ಕನ್ನಡ ವಿಶ್ವವಿದ್ಯಾಲಯ ,ಹಂಪಿ :ವಿಜಯನಗರ ಪುನಶ್ಚೇತನಕ್ಕೆ ಎಂಬತ್ತು ಎಕರೆ

Posted on ಫೆಬ್ರವರಿ 23, 2010. Filed under: Uncategorized |


ಕನ್ನಡ ವಿಶ್ವವಿದ್ಯಾಲಯ,ಹಂಪಿಯ ಎಂಬತ್ತು ಎಕರೆ ಭೂಮಿಯನ್ನು ಈಗತಾನೆ ರಚನೆಯಾದ ‘ವಿಜಯನಗರ ಪುನಶ್ಚೇತನ ಪ್ರತಿಷ್ಠಾನ ‘ಕ್ಕೆ ಹಸ್ತಾಂತರಿಸುವ ನಿರ್ಣಯದ ಬಗ್ಗೆ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಗಮನಿಸಿದಾಗ ಆತಂಕ ಆಯಿತು.ಕನ್ನಡ ವಿಶ್ವವಿದ್ಯಾಲಯ,ಹಂಪಿಯ ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಹಾಗೂ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಟಿ. ಆರ್. ಚಂದ್ರಶೇಖರ್ ಅವರು  ಈವಿಷಯಕ್ಕೆ ಸಂಬಂಧಿಸಿದಂತೆ  ಕಳುಹಿಸಿದ ಎಲ್ಲ ದಾಖಲೆಗಳ ಕಟ್ಟು ನಿನ್ನೆ ತಾನೇ ನನ್ನ ಕೈಸೇರಿತು.

ಶ್ರೀಕೃಷ್ಣ ದೇವರಾಯನ ಪಟ್ಟಾಭಿಷೇಕದ ೫೦೦ನೆಯ ವರ್ಷಾಚರಣೆಯ ಹಿನ್ನೆಲೆಯಲ್ಲಿ ,ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಪುನರ್ ನೆನಪಿಸುವ ಹಾಗೂ ಸಂಗೀತ, ಚಿತ್ರಕಲೆ ,ನಾಟ್ಯ ,ನಾಟಕ ಇತ್ಯಾದಿ ಭಾರತೀಯ ಸಂಸ್ಕೃತಿಯ ವೈವಿಧ್ಯವನ್ನು ಪ್ರೋತ್ಸಾಹಿಸಿ ಪ್ರೇರಣೆ ನೀಡುವ ದೃಷ್ಟಿಯಿಂದ ಹಾಗೂ ವಿಜಯನಗರ ಸಾಮ್ರಾಜ್ಯದಲ್ಲಿ ನಡೆಸಿದ ಚಟುವಟಿಕೆಗಳನ್ನು ಬಿಂಬಿಸುವ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಹಂಪಿ,ಕಮಲಾಪುರ ಇಲ್ಲಿ ‘ವಿಜಯನಗರ ಪುನಶ್ಚೇತನ ಪ್ರತಿಷ್ಠಾನ (ಟ್ರಸ್ಟ್ ) ಅನ್ನು ಕರ್ನಾಟಕ ಸರಕಾರ ರಚಿಸಿದೆ.೧೮ ಸದಸ್ಯರನ್ನು ಉಳ್ಳ ಈ ಆದೇಶ ಜನವರಿ ೧, ೨೦೧೦ರನ್ದು ಹೊರಬಿದ್ದಿದೆ.

೨೨-೧-೨೦೧೦ರ ಸರಕಾರೀ ಆದೇಶದಲ್ಲಿ ಹಂಪಿಯ ಕನ್ನಡ ವಿವಿಯ ವ್ಯಾಪ್ತಿಯಲ್ಲಿ ಇರುವ ೮೦ ಎಕರೆ ಜಮೀನನ್ನು ,ಒಂದು ಅಂತರರಾಷ್ಟ್ರೀಯ ಮಟ್ಟದ ಉದ್ಯಾನವನ ,ಸಂಶೋಧನಾ ಕೇಂದ್ರ ,ಶ್ರೀ ಕೃಷ್ಣದೇವರಾಯನ ಪುತ್ಥಳಿ ಸ್ಥಾಪನೆ ಗಾಗಿ ವಿಜಯನಗರ ಪುನಶ್ಚೇತನ ಪ್ರತಿಷ್ಠಾನಕ್ಕೆ ಹಸ್ತಾಂತರಿಸಲು ಅನುಮತಿ ನೀಡಿ ಆದೇಶಿಸಿದೆ.ಇದೆ ಆದೇಶದ ಪ್ರಸ್ತಾವನೆಯಲ್ಲಿ ಕನ್ನಡ ವಿವಿ, ಹಂಪಿಯ ಕುಲಪತಿಗಳು ಇದಕ್ಕೆ ಸಮ್ಮತಿಸಿ ,೮.೯.೨೦೦೯ರನ್ದು ಸರಕಾರಕ್ಕೆ ಬರೆದ ಪತ್ರದ ಉಲ್ಲೇಖ ಇದೆ.

ಹೀಗೆ ಒಂದು ಮಹತ್ವದ ನಿರ್ಧಾರ ಇಷ್ಟು ಅವಸರದಲ್ಲಿ ಕಾರ್ಯರೂಪಕ್ಕೆ ಬರುವುದು ಆತಂಕ ಉಂಟುಮಾಡುತ್ತದೆ.ಪ್ರಸ್ತಾವಿತ ಮಾಡಲು ಉದ್ದೇಶಿಸಿರುವ  ಎಲ್ಲ ಕೆಲಸಗಳನ್ನು ಕನ್ನಡ ವಿವಿಯೇ ಮಾಡಬಹುದು.ಕನ್ನಡ ವಿವಿಯಲ್ಲಿ ಇರುವ ಸಂಗೀತ ,ಚಿತ್ರಕಲೆ ,ಶಿಲ್ಪ ,ಇತಿಹಾಸ, ಪುರಾತತ್ವ ,ಸಾಹಿತ್ಯ ಮುಂತಾದ ವಿಭಾಗಗಳಿಗೆ ಹೆಚ್ಚಿನ ಸಿಬ್ಬಂದಿ ಅನುದಾನ ಕೊಟ್ಟು ಇವನ್ನು ಮಾಡಿಸಬಹುದು.ಸಂಗೀತ ಮತ್ತು ನೃತ್ಯಕ್ಕೆ ಪ್ರತ್ಯೇಕ ವಿವಿ ಆರಂಭ ಆಗಿದೆ.ಇಲ್ಲಿನ ಅನೇಕ ಯೋಜನೆಗಳನ್ನು ಆ ವಿವಿ ಮೂಲಕ ಮಾಡಿಸಬಹುದು.ಜೊತೆಗೆ ಇಡೀ ಯೋಜನೆಯ ಉದ್ದೇಶಗಳು ಸರಿಯಾಗಿ ಎಲ್ಲೂ ಬಿಂಬಿತ ಆಗಿಲ್ಲ.ಉದ್ಯಾನವನ ರೆಸಾರ್ಟ್ ಆಗಬಹುದು ಎನ್ನುವ ಭಯ ಇದ್ದೆ ಇರುತ್ತದೆ.ಕನ್ನಡ ವಿವಿಯಲ್ಲೇ ಇರುವ ಅನೇಕ ತಜ್ಞರು ಈ ಕುರಿತು ಸರಿಯಾಗಿ ಯೋಜನೆ  ರೂಪಿಸಬಲ್ಲವರಾಗಿದ್ದಾರೆ.

ಕನ್ನಡ ವಿಶ್ವವಿದ್ಯಾಲಯ ,ಹಂಪಿಯ ವಿದ್ಯಾರಣ್ಯ ಆವರಣದಲ್ಲಿ ವಿಸ್ತಾರವಾದ ಜಮೀನು ನೋಡುವವರ ಕಣ್ಣು ಕುಕ್ಕುತ್ತದೆ.ನಾನು ಅಲ್ಲಿ ಕುಲಪತಿ ಆಗಿದ್ದ ಅವಧಿಯಲ್ಲಿ (ಸಪ್ಟಂಬರ ೨೦೦೪ರಿನ್ದ ಜೂನ್ ೨೦೦೭ )ಆಗಿನ ಬಳ್ಳಾರಿ ಜಿಲ್ಲಾಧಿಕಾರಿ ಆಗಿದ್ದ ಅರವಿಂದ ಶ್ರೀವಾತ್ಸವ ಅವರ ಸಹಕಾರದಿಂದ ,ಇಡೀ ಆವರಣದ ಜಮೀನಿನ ರೆವಿನ್ಯೂ ಸರ್ವೇ ಮಾಡಲಾಯಿತು.ಸ್ವಲ್ಪ ಮಟ್ಟಿಗೆ ಜಮೀನಿನ ಕೆಲವು ಭಾಗ ಆಗಲೇ ಕೈತಪ್ಪಿಹೋಗಿತ್ತು .ಆದರೂ ಬಳ್ಳಾರಿ -ಕಮಲಾಪುರ-ಹಂಪಿ ರಸ್ತೆಯಲ್ಲಿ ಬರುವವರಿಗೆ ವಿವಿಯ ವಿಶಾಲ ಖಾಲಿ ಜಾಗ ಆಸೆ ಬರಿಸುತ್ತದೆ..ಹಾಗಾಗಿಯೇ ಕೆಲವೇ ರೆಸಾರ್ಟ್ ಗಳು ಸುತ್ತಮುತ್ತ ಎದ್ದುಬಂದಿವೆ.ಈಗ ೮೦ ಎಕರೆ ಜಮೀನು ಅರಣ್ಯಪ್ರದೇಶದ ಪಕ್ಕ ಇರುವ ಕಾರಣ ಇನ್ನಷ್ಟು ಬೆಲೆಬಾಳುತ್ತದೆ.

ನಾನು ಕುಲಪತಿ ಆಗಿದ್ದ ಅವಧಿಯಲ್ಲಿ ಇಂತಹ ಎರಡು ಒತ್ತಡಗಳು ನನ್ನ ಮೇಲೆ ಬಿದ್ದಿದ್ದವು.ಬಳ್ಳಾರಿ ಜಿಲ್ಲೆ ಯ ಒಂದು  ಬೃಹತ್ ಕಾರ್ಖಾನೆಯವರು ಅಭಿವೃದ್ದಿಯ ಪರೋಕ್ಷ ರೂಪದಲ್ಲಿ ಜಾಗ ಕೇಳಿದ್ದರು.ಅದರಿಂದ ವಿವಿಗೆ ದೊಡ್ಡ ಮೊತ್ತದ ಹಣ ಕೂಡಾ ಬರುತ್ತಿತ್ತು.೨೦೦೪ ರಿಂದ ೨೦೦೬ರ ಅವಧಿಯಲ್ಲಿ ಕನ್ನಡ ವಿವಿಯಲ್ಲಿ ತುಂಬಾ ಹಣದ ಮುಗ್ಗಟ್ಟು ಇತ್ತು.ಸಂಬಳ ಕೊಡಲು ಕಷ್ಟ ಆಗುತ್ತಿತ್ತು.ಆದರೆ ತಾತ್ಕಾಲಿಕ ಲಾಭಕ್ಕಿಂತ ವಿವಿಯ ಶಾಶ್ವತ ಆಸ್ತಿ ಮುಖ್ಯ ಎನ್ನುವ ಕಾರಣಕ್ಕೆ ನಾನು ಅವರ ಕೋರಿಕೆಯನ್ನು ತಿರಸ್ಕರಿಸಿದೆ.ಅವರ ಅಧಿಕಾರಿ ನನ್ನನ್ನು ಭೇಟಿ ಆಗುವ ಅವಕಾಶವನ್ನೇ ಅಸೌಜನ್ಯದಿಂದ ನಾನು ನಿರಾಕರಿಸಿದೆ.ಇನ್ನೊಂದು , ಸರಕಾರದ ಕಡೆಯಿಂದ ಬಂದ ಒತ್ತಡ .ಬಳ್ಳಾರಿ ಬಳಿಯ ವನ್ಯಸಂರಕ್ಷನಾ ಘಟಕದ ಸ್ಥಳಾಂತರದ ಜೊತೆಗೆ ಕನ್ನಡ ವಿವಿಯ ಆವರಣದ ಜಾಗವನ್ನು ,ಸರಕಾರದ ಅರಣ್ಯ ಇಲಾಖೆಗೆ ಬಿಟ್ಟುಕೊಡುವ ಪ್ರಸ್ತಾವ.ತುಂಬಾ ಸೌಜನ್ಯದಿಂದ ಸರಕಾರದ ವರಿಷ್ಟರ ಪ್ರಸ್ತಾವನೆಯನ್ನು ನಾನು ತಿರಸ್ಕರಿಸಿದೆ.ಈ ಎರಡೂ ಸಂಗತಿಗಳನ್ನು ಎಲ್ಲೂ ನಾನು ದಾಖಲೆ ಮಾಡಿಲ್ಲ. ಆದರೆ ವಿವಿಯ ಆಸ್ತಿ ಯನ್ನು ಬಿಟ್ಟುಕೊಟ್ಟಿಲ್ಲ.

ಹಂಪಿ ಅಭಿವೃದ್ಧಿ ಪ್ರಾಧಿಕಾರವನ್ನು ಕರ್ನಾಟಕ ಸರಕಾರ ಸ್ಥಾಪಿಸಿದೆ.ಅದಕ್ಕೆ ಸರಿಯಾದ ಸವಲತ್ತು ಸಿಬ್ಬಂದಿಯನ್ನು ಹಿಂದಿನ ಮತ್ತು ಇಂದಿನ ಸರಕಾರಗಳು ಕೊಟ್ಟಿಲ್ಲ. ಯುನೆಸ್ಕೋ ತಂಡ ಹಂಪಿಗೆ ಬಂದಾಗ ನಮ್ಮ ವಿವಿಯಲ್ಲಿ , ಮತ್ತು ಹಂಪಿಯಲ್ಲಿ ಅವರೊಂದಿಗೆ ನಾನು ಸಾಕಷ್ಟು ಬಾರಿ ಚರ್ಚಿಸಿದ್ದೆ.ಅವರ ಪ್ರಕಾರ ಬಳಾರಿ ಜಿಲ್ಲೆಯ ಬಹುಭಾಗ, ಅದರ ಯೋಜನಾ ವ್ಯಾಪ್ತಿಗೆ ಬರುತ್ತದೆ.ತಿರುಳಿನ ಭಾಗ, ಮಧ್ಯಂತರ ಭಾಗ ಮತ್ತು ಅಂಚಿನ ಭಾಗ ಎಂದು ಹಂಪಿಯ ಯೋಜನೆಯನ್ನು  ರೂಪಿಸಲಾಗಿದೆ.ಅವನ್ನೆಲ್ಲ ಸಮರ್ಪಕವಾಗಿ  ಅಧ್ಯಯನ ಮಾಡದೆ ,ಉತ್ಸವ ಮಾಡಿದಂತೆ ದೀರ್ಘಕಾಲೀನ  ಯೋಜನೆಗಳನ್ನು ಅವಸರದಿಂದ ಕೈಗೆತ್ತಿ ಕೊಳ್ಳಬಾರದು.

ಕನ್ನಡ ವಿವಿಯ ಆಸ್ತಿ ನಮ್ಮಂತಹ ಕುಲಪತಿಗಳದ್ದೂ ಅಲ್ಲ ,ಅಧಿಕಾರಸ್ಥ ರಾಜಕಾರಣಿಗಳದ್ದೂ ಅಲ್ಲ. ಅದು ಎಲ್ಲ ಕನ್ನಡಿಗರ ಸೊತ್ತು.ಅದನ್ನು ಉಳಿಸಿಕೊಳ್ಳುವುದು ಎಲ್ಲ ಕನ್ನಡಿಗರ ಕರ್ತವ್ಯ.ಅಂತಹ ವಿಶಾಲ ಕನ್ನಡಿಗರಲ್ಲಿ ಕುಲಪತಿಗಳು, ಸರಕಾರ, ಜನಪ್ರತಿನಿಧಿಗಳು ,ಅಧಿಕಾರಿಗಳು ,ಅಧ್ಯಾಪಕರು ,ನೌಕರರು ,ಊರವರು -ಎಲ್ಲ ಸೇರುತ್ತಾರೆ.ಅದು ಕನ್ನಡದ ಕೂಡುಕುಟುಂಬ.ಅದು ಇತಿಹಾಸವನ್ನು ಮಾತ್ರ ಅಲ್ಲ, ಭವಿಷ್ಯವನ್ನೂ ನೋಡಬೇಕು.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

5 Responses to “ಕನ್ನಡ ವಿಶ್ವವಿದ್ಯಾಲಯ ,ಹಂಪಿ :ವಿಜಯನಗರ ಪುನಶ್ಚೇತನಕ್ಕೆ ಎಂಬತ್ತು ಎಕರೆ”

RSS Feed for ಬಿ ಎ ವಿವೇಕ ರೈ Comments RSS Feed

Dear Sir,
I am extremely happy to see your comment on the burning problem of Kannada University right now. I did not Know the crisis that you had faced when you were the VC in KU, Hampi. There is a kind of tension is going on in the campus owing to the over handedness of some vested interests which are throwing all the norms and regulations of an autonomous institution. Lack of transparency in the decision making body thwart every idea of a democratic institution. I like your concern even though you were too busy in the projects in Germany.-vijay

Dear Professor Vijay,
Thanks for your comments.It is undemocratic to pressurise University for nonacademic reasons.Yes,I had many such pressures,which I withstood and protected the dignity and identity of KUH.I did not advertise it.I am confident that senior faculty like you will save the University from crisis,which you have done several times.You can mention about my blog to like minded people inside the campus and outside.
Viveka Rai

we have to oppose such a decission of the govt. Is this kannada seve!?

Nagesh,
Thanks for your support. We should always protect the interest of public institutions like Universities.

ಖಂಡಿತ ಸತ್ಯವಾದ ಮಾತು. ವಿಜಯನಗರ ಸಾಮ್ರಾಜ್ಯ . ಹಂಪಿ ಇತಿಹಾಸ ಪ್ರಸಿಧ್ಧವಾದ ಸ್ಥಳ. ಅದು ಎಲ್ಲ ಕನ್ನಡಿಗರ ಸ್ವತ್ತು.
..ಅದನ್ನು ರಕ್ಷಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ..ಹೊನ್ನಿನ ಆಸೆಗೆ ಅದನ್ನು ಕೆಡವಿ ಹಾಳುಮಾಡುತ್ತಿದ್ದಾರೆ,,ಇದರ ಬಗ್ಗೆ ಸರ್ಕಾರ ಗಮನ ಕೊಡಬೇಕು.
ಹಾಗೆ ಸೂಕ್ತ ರಕ್ಷಣೆ ಒದಗಿಸಬೇಕು…!!!!!!!!


Where's The Comment Form?

Liked it here?
Why not try sites on the blogroll...

%d bloggers like this: