟ್ ಗಳನ್ನು ಪರ ಊರುಗಳಿಂದ ತರಿಸಿ, ಊರವರಿಗೆ ಮಾರಿ ಕೊಡುತ್ತಿದ್ದೆ. ಇದಕ್ಕೆ ಕಂಪೆನಿಯಿಂದ ನನಗೆ ಕಮಿಶನ್ ದೊರೆಯುತ್ತಿತ್ತು. ಇಂತಹ ಜಮಖಾನೆ ಮತ್ತು ಬೆಡ್ ಶೀಟ್ ಗಳ  ಸ್ಯಾಂಪಲ್ ಗಳ ಹೊತ್ತಗೆಗಳನ್ನು ಹೊತ್ತುಕೊಂಡು ಮನೆಗಳಿಗೆ ಹೋಗುತ್ತಿದ್ದೆ. ಆದರೆ ಇದರಲ್ಲಿ ದೊರೆಯುತ್ತಿದ್ದ ಹಣ ಮಾತ್ರ ಅತ್ಯಲ್ಪ.

ಮುಂದಿನ ಭಾಗ : ವರ್ಣ ಮಾತ್ರಂ ಕಲಿಸಿದಾತಂ ಗುರು

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

4 Responses to “ಅಗ್ರಾಳ ಲೇಖನ ಮಾಲೆ : ಬಾನಬೆಟ್ಟಿನಲ್ಲಿ ಬಿತ್ತಿದ್ದು, ಬಾನು ಬುವಿಗಳನು ಬೆಸೆದದ್ದು”

RSS Feed for ಬಿ ಎ ವಿವೇಕ ರೈ Comments RSS Feed

ನಮಸ್ತೆ,

‘ಮಳೆಯಾಶ್ರಿತ ಕೃಷಿಯ ಅನುಭವ, ಹಣ್ಣುಗಳ ವೈವಿಧ್ಯ, ಕೈತೋಟ ಸಂಸ್ಕೃತಿಯ ಪರಿ’ ವಾಹ್.. ತುಂಬಾ ಚೆನ್ನಾಗಿದೆ ಅನುಭವ. ಬಹುಶಃ ಮಳೆಯಾಶ್ರಿತ ಸಣ್ಣ ಹಿಡುವಳಿದಾರರಿಗಷ್ಟೇ ಇಂಥ ಅನುಭವಗಳುಂಟಾಗಲು ಸಾಧ್ಯ. ಮಳೆಯಾಶ್ರಿತದಲ್ಲಿ ಹಣ್ಣು ಬೆಳಯುವವರು ಸಾಮಾನ್ಯವಾಗಿ ಹಣ್ಣುಗಳನ್ನು ಮಾರುವುದಿಲ್ಲ. ಬೇಕಾದರೆ ದಾನ ಕೊಡ್ತಾರೆ. ಆದರೆ ಈ ಮಾತು ಪ್ರಸ್ತುತಕ್ಕೆ ಅನ್ವಯವಾಗುತ್ತದೆಯೋ ಇಲ್ಲವೋ ? ಅದು ಹೇಳೋದು ಕಷ್ಟ.

ನಮಸ್ಕಾರ.ಥ್ಯಾಂಕ್ಸ್. ನಿಮ್ಮ ಮಾತು ನಿಜ.ಆ ಕಾಲದ ಮೌಲ್ಯಗಳೇ ಹಾಗಿದ್ದುವು.

i am very happey to see your blog wish u happey uagadifestival iam retired official asst.directer industries and commece state govt served 36.years good luck

Dear Shri Sathyakumar,
Best thanks for your nice words.


Where's The Comment Form?

Liked it here?
Why not try sites on the blogroll...

%d bloggers like this: