ಮೋಹನ್ ಗೆ ಪ್ರೀತಿಯಿಂದ…

Posted on December 7, 2009. Filed under: Uncategorized |


ಪ್ರಿಯ ಮೋಹನ್,

ನಮಸ್ಕಾರ

ಇನ್ನು ಕೆಲವು ಗಂಟೆಗಳಲ್ಲಿ ವುರ್ಜಬರ್ಗ್, ಜರ್ಮನಿ ಬಿಟ್ಟು ಬೆಂಗಳೂರು ಮಂಗಳೂರುಗಳ ಕಡೆಗೆ ಮುಖಮಾಡಿ ಹೊರಡುತ್ತಿದ್ದೇನೆ. ಇಲ್ಲಿ ಕಾಲೂರಿದ ಅಕ್ಟೋಬರ ೧೮ ರಿಂದ ಇವತ್ತಿನವರೆಗೆ ಕರ್ನಾಟಕದ ಜೊತೆಗಿನ ನನ್ನ ಸಂಪರ್ಕ ಮತ್ತು ಸಂಬಂಧವನ್ನು ಎಲ್ಲೂ ಕಡಿಯದಂತೆ ಇನ್ನಷ್ಟು ಗಟ್ಟಿಯಾಗಿಸಿದವರು ನೀವು. ನನ್ನ ಬ್ಲಾಗ್ ಸಿದ್ದಮಾಡಿ, ಅವಧಿಯೊಂದಿಗೆ ಅದಕ್ಕೆ ಕೊಂಡಿ ಕಲ್ಪಿಸಿದಿರಿ. ಕನ್ನಡ ಬ್ಲಾಗರ್ಸ್ ಕೂಟಕ್ಕೆ ಸೇರಿಸಿದಿರಿ. ಫೇಸ್ ಬುಕ್ ಕೂಡು ಕುಟುಂಬದ ಸದಸ್ಯ ಮಾಡಿ, ಊರಲ್ಲಿ ಇದ್ದಾಗ ಸಂಪರ್ಕಿಸಿದವರ ಜೊತೆ ಒಡನಾಡುವಂತೆ ಮಾಡಿದಿರಿ. ಯುವ ಮನಸ್ಸುಗಳ ಜೊತೆ ಸಂಪರ್ಕದಿಂದಾಗಿ ಮನಸ್ಸು ಸದಾ ಲವಲವಿಕೆಯಾ ಸುಖ ಕೊಡುತ್ತಿತ್ತು.

‘ಅವಧಿ ನನ್ನ ಊಟ ತಿಂಡಿ’ ಎನ್ನುವುದನ್ನು ಸುದ್ದಿ ಮಾಡಿದಿರಿ. ಇಲ್ಲಿನ ನನ್ನ ಅನುಭವಗಳನ್ನು ಬರೆಯಲು ಪ್ರೇರೇಪಿಸಿ , ಅದನ್ನು ‘ಅವಧಿ’ಯಲ್ಲಿ ಪ್ರಕಟಿಸಿ ನನ್ನ ಬರವಣಿಗೆ ಹೊಸ ಹಾದಿ ಹಿಡಿಯಲು ಅವಕಾಶ ಕಲ್ಪಿಸಿದಿರಿ. ಇಲ್ಲಿನ ಕನ್ನಡ ಪಾಠಗಳಿಗೆ ಪೂರಕವಾಗಿ ಕನ್ನಡ ಹಾಡುಗಳನ್ನು ಮತ್ತು ಮಾಹಿತಿಗಳನ್ನು ಮಿಂಚಿನ ಅಂಚೆಯಲ್ಲಿ  ರವಾನೆ ಮಾಡಿದಿರಿ. ಹಾಗಾಗಿ ಈಗ ಮಾನಸಿಕ ಕರ್ನಾಟಕದಿಂದ ಲೌಕಿಕ ಕರ್ನಾಟಕಕ್ಕೆ ಬರುತ್ತಿದ್ದೇನೆ. ಉಜಿರೆಯಲ್ಲಿ ೧೦ ರಿಂದ ೧೩ ರವರೆಗೆ ನಡೆಯುವ ವಿಶ್ವ ತುಳು ಸಮ್ಮೇಳನ, ೨೦ ರಂದು ಮಂಗಳೂರಿನಲ್ಲಿ ನಡೆಯುವ ಸಾರಾ ಅಬೂಬಕ್ಕರ್ ಅವರ ಅಭಿನಂದನ ಗ್ರಂಥ ಬಿಡುಗಡೆ -ಎರಡು ಮುಖ್ಯ ಕಾರ್ಯಕ್ರಮಗಳು.

೧೯ ರಂದು ಬೆಂಗಳೂರಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ‘ಮನೆಯಂಗಳದಲ್ಲಿ ಮಾತುಕತೆ’, ಉಳಿದ ವೇಳೆಗೆ ಸ್ನೇಹಿತರನ್ನು ಕಾಣುವುದು ಇತ್ಯಾದಿ . ಮತ್ತೆ ಜನವರಿ ಮೊದಲ ವಾರದಲ್ಲಿ ಜರ್ಮನಿಗೆ ಹಿಂದಿರುಗುತ್ತೇನೆ

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: